BBMP News | ಬಿಬಿಎಂಪಿ ಚುನಾವಣೆ ಸಕಾಲಕ್ಕೆ ಶ್ರೀ ಅದಿಶಕ್ತಿ ಅಮ್ಮನವರಿಗೆ ಮೊರೆ

ಬೆಂಗಳೂರು, (www.thenewzmirror.com) ;

ಬಿಬಿಎಂಪಿ ಕೇಂದ್ರ ಶ್ರೀ ಅದಿ ಶಕ್ತಿ ಅಮ್ಮನವರ ಸನ್ನಿಧಾನದಲ್ಲಿ ಬಿಬಿಎಂಪಿ ಚುನಾವಣೆ ಸಕಾಲಕ್ಕೆ ನಡೆಯಲಿ ಪ್ರಜಾಪ್ರಭುತ್ವ ಉಳಿಸಿ ಎಂದು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ವತಿಯಿಂದ  ಬಾಗಿನ ಸಮರ್ಪಣೆ ಮಾಡಿ ವಿಶೇಷ ಪೂಜೆ ನೇರವೆರಿಸಲಾಯಿತು.

RELATED POSTS

ಮಾಹಿತಿ ಹಕ್ಕು ಅಧ್ಯಯನ ವ್ಯವಸ್ಥಾಪಕ ಟ್ರಸ್ಟಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಟ್ರಸ್ಟಿ ವೀರೇಶ್, ಹಳ್ಳಿ ಮಕ್ಕಳ ಸಂಘದ ಕಾರ್ಯಾಧ್ಯಕ್ಷರಾದ ನಾಗೇಶ್ವರ್ ಬಾಬು, ಸಾರ್ವಜನಿಕ ಆಡಳಿತ ಅಧ್ಯಯನ ಕೇಂದ್ರದ ಉಪಾಧ್ಯಕ್ಷ ತಿಮ್ಮರೆಡ್ಡಿ, ಮಾಹಿತಿ ಹಕ್ಕು ಕಾರ್ಯಕರ್ತರ ರಾಜ್ಯ ಸಮಿತಿ ಸಂಚಾಲಕರಾದ ಮಲ್ಲಿಕಾರ್ಜುನ್ ರವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಅಮರೇಶ್, ಬಿಬಿಎಂಪಿ ಜನಪ್ರತಿನಿಧಿ ಆಡಳಿತ ಮುಗಿದು ಮೂರು ವರ್ಷ, ಹತ್ತು ತಿಂಗಳು ಆಯಿತು. ಆಡಳಿತಗಾರರ ನೇಮಕ ಮಾಡಿ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ರು.

ನಾಗರಿಕರ ಮೂಲಭೂತ ಸಮಸ್ಯೆ ಬಗೆಹರಿಸಲು ಸ್ಥಳೀಯ ಜನಪ್ರತಿನಿಧಿಗಳು ಇರಬೇಕು. ಕಳೆದ ನಾಲ್ಕು ವರ್ಷದಿಂದ ಜನಪ್ರತಿನಿಧಿಗಳೇ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. 198ವಾರ್ಡ್ ನಂತರ 243 ವಾರ್ಡ್ ಮಾಡಿದರು, 225 ವಾರ್ಡ್ ಈಗ ಗ್ರೇಟರ್ ಬೆಂಗಳೂರು ಐದು ಭಾಗಗಳಾಗಿ ಮಾಡಲು ಹೋರಟಿದ್ದಾರೆ ಅಂತ ಕಿಡಿಕಾರಿದ್ರು.

ಯಾವುದೇ ಸರ್ಕಾರ ಬಂದರು ಬಿಬಿಎಂಪಿ ಚುನಾವಣೆ ಮಾಡಲು ಮನಸ್ಸು ಮಾಡುವುದಿಲ್ಲ. ಚುನಾವಣೆ ಮುಂದೂಡಿಕೆ ತಂತ್ರಗಳನ್ನು ಮಾಡುತ್ತಾರೆ. ಸಾಮಾನ್ಯ ಜನರ ಸಮಸ್ಯೆಗಳು ಜನರ ಬಳಿಗೆ ಹೋಗಿ ಸಮಸ್ಯೆ ನಿವಾರಣೆ ಮಾಡಲು ಸ್ಥಳೀಯ ಜನಪ್ರತಿನಿಧಿಗಳಿಂದ ಸಾಧ್ಯ ಅಂತ ಅಭಿಪ್ರಾಯಪಟ್ರು.

ಐ.ಎ.ಎಸ್.ಅಧಿಕಾರಿಗಳು ಬೆಂಗಳೂರಿನ ಬಡಾವಣೆ ಭೇಟಿ ನೀಡಿರುವುದು ವಿರಳ, ವಾರ್ಡ್ ಕುರಿತು ಮತ್ತು ಸಮಸ್ಯೆಗಳ ಕುರಿತು ಅವರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಹೀಗಾಗು ಬಿಬಿಎಂಪಿ ಚುನಾವಣೆ ಮಾಡಿ ಎಂದು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

ಪ್ರಜಾಪ್ರಭುತ್ವ ಉಳಿವಿಗಾಗಿ, ನಾಗರಿಕರ ಸಮಸ್ಯೆ ಬಗೆಹರಿಸಲು ತತಕ್ಷಣ ಬಿಬಿಎಂಪಿ ಚುನಾವಣೆ ಮಾಡಬೇಕು ಎಂದು ದೇವರಲ್ಲಿ ಮೊರೆ ಹೋಗಿದ್ದೇವೆ ಎಂದು ಅಮರೇಶ್ ತಿಳಿಸಿದ್ರು.

ಬಿಬಿಎಂಪಿಗೆ ಅದಿಶಕ್ತಿ ದೇವತೆಗೆ ಪೂಜೆ ಸಲ್ಲಿಸಿ ಪ್ರತಿಯೊಂದು ಕಾರ್ಯ ಮಾಡುತ್ತಾರೆ ಅದ್ದರಿಂದ ನಾವು ದೇವರಿಗೆ ಮೊರೆ ಹೋಗಿದ್ದೇವೆ. ಸ್ಥಳೀಯ ಜನಪ್ರತಿನಿಧಿಗಳು ಇಲ್ಲದೇ ಸಮಸ್ಯೆಗಳು ನಿವಾರಣೆ ಅಗುತ್ತಿಲ್ಲ ಎಂದು ಮತ್ತೊಬ್ಬ ಹೋರಾಟಗಾರ ವೀರೇಶ್ ತಿಳಿಸಿದ್ರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist