ಬೆಂಗಳೂರು, (www.thenewzmirror.com) :
ಬಿಸಿಸಿಐ ಇತ್ತೀಚೆಗೆ ಕ್ರಿಕೆಟ್ ಆಗರಾರರ ವೇತನ ಪರಿಷ್ಕರಣೆ ಮಾಡಿದೆ ಅದರ ಪ್ರಕಾರ ನಾಲ್ವರು ಕ್ರಿಕೆಟ್ ಆಗರಾರರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಗ್ರೇಡ್ ಎ + ವರ್ಗದ ಗುತ್ತಿಗೆಯನ್ನು ಪಡೆಯುತ್ತಿರುವ ಕಾರಣ ಮತ್ತೊಮ್ಮೆ ಭಾರಿ ಸಂಬಳ ಪಡೆಯುತ್ತಿದ್ದಾರೆ. ಇಬ್ಬರೂ ಆಟಗಾರರು ಕಳೆದ ವರ್ಷ ಕೂಡ ಅಗ್ರ ವೇತನ ಪಡೆಯುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ವಿರಾಟ್ ಮತ್ತು ರೋಹಿತ್ ಜತೆಗೆ ಎ+ ಗ್ರೇಡ್ ನಲ್ಲಿ ಕೇವಲ ನಾಲ್ವರು ಆಟಗಾರರಿದ್ದು, ವಿರಾಟ್, ರೋಹಿತ್ ಹೊರತು ಪಡಿಸಿದರೆ ಉಳಿದ ಇಬ್ಬರು ಬುಮ್ರಾ ಮತ್ತು ಜಡೇಜಾ ಎ+ ಗ್ರೇಡ್ ನಲ್ಲಿದ್ದಾರೆ.
ಇತ್ತೀಚೆಗೆ ಬಿಸಿಸಿಐ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಗ್ರೇಡ್ ಎ+ ವಿಭಾಗದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಇಬ್ಬರೂ ಸ್ಟಾರ್ ಆಟಗಾರರು ಕಳೆದ ವರ್ಷವೂ ಅಗ್ರಸ್ಥಾನದಲ್ಲಿದ್ದರು. ವಿರಾಟ್ ಮತ್ತು ರೋಹಿತ್ ಇವರಿಬ್ಬರೂ ವರ್ಷಕ್ಕೆ ತಲಾ 7 ಕೋಟಿ ರೂಪಾಯಿಗಳನ್ನು ಸಂಬಳವಾಗಿ ಪಡೆಯಲಿದ್ದಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ODIಗೆ 6 ಲಕ್ಷ ಮತ್ತು T20I ಗೆ 3 ಲಕ್ಷ ನೀಡಲಾಗುತ್ತದೆ. ಈ ಹಣವನ್ನ ಎ+ ಗ್ರೇಡ್ ನಲ್ಲಿ ಸೇರಿಸಲಾಗಿಲ್ಲ.
ಎ ಗ್ರೇಡ್‌ನಲ್ಲಿರುವ ಆಟಗಾರರು ವಾರ್ಷಿಕವಾಗಿ 5 ಕೋಟಿ ರೂಪಾಯಿಗಳನ್ನು ಗಳಿಸಿದರೆ, ಗ್ರೇಡ್ ಬಿ ಆಟಗಾರರು 3 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಸಿ ಗ್ರೇಡ್‌ನಲ್ಲಿರುವವರಿಗೆ 1 ಕೋಟಿ ರೂ. ನೀಡಲಾಗುತ್ತದೆ.
ಗ್ರೇಡ್ ಎ+
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ
ಗ್ರೇಡ್ ಎ
ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್. ಅಕ್ಸರ್ ಪಟೇಲ್, ಮೊಹಮದ್ ಶಮಿ, ರಿಷಬ್ ಪಂಥ್.
ಗ್ರೇಡ್ ಬಿ
ಚೇತೇಶ್ವರ ಪೂಜಾರಾ, ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮೊಹಮದ್ ಸಿರಾಜ್.
ಗ್ರೇಡ್ ಸಿ
ಉಮೇಶ್ ಯಾದವ್, ಶಿಖರ್ ಧವನ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್, ಶಾರ್ದುಲ್ ಠಾಕೂರ್, ಇಶಾನ್ ಕಿಶನ್, ಕುಲ್ದೀಪ್ ಯಾದವ್, ವಾಷಿಂಗ್ ಟನ್ ಸುಂದರ್, ಸಂಜು ಸ್ಯಾಮ್ಸನ್ ಅರ್ಶದೀಪ್ ಸಿಂಗ್, ಶಿಖರ್ ಭರತ್.