ಬೆಂಗಳೂರು, (www.thenewzmirror.com);
ಬಿಗ್‌ಬಾಸ್ ಮನೆಯೊಳಗೆ ಬಿಡ್ಡಿಂಗ್ ಭರಾಟೆ ಜೋರಾಗಿಯೇ ಸಾಗಿದೆ. ತಂಡ ರಚನೆಯಲ್ಲಿ ಗುಪ್ತವಾಗಿದ್ದ ಖರೀದಿ ಕೆಲಸ ಈಗ ಖುಲ್ಲಂಖುಲ್ಲಾ ನಡೆಯುತ್ತಿದೆ. ಇದರ ಝಲಕ್ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.
ಒಂದು ದಿನದ ಟಾಸ್ಕ್ ಮುಗಿದ ನಂತರ ತನಿಷಾ ಮತ್ತು ಸಂಗೀತಾ ಅವರಿಗೆ ಬಿಗ್‌ಬಾಸ್ ಮತ್ತೊಂದು ಬಿಡ್ಡಿಂಗ್ ಪ್ರಕ್ರಿಯೆ ಮಾಡಲು ಸೂಚಿಸಿದ್ದಾರೆ. ವಿನಯ್ ಮತ್ತು ನಮ್ರತಾ ಅವರನ್ನು ಹೊರತುಪಡಿಸಿ ಎಲ್ಲ ಆಟಗಾರರ ಪೈಕಿ ತಲಾ ಮೂವರು ಆಟಗಾರರನ್ನು ಖರೀದಿಸಬೇಕು ಎಂದು ಬಿಗ್‌ಬಾಸ್ ಹೇಳಿದ್ದಾರೆ.
ಆದರೆ ಕಾರ್ತಿಕ್ ಅವರನ್ನು ಕೊಂಡುಕೊಳ್ಳುವ ಸರದಿ ಬಂದಾಗ ತನಿಷಾ ಮತ್ತು ಸಂಗೀತಾ ಇಬ್ಬರೂ ಬಿಡ್ ಮಾಡಲೇ ಇಲ್ಲ! ಇದರ ಮೇಲೆ ತನಿಷಾ, ‘ನನ್ನ ಕಳಪೆ ಖರೀದಿ ಕಾರ್ತಿಕ್ ಅವರು’ ಎಂದು ಬೇರೆ ಹೇಳಿದ್ದಾರೆ!
ಇದನ್ನು ನೋಡಿ ತುಕಾಲಿ ಸಂತೋಷ್, ‘ಅವನಿಗೋಸ್ಕರ ಗುದ್ದಾಡಿದ ಅದೇ ಫ್ರೆಂಡ್ಸು ಅವನನ್ನೇ ಹತ್ ರೂಪಾಯಿಗೂ ಕೇಳಿಲ್ವಲ್ಲ ಅವನ್ನ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ.
https://www.instagram.com/reel/C1HDLCuIIcc/?igsh=Z3oyY2FxdW1zcjQy
ಕಳೆದ ಸಲ ಸಂಗೀತಾ ಅವರಿಂದ ಹಣ ತೆಗೆದುಕೊಂಡು ನಂತರ ಪಕ್ಷ ಬದಲಾಯಿಸಿ ತನಿಷಾ ಹೆಚ್ಚು ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ಅವರ ತಂಡ ಸೇರಿಕೊಂಡಿದ್ದರು ಕಾರ್ತಿಕ್. ಆಗ ವ್ಯಕ್ತಿಗತ ಆಟ ಮತ್ತು ನೈತಿಕತೆಯ ಬಗ್ಗೆಯೂ ಮಾತುಕತೆಗಳು ನಡೆದಿದ್ದವು. ಈ ಪಕ್ಷಾಂತರವೇ ಕಾರ್ತಿಕ್‌ಗೆ ಮುಳುವಾದಂತಿದೆ.
ಹಾಗಾದರೆ ಸಂಗೀತಾ ಮತ್ತು ತನಿಷಾ ಇಬ್ಬರೂ ಯಾರು ಯಾರನ್ನೆಲ್ಲ ಖರೀದಿಸಿದ್ದಾರೆ? ಯಾವ ಬೆಲೆಗೆ ಖರೀದಿಸಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಬಿಗ್‌ಬಾಸ್ ವೀಕ್ಷಿಸಿ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.