ಬೆಂಗಳೂರು, (www.thenewzmirrir.com);
ಸಂಗೀತಾ ಮತ್ತು ತನಿಷಾ ಎರಡು ಗುಂಪುಗಳಲ್ಲಿ ಮನೆಯ ಸದಸ್ಯರೆಲ್ಲ ವಿಂಗಡಣೆಗೊಂಡು ಕ್ಯಾಪ್ಟನ್ಸಿಗಾಗಿ ಸ್ಪರ್ಧಿಸುತ್ತಿದ್ದಾರೆ. ಈ ಸಲ ಬಿಗ್ ಬಾಸ್ ನಾಯಕಿಯರಿಗೆ ತಮ್ಮ ಮನೆಯ ಒಳ್ಳೆಯ ಸದಸ್ಯರನ್ನು ಹಣ ಕೊಟ್ಟು ಖರೀದಿಸುವ ಅವಕಾಶ ನಡೆದಿತ್ತು.
ಯಾರಿಗೆ ಎಷ್ಟು ಗಣ ಕೊಡಲಾಗಿದೆ, ಟಾಸ್ಕ್ ಗಳಲ್ಲಿ ಗೆದ್ದಾಗ ಎಷ್ಟು ಶೇರ್ ಕೊಡಲಾಗುತ್ತಿದೆ ಎಂಬುದರ ಕುರಿತು ಎರಡೂ ಗುಂಪುಗಳ ಸದಸ್ಯರಲ್ಲಿ ಅಸಮಧಾನಗಳಿವೆ. ಈ ಅಸಮಧಾನ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸ್ಪಷ್ಟವಾಗಿ ಕಾಣಿಸಿದೆ.
ಈವತ್ತು ಎರಡೂ ತಂಡದ ಕ್ಯಾಪ್ಟನ್ ಗಳನ್ನು ಕೂಡಿಸಿಕೊಂಡು, ಅವರ ತಂಡದ ಸದಸ್ಯರಿಂದಲೇ ಅಭಿಪ್ರಾಯ ಹಂಚಿಕೊಳ್ಳಲು ಬಿಗ್ ಬಾಸ್ ಸೂಚಿಸಿದ್ದಾರೆ. ಈ ಸಮಯದಲ್ಲಿ ಮೈಕಲ್ ನೇರವಾಗಿಯೇ ‘ಸಂಗೀತಾ ಟಾಸ್ಕ್ ಗೆದ್ದಾಗ ಸದಸ್ಯರ ಜೊತೆಗೆ ಬಂದ ಹಣದಲ್ಲಿ ಶೇರ್ ಸರಿಯಾಗಿ ಕೊಡುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಸಂಗೀತಾ ಕೂಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರ ಮಧ್ಯ ಮಾತಿಗೆ ಮಾತು ಬೆಳೆದಿದೆ. ತಂಡದೊಳಗೆ ಕಾಣಿಸಿಕೊಂಡಿರುವ ಈ ಬಿರುಕು ಗೆಲುವಿಗೆ ಅಡ್ಡಗಾಲಾಗಬಹುದಾ? ಉಳಿದ ಸದಸ್ಯರೂ ತಮ್ಮ ತಂಡದ ನಾಯಕರ ವಿರುದ್ಧ ಮಾತಾಡಬಹುದಾ?
ಈ ಕುತೂಹಲ ತಣಿಯಲು ಬಿಗ್ ಬಾಸ್ ವೀಕ್ಷಿಸಿ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.