ಬೆಂಗಳೂರು, (www.thenewzmirror.com ) ;
2000 ನೋಟಿನ ವಿಚಾರದಲ್ಲಿ RBI ತೆಗೆದುಕೊಂಡಿರುವ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಭಾರೀ ಗೊಂದಲ ಸೃಷ್ಟಿ ಮಾಡಿದೆ. ಈಗಾಗಲೇ 2000 ಮುಖಬೆಲೆ ನೋಟು ಇರುವವರು ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದ್ರೂ ಗೊಂದಲ ಮಾತ್ರ ಹೆಚ್ಚಾಗುತ್ತಿದೆ.
ಇದೆಲ್ಲದರ ನಡುವೆ ಪೆಟ್ರೋಲ್, ಬಂಕ್, ಹಾಲಿನ ಬೂತ್, ಸಾರ್ವಜನಿಕ ಸಾರಿಗೆಯಲ್ಲಿ ಬಳಸಬೇಕಾಬೇಡ್ವಾ ಅನ್ನೋ ಗೊಂದಲವಿದ್ದು, ಬಿಎಂಟಿಸಿ ಹೊರಡಿಸಿದ ಒಂದು ಆದೇಶ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬಿಎಂಟಿಸಿ ಡಿಪೋ 39 ರಲ್ಲಿ ಒಂದು ಆದೇಶ ಹೊರಡಿಸಿದ್ದು, ನಿರ್ವಾಹಕರು ಪ್ರಯಾಣಿಕರಿಂದ 2000 ಮುಖ ಬೆಲೆ ನೋಟು ಪಡೆಯಬಾರದು ಎಂಬ ಆದೇಶ ಹೊರಡಿಸಲಾಗಿತ್ತು. ಸಾರ್ವಜನಿಕವಲಯದಲ್ಲಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಯಾಕಂದ್ರೆ ಈ ಹಿಂದೆ ನೋಟು ಬ್ಯಾನ್ ಮಾಡಿದಾಗ ಬಿಎಂಟಿಸಿಯಲ್ಲಿ ಅವಧಿವರೆಗೂ ಚಲಾವಣೆ ಮಾಡೋಕೆ ಅವಕಾಶ ಕೊಡಲಾಗಿತ್ತು.
![](https://thenewzmirror.com/wp-content/uploads/2023/05/IMG-20230528-WA0030.jpg)
ಆದರೆ ಈ ಬಾರಿ ಈ ರೀತಿ 2000 ಮುಖಬೆಲೆನೋಟು ಪಡೆಯದಂತೆ ಆದೇಶ ಹೊರಡಿಸಿ ನಿಗಮ ಪೇಚಿಗೆ ಸಿಲುಕಿತ್ತು. ಯಾವಾಗ ಸಾರ್ವಜನಿಕವಲಯದಲ್ಲಿ ವಿರೋಧಹೆಚ್ಚಾಯ್ತೋ ಆದೇಶ ಹೊರಡಿಸಿದ 10 ಗಂಟೆಯೊಳಗೆ ಆದೇಶ ವಾಪಾಸ್ ಪಡೆದಿದೆ.
ಆದೇಶ ವಾಪಾಸ್ ಪಡೆದಿದ್ದಲ್ಲದೇ BMTC ಕೇಂದ್ರ ಕಛೇರಿಯಿಂದ ಯಿಂದ , ಬಸ್ಸಿನಲ್ಲಿ ನಿರ್ವಾಹಕರು ರೂ. 2000 ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶ ಹೊರಡಿಸಿರುವುದಿಲ್ಲ.
ಹೊಸ ಕೋಟೆ ಘಟಕದಿಂದ ಮಾತ್ರ ಈ ರೀತಿ ತಪ್ಪಾದ ಆದೇಶ ನೀಡಲಾಗಿದ್ದು, ತದನಂತರ ಈ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿಸಿ ಬಸ್ಸುಗಳಲ್ಲಿ ರೂ 2000 ನೋಟುಗಳನ್ನು ಸ್ವೀಕರಿಸಲಾಗುತ್ತದೆ. ಎಂದು ಮರು ಆದೇಶ ಹೊರಡಿಸಿದೆ.