BIGGBOSS KANNADA | ಟಿಕೆಟ್ ಟು ಫಿನಾಲೆ; ಒಬ್ಬೊಬ್ಬರಿಗೂ ಸವಾಲೇ!

ಬೆಂಗಳೂರು, (www.thenewzmirror.com) ;

ಫಿನಾಲೆಯ ವೇದಿಕೆ ಹತ್ತಲು ಬಿಗ್‌ಬಾಸ್‌ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆದಿದೆ. ಇದಕ್ಕೆ ಅನುಗುಣವಾಗಿ ಸ್ವತಃ ಬಿಗ್‌ಬಾಸ್‌ ಎಲ್ಲ ಸ್ಪರ್ಧಿಗಳಿಗೂ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ನಿನ್ನೆ ನಮೃತಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು.

RELATED POSTS

ನಮೃತಾ, ವರ್ತೂರು ಸಂತೋಷ್, ಪ್ರತಾಪ್ ಮತ್ತು ಸಂಗೀತಾ ಅವರನ್ನು ಎದುರಾಳಿಗಳನ್ನಾಗಿ ಆಯ್ದುಕೊಂಡಿದ್ದರು. ಆದರೆ ಎಲ್ಲರಿಗಿಂತ ಮೊದಲು ಅವರೇ ಸ್ಪರ್ಧೆಯಿಂದ ಔಟ್ ಆಗಿದ್ದರು. ಈ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಜಯಶಾಲಿಗಳಾಗಿದ್ದಾರೆ. ಎರಡನೇ ಸ್ಥಾನವನ್ನು ಪ್ರತಾಪ್ ಪಡೆದುಕೊಂಡಿದ್ದಾರೆ. ವೈಯಕ್ತಿಕ ಟಾಸ್ಕ್‌ನ ಮುಂದುವರಿದ ಭಾಗದ ಝಲಕ್ ಇಂದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಈ ಬಾರಿ ಬಿಗ್‌ಬಾಸ್‌ ತನಿಷಾ ಅವರಿಗೆ ಟಾಸ್ಕ್‌ ಕೊಟ್ಟು, ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರನ್ನು ಕೊಟ್ಟಿದ್ದಾರೆ. ಈ ವಾರದ ನಾಮಿನೇಷನ್‌ನಲ್ಲಿ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದ ಕಾರ್ತೀಕ್, ಈಗ ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳುವಂತೆ ತನಿಷಾ ಬಳಿ ಕನ್ವಿನ್ಸ್ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಜಗ್ಗಿಲ್ಲ. ‘ಬೇರೆವರು ಸಜಷನ್ ಕೊಟ್ರೆ ಕೇಳಿಸ್ಕೋತೀಯಾ, ನಾನು ಮಾತಾಡೋಕೆ ಬಂದ್ರೆ ಉಲ್ಟಾ ಮಾತಾಡ್ತೀಯಾ?’ ಎಂದು ಕಾರ್ತಿಕ್ ಕೇಳಿದ್ದಾರೆ. ಅದಕ್ಕೆ ತನಿಷಾ, ‘ನನಗೂ ಬ್ರೇನ್ ಇದೆ. ನೀನು ಹೇಳ್ಕೊಟ್ಟೇ ತಿಳ್ಕೋಬೇಕಾಗಿಲ್ಲ’ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.

ಈ ಸೀಸನ್‌ ಆರಂಭದಿಂದಲೂ ಸ್ನೇಹಿತರಾಗಿದ್ದ, ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತಿದ್ದ ತನಿಷಾ ಮತ್ತು ಕಾರ್ತೀಕ್ ನಡುವೆ ಈಗ ಬಿರುಕು ಮೂಡಿದಂತಿದೆ. ಫಿನಾಲೆಗೆ ನೇರ ಪ್ರವೇಶ ಪಡೆಯುವ ಸ್ಪರ್ಧಿ ಯಾರೆಂಬುದು ಮಾತ್ರ ಇನ್ನೂ ಕುತೂಹಲಕಾರಿ ಪ್ರಶ್ನೆಯಾಗಿಯೇ ಉಳಿದಿದೆ.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist