ಬೆಂಗಳೂರು, (www.thenewzmirror.com):
ಬಿಎಂಟಿಸಿ ಸಿಬ್ಬಂದಿ ಅಂದ್ರೆ ಅವ್ರಿಗೆ ಮಾನವೀಯತೆ ಇರೋದಿಲ್ಲ.. ಪ್ರಯಾಣಿಕರ ಹತ್ತಿರ ಮನಸ್ಸಿಗೆ ಬಂದಂತೆ ನಡೆದುಕೊಳ್ತಾರೆ ಅಂತೆಲ್ಲಾ ಆರೋಪಗಳು ಕೇಳಿಬರ್ತಿವೆ.. ಆದ್ರೆ ಇದ್ರ ಹೊರತಾಗಿಯೂ ಸಿಬ್ಬಂದಿಯಲ್ಲಿ ಕರ್ತವ್ಯ ಪ್ರಜ್ಞೆಯ ಜತೆಗೆ ಮನುಷ್ಯತ್ವ ಇದೇ ಅನ್ನೋದನ್ನ ಮತ್ತೊಮ್ಮೆ ತೋರಿಸಿದ್ದಾರೆ.
ಬಿಎಂಟಿಸಿ ಬಸ್ ನಲ್ಲಿ ನವೆಂಬರ್ 22 ರ ಮಧ್ಯಾಹ್ನ ಬಿಎಂಟಿಸಿ ಬಸ್ ಹತ್ತಿದ್ರು. ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿಯ ಬಸ್ ಸ್ಟಾಪ್ ನಲ್ಲಿ 6.31 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನು ಕಳೆದುಕೊಂಡಿದ್ದಾರೆ.
ಮಹಿಳೆ ಕಳೆದುಕೊಂಡಿದ್ದ ಬ್ಯಾಗನ್ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಸಿಕ್ಕಿದೆ.. ತಕ್ಷಣ ಈ ವಿಚಾರವನ್ನ ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಇದಾದ ಬಳಿಕ ಸಂಸ್ಥೆಯ ಹಿರಿಯ ಅಧಿಕಾರಿಗಳು ಆ ಬ್ಯಾಗನ್ನ ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆಯನ್ನ ಮೆರೆಯೋ ಜತೆಗೆ ಕರ್ತವ್ಯ ಪ್ರಜ್ಞೆಯನ್ನೂ ಮೆರೆದಿದ್ದಾರೆ.
ಒಂದು ಸಾವಿರ ನಗದು, ಚಿನ್ನದ ಮಾಂಗಲ್ಯ ಸರ, ಎರಡು ಚಿನ್ನದ ಚೈನ್, ನಾಲ್ಕು ಚಿನ್ನದ ಬಳೆ, ಎರಡು ಕಿವಿಯೋಲೆ, ಮೂರು ಉಂಗುರ , ಒಂದು ಮೊಬೈಲ್ ಫೋನ್ ಇದೀಗ ವಾರಸುದಾರರಿಗೆ ಸಿಬ್ಬಂದಿ ನೀಡಿದ್ದಾರೆ.
ಈ ಕುರಿತಂತೆ ಮಹಿಳೆಯ ಪತಿ ಬಿಎಂಟಿಸಿಗೆ ಪತ್ರ ಬರೆದಿದ್ದು,
ಹೆಬ್ಬಾಳದ ಎಸ್ಟೀಮ್ ಮಾಲ್ ಬಸ್ ನಿಲ್ದಾಣದ ಬಳಿ ಬಿಎಂಟಿಸಿ ಸಿಬ್ಬಂದಿ ತಮ್ಮ ಕೈಗೆ ಸಿಕ್ಕ 6.31 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಿದ್ದ ಬ್ಯಾಗನ್ನ ಮರಳಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಬ್ಬಂದಿಗೆ ಗೌರವ ನೀಡಿ ಅಂತ ಮನವಿ ಮಾಡಿದ್ದಾರೆ.