ಬೆಂಗಳೂರು, (www.thenewzmirror.com) ;
ಕೆಸ್ಸಾರ್ಟಿಸಿ ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ. ಆದರೆ ಇಂಥ ಸಂಸ್ಥೆ ಪ್ರಯಾಣಿಕರ ಹೆಸರಲ್ಲಿ ಹಣ ಮಾಡೋಕೆ ಇಳಿದಿದ್ಯಾ..? ಸೇವೆನೇ ನಮ್ಮ ಆದ್ಯತೆ ಅಂತ ಹೇಳುತ್ತಿದ್ದ ನಿಗಮ ಸದ್ದಿಲ್ಲದೆ ಬೊಕ್ಕಸಕ್ಕೆ ಪ್ರಯಾಣಿಕರಿಂದ ಹಣ ಪಡೆಯುವ ಕೆಲಸ ಮಾಡುತ್ತಿದ್ಯಾ ಎನ್ನುವ ಅನುಮಾನ ಮೂಡಿತ್ತಿದೆ.
ಅಷ್ಟಕ್ಕೂ ಈ ರೀತಿ ಅನಾನ ಮೂಡುವುದಕ್ಕೂ ಒಂದು ಕಾರಣವಿದೆ. ಕೆಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡಿ ತಮಗಾದ ಅತ್ಯಂತ ಕೆಟ್ಟ ಅನುಭವವನ್ನ ದಿ ನ್ಯೂಝ್ ಮಿರರ್ ಜತೆ ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ಅವರ ಅನುಭವದ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಇದೇ ತಿಂಗಳ 8 ರಂದು(023 ರ ಏಪ್ರಿಲ್ 8) ರಂದು ಪ್ರಯಾಣಿಕರೊಬ್ಬರು ಕೆಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ಬೆಂಗಳೂರಿನಿಂದ ಎಸಿ ಬಸ್ ಚಿತ್ರದುರ್ಗ ಮಾರ್ಗವಾಗಿ ಶಿವಮೊಗ್ಗ ತಲುಪುವ ಮಾರ್ಗದ ಬಸ್ ಆಗಿದ್ದು ನಿಗಧಿತ ವೇಳೆಗೆ ಬಸ್ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಟಿದೆ.
![](https://thenewzmirror.com/wp-content/uploads/2023/04/20230408_184408-801x1024.jpg)
Bangalore to Shivamogga KSRTC Bus
ಬಸ್ ಟಿಕೆಟ್ ದರ ದಲ್ಲಿ ಮನಸೋ ಇಚ್ಛೆ ಏರಿಕೆ ಮಾಡಿದ್ದುಣ ಸದ್ದಿಲ್ಲದೇ ಪ್ರಯಾಣಿಕರಿಂದ 32 ರೂ ಹೆಚ್ಚಿಗೆ ಪಡೆದಿದೆ ಟಿಕೆಟ್ ದೆ 548 ರೂ ಆಗಿದ್ದು 580 ಎಂದು ಎರಡು ಬಿಲ್ ಬಂದಿದ್ದು 580 ರೂ ದರವನ್ನೇ ಪ್ರಯಾಣಿಕರಿಂದ ವಸೂಲಿ ಮಾಡಲಾಗಿದೆ.
![](https://thenewzmirror.com/wp-content/uploads/2023/04/20230409_093927-1024x610.jpg)
Bus Ticket
ಮಧ್ಯಾಹ್ನ 3.15 ಕ್ಕೆ ಹೊರಟ ಬಸ್ ಸಂಜೆ 6.30 ಕ್ಕೆ ಹಿರಿಯೂರಿನಿಂದ 20 ಕಿಲೋ ಮೀಟರ್ ಅಂತರವಿರೋ ಜಾವಗೊಂಡನಹಳ್ಳಿ ಬಳಿ ಕಾಫಿ, ತಿಂಡಿಗೆ ಎಂದು ನಿಲ್ಲಿಸಿದೆ ಬಸ್. ಜಾವಗೊಂಡನಹಳ್ಳಿ ಬಳಿ ಇರುವ ಆರೋಮಾ ವೆಜ್ (#Aroma_veg) ಬಳಿ 15 ರಿಂದ 20 ನಿಮಿಷ ನಿಲ್ಲಿಸಿದೆ. ಆದರೆ ಅಲ್ಲಿ ಅವ್ಯವಸ್ಥೆಯೇ ತಾಂಡವವಾಡುತ್ತಿತ್ತು. ಕಾರಣ ಮನಸ್ಸಿಗೆ ಬಂದ ದರವನ್ನ ಈ ಹೊಟೇಲ್ ನಲ್ಲಿ ಇರಿಸಲಾಗಿದೆ. ಪಡ್ಡಿಗಿಂತ ಸ್ವಲ್ಪ ದೊಡ್ಡಗಾತ್ರದ ಎರಡು ಇಡ್ಲಿಗೆ 50 ರೂ ದರ. ಸಣ್ಣ ಲೋಟದಲ್ಲಿ ಕೊಡುವ ಕಾಫಿಗೆ 25 ರೂ ದರ.
![](https://thenewzmirror.com/wp-content/uploads/2023/04/20230408_183226-1-737x1024.jpg)
Aroma Veg Menu card
ಹೇಳಿಕೊಳ್ಳೊಕೆ ಸ್ಟಾರ್ ಹೊಟೇಲ್ ಅಲ್ಲದಿದ್ದರೂ ಸ್ಟಾರ್ ಹೊಟೇಲ್ ದರ ಇಲ್ಲಿ ಫಿಕ್ಸ್ ಮಾಡಲಾಗಿದೆ. ಇಲ್ಲಿ ಇರುವ ಸಿಬ್ಬಂದಿಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರೋದಿಲ್ಲ. ಸ್ವಚ್ಛತೆ ಅಂತೂ ಇಲ್ಲವೇ ಇಲ್ಲ. ಇದೆಲ್ಲದ್ರ ನಡುವೆ ಟೆಸ್ಟ್ ಇಲ್ಲದ ಹಾಗೂ ರುಚಿ ಇಲ್ಲದ ಆಹಾರ ಕೊಟ್ಟು ದುಬಾರಿ ಹಣವನ್ನ ಪಡೆಯಲಾಗುತ್ತಿದೆ.
![](https://thenewzmirror.com/wp-content/uploads/2023/04/20230408_184316-2-1024x565.jpg)
ಮಧ್ಯಾಹ್ನ ಬೆಂಗಳೂರಿನಿಂದ ಬಸ್ ಹೊರಟ್ಡಿದ್ದರಿಂದ್ದ ಸಂಜೆ ಆಗುತ್ತಿದ್ದಂತೆ ಹೊಟ್ಟೆ ಹಸಿವು ಮಾಮೂಲಿ. ಏನೋ ಹೊಟೇಲ್ ಇದ್ಯಲ್ಲ ಅಂತ ತಿನ್ನೋಕೆ ಹೋದ್ರೆ ಇಡ್ಲಿ ಖಾಲಿ, ಬಸ್ ನಿಲ್ಲಿಸೋದೇ 15 ರಿಂದ 20 ನಿಮಿಷ. ಅಂಥದ್ರಲ್ಲಿ ಆರ್ಡರ್ ಮಾಡಿದ್ರೆ ತಂದು ಕೊಡೋಕೆ 20 ನಿಮಿಷ ಸಮಯ ತಗೋತಾರೆ. ಹೀಗೊರುವಾಗ ಆರ್ಡರ್ ಮಾಡಿದ ತಿಂಡಿಯನ್ನ ತಿನ್ನೋದು ಯಾವಾಗ ಅನ್ನೋ ಪ್ರಶ್ನೆ ಪ್ರಯಾಣಿಕರದ್ದು.
ಇಡ್ಲಿನೇ ಇಲ್ಲರೀ..!
ಮೆನ್ಯೂ ಕಾರ್ಡಿನಲ್ಲಿ ಇಡ್ಲಿ ಇದೆ ಎಂದು ಹಾಕಲಾಗಿದೆ. ನಾವು ನಾಲ್ಲು ಜನ ಸ್ನೇಹಿತರು ಅರೋಮಾ ವೆಜ್ (#Aroma_veg) ನಲ್ಲಿ ಇಡ್ಲಿ ಆರ್ಡರ್ ಮಾಡಿದ್ಚಿ ಇಬ್ಬರಿಗೆ ಇಡ್ಲಿ ಸಿಗ್ತು ಇನ್ನಿಬ್ಬರಿಗೆ ನೋ ಇಡ್ಲಿ,. ಅಲ್ಲಾ ಸ್ವಾಮಿ ಬಸ್ ಬರುತ್ತೆ ಅನ್ನೋದು ಗೊತ್ತಿದ್ರೂ ಇಡ್ಲಿ ಮಾಡಿರಬೇಕು ಅಲ್ವಾ..? ಸರ್ವೀಸ್ ಇದೆ ಅಂತ ಕ್ಯಾಶಿಯರ್ ಹೇಳ್ತಾರೆ. ಟೇಬಲ್ ಬಳಿ ಕೂತ್ರೆ ಇಲ್ಲಿ ಸರ್ವೀಸ್ ಇಲ್ಲ ಅಂತಾರೆ ಏನ್ ಮಾಡಬೇಕು ಹೇಳಿ..? ನಾನು ಹಲವು ವರ್ಷಗಳಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದೀನಿ, ಎಷ್ಟೋ ಜೊಟೇಲ್ ನಲ್ಲಿ ಊಟವನ್ನೂ ಮಾಡಿದ್ದೀನಿ. ಆದರೆ ಇಂಥ ಕೆಟ್ಟ ಟೇಸ್ಟ್ ಹಾಗೂ ಸರ್ವೀಸ್ ಇರುವ ಹೊಟೇಲ್ ನೋಡಿಲ್ಲ ಅಂತ ಹೇಳ್ತಾರೆ ಪ್ರಯಾಣಿಕ ಪ್ರಶಾಂತ್.
![](https://thenewzmirror.com/wp-content/uploads/2023/04/Screenshot_20230408_184547_Chrome-2-459x1024.jpg)
Google Rating
![](https://thenewzmirror.com/wp-content/uploads/2023/04/Screenshot_20230408_184949_Chrome-2-edited.jpg)
ಕಾಫಿ ಚೆನ್ನಾಗಿ ಇರಲಿಲ್ಲ
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಪ್ರಯಾಣ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು 25 ರೂ ಕೊಟ್ಟು ಕಾಫಿ ಕುಡಿದೆ. ಬಿಸಿ ನಿಒರು ಕುಡಿದ ಹಾಗೆ ಆಯ್ತು ಎಂದು ತಮ್ಮ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ.
ಯಾವ ಆಧಾರದ ಮೇಲೆ ಹೊಟೇಲ್ ನಿಗಧಿ ಮಾಡಲಾಗುತ್ತೆ.?
ಸಾಮಾನ್ಯವಾಗಿ ಯಾವುದೇ ಒಂದು ಬಸ್ ಒಂದು ಮಾರ್ಗದಲ್ಲಿ ಸಂಚಾರ ಮಾಡುತ್ತೆ ಅಂದ್ರೆ ಮೊದಲು ಆ ಮಾರ್ಗದಲ್ಲಿ ಬರುವ ಹೊಟೇಲ್ ಗಳ ಮಾಹಿತಿ ಕಲೆ ಹಾಕಲಾಗುತ್ತದೆ. ಸಂಪೂರ್ಣ ವೆಜ್(#pure_veg) ಇರುವ ಹೊಟೇಲ್ ಗಳ ಮಾಹಿತಿ ಸಂಗ್ರಹಿಸಿ ಅದರಲ್ಲಿ ರುಚಿ, ಶುಚಿ, ಹಾಗೂ ಪ್ರಯಾಣಿಕರಿಗೆ ಕೈಗೆಟಕುವ ದರವನ್ನ ಕೊಡುವಂಥ ಹೊಟೇಲ್ ಜತೆ ಒಪ್ಪಂದ ಮಾಡೊಕೊಳ್ಳಲಾಗುತ್ತೆ. ಇದರಲ್ಲಿ ಒಂದು ಮಾನದಂಡ ಉಲ್ಲಂಘನೆಯಾದ್ರೂ ಒಪ್ಪಂದ ರದ್ದಾಗಲಿದೆ.
ಇಷ್ಟೆಲ್ಲಾ ಮಾನದಂಡಗಳು ಇರಬೆರಕಾದರೆ ಆರೋಮಾ ವೆಜ್ (#Aroma_veg) ನಿಮಗದ ಎಲ್ಲಾ ನಿಯಮ ಹಾಗೂ ಮಾನದಂಡಗಳನ್ನ ಉಲ್ಲಂಘನೆ ಮಾಡಿದೆ. ಅಷ್ಟೇ ಅಲ್ಲದೆ ಕೆಲ ಪ್ರಯಾಣಿಕರು ಇಲ್ಲಿ ಟೆಸ್ಟಿಯಾದ ಫುಡ್ ನೀಡೋದಿಲ್ಲ. ಸುಮ್ಮನೆ ದುಡ್ಡ ವ್ಯರ್ಥ ಅಂತೆಲ್ಲಾ ತಮ್ಮ ಕಮೆಂಟ್ ಗಳನ್ನ ಮಾಡುತ್ತಾ ಬಂದಿದ್ದಾರೆ. ಹಾಗೆನೆ ಗೂಗಲ್ ರೇಟಿಂಗ್ ನಲ್ಲಿ 3.1 ರೇಟಿಂಗ್ ಕೂಡ ಕೊಟ್ಟಿದ್ದಾರೆ. ಅಂದರೆ ಗ್ರಾಹಕರಿಂದ ಉತ್ತಮ ಅಭಿಪ್ರಾಯ ಬಂದಿಲ್ಲ ಎಂಬ ಅರ್ಥ.
ಹೀಗಿದ್ದರೂ ನಿಗಮ ಇಂಥ ಅವ್ಯವಸ್ಥೆಯಿಂದ ಕೂಡಿರೋ ಹೊಟೇಲ್ ಜತೆ ಒಪ್ಪಂದವನ್ನ ಮುಂದುವರೆಸಿದ್ದನ್ನ ನೋಡಿದರೆ ಹಲವು ಅನುಮಾನಗಳು ಮೂಡುತ್ವೆ. ಮಾರ್ಗದಲ್ಲಿ ಸರ್ವೆ ನಡೆಸಿದ ಅಧಿಕಾರಿಗಳು ಪ್ರಯಾಣಿಕರ ಹಿತ ಮುಖ್ಯಕ್ಕಿಂತ ತಮ್ಮ ಜೇಬಿನತ್ತ ಹೆಚ್ಚು ಒತ್ತುಕೊಂಡಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದೆ.
ಎಂಡಿಯವರೇ ನಿಮಗೆ ಇದರ ಅರಿವಿಲ್ವಾ.?
ಇನ್ನು ಯಾವುದೇ ಹೊಟೇಲ್ ಜತೆ ಒಪ್ಪಂದ ಆಗುತ್ತೆ ಅಂದರೆ ಕಾಲ ಕಾಲಕ್ಕೆ ಅದರ ಗುಣಮಟ್ಟ ಪರಿಶೀಲನೆ ಮಾಡಬೇಕು. ಜತೆಗೆ ಪ್ರಯಾಣಿಕರಿಂದ ಫೀಡ್ ಬ್ಯಾಕ್ ಕೂಡ ಪಡೀಬೇಕು. ಆದರೆ ಇದು ಆಗುತ್ತಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೇವಲ ಮಾಧ್ಯಮಗಳ ಮುಂದೆ ಫೋಸ್ ಕೊಡುವ ನಿಗಮದ ಹಾಲಿ ಎಂಡಿ ( ಅನ್ಬುಕುಮಾರ್) ಗೆ ಇದೆಲ್ಲಾ ಗೊತ್ತಿಲ್ವಾ..? ಗೊತ್ತಿದ್ರೂ ಸುಮ್ಮನಿದ್ದಾರಾ..? ಸುಮನಿರೋದ್ರ ಹಿಂದಿನ ಮರ್ಮವೇನು ಎನ್ನುವ ಪ್ರಶ್ನೆಗಳು ಕಾಡುತ್ವೆ.
ಈಗಲಾದ್ರೂ ನಿಗಮ ಇಂಥ ಸಣ್ಣಪುಟ್ಟ ಅವ್ಯವಸ್ಥೆಗಳ ಕಡೆ ಗಮನ ಹರಿಸಿ ಪ್ರಯಾಣಿಕರ ಹಿತ ಕಾಯುವ ಕೆಲಸ ಮಾಡಬೇಕು.