ಬೆಂಗಳೂರು, (www.thenewzmirror.com);
ಸಮಗ್ರ ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ– 2024 ಅನ್ನೂ ಕೂಡ ಮಂಡನೆ ಮಾಡಿತ್ತು. ಇದೀಗ ಈ ಪ್ರಾಧಿಕಾರ ರಚನೆ ಕುರಿತಂತೆ ಬೆಂಗಳೂರಿನ ಒಟ್ಟು ಐದು ಕಡೆಗಳಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಸಲಹೆ ಪಡೆಯೋಕೆ ಮುಂದಾಗಿದ್ದು, ಇದೇ ಫೆಬ್ರವರಿ 10 ರಿಂದ 3 ದಿನಗಳ ಕಾಲ ಅವಕಾಶ ನೀಡಲಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರ ಪರಿಶೀಲನೆ ಮತ್ತು ವರದಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಆ ಸಮಿತಿಗೆ ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ರನ್ನ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ.
ನಗರದಲ್ಲಿ ಮೂರು ದಿನಗಳ ಕಾಲ ಐದು ಕಡೆ ಎಲ್ಲ ಎಂಟು ವಲಯಗಳನ್ನು ಒಳಗೊಂಡಂತೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಂದ ಸಲಹೆಗಳನ್ನು ಸ್ವೀಕರಿಸಲು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಯೋಜನೆ, ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ, ಪರಿಣಾಮ, ಸಹಭಾಗಿತ್ವ ಮತ್ತು ಉತ್ತಮ ಆಡಳಿತ, ನಗರಾಡಳಿತದ ಮೂಲಕ ಆಡಳಿತ ಕೇಂದ್ರೀಕರಣದಂತಹ ವಿಷಯಗಳು ಇದರಲ್ಲಿ ಇದೆ. ಮುಂದುವರಿದು ಜನ ಆಡಳಿತದ ಭಾಗವಾಗುವುದನ್ನು ಸುಗಮಗೊಳಿಸುವುದಕ್ಕೆ ಹಾಗೂ ಸಹಭಾಗಿ, ದಕ್ಷ ಮತ್ತು ಉತ್ತಮ ಆಡಳಿತ ಜಾರಿ ಮಾಡುವ ಉದ್ದೇಶವನ್ನು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಒಳಗೊಂಡಿದೆ
ಎಲ್ಲೆಲ್ಲಿ ಸಭೆ ನಡೆಯಲಿದೆ?
- ಪೂರ್ವ ವಲಯ:
ಪೂರ್ವ ವಲಯದಲ್ಲಿ 10ನೇ ಫೆಬ್ರವರಿ 2025 ರಂದು ವಸಂತನಗರ ತಿಮ್ಮಯ್ಯ ರಸ್ತೆಯಲ್ಲಿ ಬರುವ ಬಂಜಾರ ಭವನದಲ್ಲಿ ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಸಭೆಯನ್ನು ಆಯೋಜಿಸಲಾಗಿದೆ. - ಮಹದೇವಪುರ ವಲಯ:
ಮಹದೇವಪುರ ವಲಯದಲ್ಲಿ 10ನೇ ಫೆಬ್ರವರಿ 2025 ರಂದು ಕೆ.ಆರ್ ಪುರ ಟಿಸಿ ಪಾಳ್ಯದ ಹತ್ತಿರವಿರುವ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಧ್ಯಾಹ್ನ 03.00 ರಿಂದ ಸಂಜೆ 05.00 ಗಂಟೆಯವರೆಗೆ ಸಭೆಯನ್ನು ಆಯೋಜಿಸಲಾಗಿದೆ. - ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಲಯ:
ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಲಯಗಳು ಸೇರಿದಂತೆ 11ನೇ ಫೆಬ್ರವರಿ 2025 ರಂದು ಜೆ.ಪಿ ನಗರ 1ನೇ ಹಂತದಲ್ಲಿ ಬರುವ ಆರ್.ವಿ ಡೆಂಟಲ್ ಕಾಲೇಜಿನಲ್ಲಿ ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಸಭೆಯನ್ನು ಆಯೋಜಿಸಲಾಗಿದೆ. - ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯ:
ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯಗಳು ಸೇರಿದಂತೆ 11ನೇ ಫೆಬ್ರವರಿ 2025 ರಂದು ಬೆಂಗಳೂರು ವಿಶ್ವವಿದ್ಯಾನಿಲಯ ಜ್ಞಾನಭಾರತಿ ಕ್ಯಾಂಪಸ್ ನಲ್ಲಿರುವ ಡಾ. ಹೆಚ್. ನರಸಿಂಹತ್ತ ಸಭಾಂಗಣದಲ್ಲಿ ಮಧ್ಯಾಹ್ನ 03.00 ರಿಂದ ಸಂಜೆ 05.00 ಗಂಟೆಯವರೆಗೆ ಸಭೆಯನ್ನು ಆಯೋಜಿಸಲಾಗಿದೆ. - ಯಲಹಂಕ ಹಾಗೂ ದಾಸರಹಳ್ಳಿ ವಲಯ:
ಯಲಹಂಕ ಹಾಗೂ ದಾಸರಹಳ್ಳಿ ವಲಯ ಸೇರಿದಂತೆ 12ನೇ ಫ್ರೆಬ್ರವರಿ 2025 ರಂದು ಯಲಹಂಕ ನ್ಯೂಟೌನ್ ನಲ್ಲಿ ಬರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 01.00 ಗಂಟೆಯವರೆಗೆ ಸಭೆಯನ್ನು ಆಯೋಜಿಸಲಾಗಿದೆ