ಬೆಂಗಳೂರು, (www.thenewzmirror.com) ;
ಬಿಬಿಎಂಪಿ ಗಾತ್ರವನ್ನ ಇನ್ನಷ್ಟು ದೊಡ್ಡದು ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲ್ಸಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ಮುನ್ನುಡಿ ಎನ್ನುವಂತೆ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಜಾರಿಗೆ ಹೊರಟಿದೆ. ಈಗಾಗಲೇ ಅಧಿವೇಶನದಲ್ಲಿ ಮಸೂದೆಯನ್ನ ಮಂಡಿಸಿಯೂ ಆಗಿದೆ.
ಮಸೂದೆಗೆ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿಲ್ಲ. ಇತ್ತೀಚೆಗೆ ಜನಾಗ್ರಹ ಸಂಸ್ಥೆ ನಡೆಸಿದ ಸರ್ವೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ (GBG) ಗೆ 10 ಅಂಕಗಳಿಗೆ ಕೇವಲ 3.5 ಅಂಕ ಮಾತ್ರ ಲಭಿಸಿದೆ. ಸಾರ್ವಜನಿಕವಾಗಿ ಮೆಚ್ಚುಗೆ ಇಲ್ಲದ GBG ಮಸೂದೆಯನ್ನ ಜಾರಿ ಮಾಡಬಾರದು ಎನ್ನುವು ಕೂಗು ಇದೀಗ ಕೇಳಿ ಬರುತ್ತಿದೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರೋ ಮಾಹಿತಿ ಅಧ್ಯಯನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಅಮರೇಶ್, ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕೈ ಬಿಟ್ಟು ಮೊದಲು ಬಿಬಿಎಂಪಿ ಚುನಾವಣೆ ನಡೆಸಿ ಅಂತ ಮನವಿ ಮಾಡಿಕೊಂಡಿದ್ದಾರೆ.
ಮಸೂದೆಯಲ್ಲಿ ಆಧುನಿಕ ಬೆಂಗಳೂರು ನಿರ್ಮಿಸಲು ಪೂರಕವಾದ ಅಂಶಗಳಿಲ್ಲ.., ಹಾಗೆನೇ ಬ್ರಾಂಡ್ ಬೆಂಗಳೂರು ಸಮಿತಿ ನೀಡಿದ್ದ ಕೆಲವು ಶಿಫಾರಸ್ಸುಗಳನ್ನ ಸರ್ಕಾರ ನಿರ್ಲಕ್ಷ್ಯ ಮಾಡಿರೋದು ಕಂಡು ಬರುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಗುಣಮಟ್ಟದ ಜೀವನ ಹಾಗೂ ಮೂಲಭೂತ ಸೌಕರ್ಯ ನೀಡಲು GBG ಮಸೂದೆ ಪೂರಕವಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗ್ರೇಟರ್ ಬೆಂಗಳೂರು ಮಸೂದೆಯನ್ಮ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದನ್ನ ಗಮನಿಸಿದ್ರೆ ಉದ್ದೇಶ ಪೂರಕವಾಗಿಯೇ ಬಿಬಿಎಂಪಿ ಚುನಾವಣೆಯನ್ನ ಮುಂದೂಡುವ ಕಾರಣ ಇದೆ ಎನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜನಪ್ರಿಯವಲ್ಲದ ಜಿಬಿಜಿ ಮಸೂದೆ ಮಂಡನೆ ಮಾಡಿದಂತೆ ಕಾಣುತ್ತಿದೆ. ಕಳೆದ 4 ವರ್ಷದಿಂದ ಬಿಬಿಎಂಪಿ ಚುನಾವಣೆ ನಡೆಸದೇ ಇರುವ ಸರ್ಕಾರದ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಅಂತ ಅಸಮಧಾನ ಹೊರಹಾಕಿರುವ ಅಮರೇಶ್ ಕೂಡಲೇ ಜಿಬಿಜಿ ಮಸೂದೆ ಕೈ ಬಿಟ್ಟು ಬಿಬಿಎಂಪಿ ಚುನಾವಣೆಯನ್ನ ತಕ್ಷಣವೇ ನಡೆಸುವಂತೆ ಮನವಿ ಮಾಡಿದ್ದಾರೆ.