ಬೆಂಗಳೂರು, (www.thenewzmirror.com) :
ಬಹು ನಿರೀಕ್ಷಿತ ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ 2024-25 ನೇ ಸಾಲಿನ ಅಯವ್ಯಯ ಮಂಡನೆ ಮಾಡಿದ್ದು,12,369 ಕೋಟಿ ಗಾತ್ರದ ಬಜೆಟ್ ನಲ್ಲಿ 4 ಕೋಟಿ ಉಳಿತಾಯದ ಅಯವ್ಯಯ ಮಂಡಿಸಿದ್ದಾರೆ. ಇದಲ್ಲಿ ಅತಿ ಹೆಚ್ಚು ಅಂದರೆ 1580 ಕೋಟಿ ಬ್ರ್ಯಾಂಡ್ ಬೆಂಗಳೂರಿಗೆ ಮೀಸಲಿರಿಸಲಾಗಿದೆ.
ಕಾರ್ಪೋರೇಟರ್ ಗಳಿಲ್ಲದೆ ಕೇವಲ ಅಧಿಕಾರಿಗಳೇ ಮಂಡನೆ ಮಾಡುತ್ತಿರುವ ನಾಲ್ಕನೇ ಬಜೆಟ್ ಇದಾಗಿದ್ದು, ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರಸ್ತುತ ವರ್ಷದ ಆಯವ್ಯಯ ಮಂಡಿಸಲಾಯಿತು.
ಸುಗಮ ಸಂಚಾರ, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು, ಟೆಕ್ ಬೆಂಗಳೂರು, ವೈಬ್ರಂಟ್(ರೋಮಾಂಚನ) ಬೆಂಗಳೂರು, ನೀರಿನ ಭದ್ರತೆ ಬೆಂಗಳೂರು ಎಂಬ ಎಂಟು ಪರಿಕಲ್ಪನೆಯೊಂದಿಗೆ ಬ್ರ್ಯಾಂಡ್ ಬೆಂಗಳೂರು ಯೋಜನೆ ಸಿದ್ದಪಡಿಸಲಾಗುತ್ತಿದ್ದು, ಒಟ್ಟಾರೆ ಬಜೆಟ್ ನ ಶೇಕಡಾ 15% ಅನ್ನ ಬ್ರ್ಯಾಂಡ್ ಬೆಂಗಳೂರಿಗೆ ಮೀಸಲಿಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ೨೨೫ ವಾರ್ಡ್ ಗಳ ಪೈಕಿ ೧೬೩ ವಾರ್ಡ್ ಗಳ ಆಸ್ತಿಗಳನ್ನ ಡಿಜಿಟಲೀಕರಣ ಮಾಡಲಾಗಿದ್ದು, ಪ್ರಸ್ತುತ ವರ್ಷದಲ್ಲಿ ಪೂರ್ಣಗೊಳಿಸುವ ಇರಾದೆಯನ್ನ ಪಾಲಿಕೆ ಹೊಂದಿದೆ. ಹಾಗೆನೇ ಪ್ರಸ್ತುತ ವರ್ಷದಲ್ಲಿ ೧೬೦೦೦ ಪೌರ ಕಾರ್ಮಿಕರನ್ನ ನೇರ ನೇಮಕಾತಿ ಮಾಡಿಕೊಳ್ಳಲು ಈ ಬಾರಿ ಅಯವ್ಯಯದಲ್ಲಿ ತೀರ್ಮಾನ ಮಾಡಲಾಗಿದೆ.
ಬಿಬಿಎಂಪಿ ತನ್ನ ತೆರಿಗೆಗಳ ಮೂಲಕ ೪೪೭೦ ಕೋಟಿ ಹಾಗೂ ತೆರಿಗೇತರ ಮೂಲದಿಂದ ೩೦-೯೭ ಕೋಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕ್ರಮವಾಗಿ ೪೮೮ ಕೋಟಿ ಹಾಗೂ ೩೫೮೯ ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.
ಪಾಲಿಕೆ ಸಿಬ್ಬಂದಿಗೆ ಮೊದಲ ಬಾರಿಗೆ ಪುರಸ್ಕಾರ..!
ಬಿಬಿಎಂಪಿ ಅಧಿಕಾರಿಗಳಲ್ಲಿ ಗುಣಾತ್ಮಕ ಪರಿವರ್ತನೆ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಬಿಬಿಎಂಪಿ ಸಿಬ್ಬಂದಿಗೆ ಪ್ರಶಸ್ತಿ ನೀಡಲು ೨ ಲಕ್ಷ ಅನುದಾನ ಮೀಸಲಿಡಲಾಗಿದೆ.
ಸುರಂಗ ಮಾರ್ಗ ನಿರ್ಮಾಣಕ್ಕೆ ೨೦೦ ಕೋಟಿ
ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣಿ ಇರುವ ಕಡೆಗಳಲ್ಲಿ ಪ್ರಾಯೋಗಿಕವಾಗಿ ೨ ಕಡೆಗಳಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ತೀರ್ಮಾನಿಸಿರುವ ಬಿಬಿಎಂಪಿ ಇದಕ್ಕಾಗಿ ೨೦೦ ಕೋಟಿ ಅನುದಾನ ಮೀಡಲಿಟ್ಟಿದೆ.
ಗುಂಡಿ ಮುಕ್ತ ಬೆಂಗಳೂರಿಗಾಗಿ ಈ ಬಾರಿ ೧೪೫ ಕಿಲೋ ಮೀಟರ್ ಉದ್ದದ ರಸ್ತೆಯನ್ನ ವೈಟ್ ಟಾಫಿಂಗ್ ಮಾಡಲು ತೀರ್ಮಾನ. ೧೭೦೦ ಕೋಟಿ ವೆಚ್ದಲ್ಲಿ ವೈಟ್ ಟಾಫಿಂಗ್ ರಸ್ತೆ ನಿರ್ಮಾಣದ ಗುರಿ
ಜನದಟ್ಟಣೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ಜನತೆಗೂಡಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಿರುವ ಬಿಬಿಎಂಪಿ, ಇದಕ್ಕಾಗಿ ೧೦೦ ಕೋಟಿ ಅನುದಾನ ಮೀಸಲಿಟ್ಟಿದೆ.
ರಸ್ತೆ ಸ್ಥಿತಿಗತಿ ತಿಳಿಯಲು AI ತಂತ್ರಜ್ಞಾನ..!
ಬಿಬಿಎಂಪಿ ವ್ಯಾಪ್ತಿಯಲ್ಲಿ ೧೫೦೦೦ ಕಿಲೋ ಮೀಟರ್ ಗೂ ಉದ್ದದ ಆರ್ಟಿರಿಯಲ್ ಹಾಗೂ ಸಬ್ ಆಟರ್ಇರಿಯಲ್ ರಸ್ತೆ ಇದ್ದು, ಡಾಂಬರ್ ಹಾಕಿದರೂ ರಸ್ತೆ ಗುಂಡಿಗಳು ನಿರ್ಮಾಣ ವಾಗುತ್ತಿವೆ. ಹೀಗಾಗಿ ರಸ್ತೆಗಳ ಮೇಲ್ಮೈ ಸ್ಥಿತಿ ಮತ್ತು ರಸ್ತೆಗಳ ಸ್ಥಿರತೆ ತಿಳಿಯುವ ನಿಟ್ಟಿನಲ್ಲಿ ಪ್ತತಿಷ್ಠಿತ ಸಂಸ್ಥೆ ಜತೆಗೂಡಿ AI(Artificial Intelligence) ಸಹಯೋಗದೊಂದಿಗೆ ಅಧ್ಯಯನಕ್ಕೆ ತೀರ್ಮಾನ
ಮಹಿಳೆಯರಿಗಾಗಿ ಇದೇ ಮೊದಲ ಬಾರಿಗೆ She Toilets
ಬಿಬಿಎಂಪಿ ವ್ಯಾಪ್ತಿಯಲ್ಲಿ ೧೬೦ ಸಾರ್ವಜನಿಕ ಶೌಚಾಲಯ ಉನ್ನತೀಕರಣದ ಜತೆಗೆ ಮಹಿಳೆಯರಿಗಾಗಿಯೇ ೧೦೦ ಸಂಖ್ಯೆಯ She Toilets ನಿರ್ಮಿಸಲು ೧೦ ಕೋಟಿ ಮೀಸಲು. ಹಾಗೆನೇ ಪ್ರಸ್ತುತ ವರ್ಷದಲ್ಲಿ ೨ ಲಕ್ಷ ಸಸಿ ನೆಡುವ ಗುರಿಯನ್ನ ಪಾಲಿಕೆ ಇಟ್ಟುಕೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ೫೦ ನಿಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿರುವ ಪಾಲಿಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣಮಾಡಲು ನಿರ್ಧರಿಸಿದ್ದು, ಒಟ್ಟಾರೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ೭೦ ಕೋಟಿ ಮೀಸಲು
ಉಳಿದಂತೆ ಯಾವುದೇ ಹೊಸ ಯೋಜನೆಗಳ ಘೋಷಣೆ ಇಲ್ಲದೆ ಅಯವ್ಯಯ ಮಂಡನೆ ಮಾಡಲಾಗಿದೆ. ಒಟ್ಟಾರೆ ಬಜೆಟ್ ನಲ್ಲಿ ಸಿಬ್ಬಂದಿ ವೆಚ್ಚಕ್ಕೆ ೧೬೦೭ ಕೋಟಿ(ಶೇ.೧೩), ಆಡಳಿತ ವೆಚ್ಚಕ್ಕೆ ೩೮೯ ಕೋಟಿ(ಶೇ.೩), ಕಾರ್ಯಕ್ರಮಗಳ ವೆಚ್ಚಕ್ಕಾಗಿ ೯೧೨ ಕೋಟಿ (ಶೇ.೭), ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಕ್ಕಾಗಿ ೨೨೭ ಕೋಟಿ (ಶೇ.೧೮), ಸಾರ್ವಜನಿಕ ಅಭಿವೃದ್ಧಿ ವೆಚ್ಚಕ್ಕೆ ೬೬೬ ಕೋಟಿ (ಶೇ.೫೪) ಹಾಗೂ ಕರ ಮರು ಪಾವತಿಗೆ ಮೀಸಲಿರಿಸಲಾಗಿದೆ.