ಬೆಂಗಳೂರು, (www.thenewzmirror.com) ;
ಬಿಎಂಟಿಸಿ ಆಡಳಿತ ವರ್ಗ ಹಾಗೂ ನೌಕರರ ನಡುವಿನ ಅಸಮಧಾನ ಕೊನೆಗೂ ಬಹಿರಂಗವಾಗಿದೆ. ಇಷ್ಟು ದಿನ ಬೂದಿ ಮುಚ್ಚಿದ ಕೆಂಡಂತಿದ್ದ ಅಸಮಧಾನ ಹಾಗೂ ಬೇಸರದ ಕಿಡಿ ಕೊನೆಗೂ ಬ್ಲಾಸ್ಟ್ ಆಗಿದೆ. ಬಿಎಂಟಿಸಿ ಎಂಡಿ ವಿರುದ್ಧವೇ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಸಾರಿಗೆ ನೌಕರರು ಪ್ರತಿಭಟನೆ ಮಾಡಿದ್ದರು. ಅದಾನ ನಂತರ ವಿನಾಕಾರಣ ನೌಕರರಿಗೆ ಕಿರುಕುಳ ನೀಡುವುದು.., ವಿನಾಕಾರಣ ನೊಟೀಸ್ ನೀಡುವ ಕೆಲ್ಸ ಆಗುತ್ತಿದೆ ಎಂದು ಅಸಮಧಾನ ಹೊರಹಾಕುತ್ತಿದ್ದರು. ತಮ್ಮ ಸಮಸ್ಯೆ ಉನ್ನತ ಮಟ್ಟದಲ್ಲಿ ಹೇಳೋಣ ಅಂದ್ರೆ ಹಾಲಿ ಇರುವ ಎಂಡಿ ನಮ್ಮ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಿಲ್ಲ. ಹೀಗಿರುವಾಗ ನಮ್ಮ ಕಷ್ಟಗಳನ್ನ ಯಾರ ಬಳೀ ಹೇಳಿಕೊಳ್ಳುವುದು ಅಂತ ಬೇಸರದ ಮಾತುಗಳನ್ನ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಇನ್ನೊಂದು ವಿಶೇಷ ಏನೆಂದರೆ ಸಾರಿಗೆ ನೌಕಕರು ಎಂಡಿ ಮೇಲಿನ ಅಸಮಧಾನವನ್ನ ಸ್ವತಃ ಎಂಡಿಗೆ ಪತ್ರ ಬರೆದಿದ್ದು, ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಕೆಎಸ್ಆರ್ಟಿಸಿ ಸ್ಪಾಫ್ ಅಂಡ್ ವರ್ಕಸ್ ಫೆಡರೇಷನ್ ನ ಲೆಟರ್ ಹೆಡ್ ನಲ್ಲಿ ಮೂರು ಪುಟಗಳ ಸುದೀರ್ಘ ಪತ್ರ ಬರೆದು ಅಸಮಧಾನ ಹೊರಹಾಕಿದ್ದಾರೆ. ಪತ್ರದ ಸಾರಾಂಶ ಏನೆಂದರೆ.., ನೌಕರರ ಸಮಸ್ಯೆ ಬಗ್ಗೆ ಎಂ, ಡಿ ಸತ್ಯವತಿ ಆರಂಭದ ದಿನದಿಂದ್ಲೂ ಸ್ವಂದಿಸುತ್ತಿಲ್ಲ.., ಎಂ,ಡಿಯಾಗಿ ಬಂದ ಬಳಿಕ ಬಿಎಂಟಿಸಿಯಲ್ಲಿ ದರ್ಬಾರ್ ಮಾಡ್ತಿದ್ದಾಂತೆ..! ಅಧಿಕಾರಿ ವರ್ಗದವರನ್ನ ಹೊರೆತುಪಡಿಸಿ ಸಿಬ್ಬಂದಿಯನ್ನ ಕಚೇರಿಗೂ ಸೇರಿಸುತ್ತಿಲ್ವಾಂತೆ…,
ಡಿಪೋ ಮ್ಯಾನೇಂಜರ್ ಸೇರಿ ಇತರೆ ಅಧಿಕಾರಿಗಳನ್ನ ಕೆಟ್ಟ ಪದಗಳಿಂದ ಬೈಯುತ್ತಿದ್ದಾರಂತೆ.., ಜನಪರ ಸೇವಾ ಸಂಸ್ಥೆ ಜವಾಬ್ದಾರಿ ಹುದ್ದೆಯಾಗಿರೋ ಎಂ. ಡಿ ಸ್ಥಾನವನ್ನ ನಿಮಗೆ ನೀಡಬಾರದಿತ್ತು ಅಂತ ಉಲ್ಲೇಖಿಸಿದ್ದಾರೆ.
BMTC ಎಂಡಿ ಸಂಸ್ಥೆ ಹಾಗೂ ನೌಕರರ ಹಿತ ಕಾಪಾಡುವಲ್ಲಿ ಸಣಪೂರ್ಣ ವಿಫಲವಾಗಿದ್ದಾರೆ. ಹೀಗಾಗಿ ನೌಕರರ ಪಾಲಿಗೆ ಧೂಮಕೇತುವಿನ ರೀತಿ ಕಾಣುತ್ತೀರಿ.., ನಿಮ್ಮ ನಡೆ ಬದಲಾಯಿಸಿಕೊಳ್ಳದಿದ್ದರೆ ಸಾರಿಗೆ ಹಾಗೂ ಸರ್ಕಾರದ ಗಮನಕ್ಕೆ ತರುವ ಕೆಲ್ಸ ಮಾಡಬೇಕಾಗುತ್ತದೆ. ಹಾಗೆನೇ ನಮ್ಮನ್ನ ಕಡೆಗಣನೆ ಮಾಡುತ್ತಿರುವ ನೀವುಗಳು ನಡೆಸುವ ಯಾವುದೇ ಕಾರ್ಯಕ್ರಮಕ್ಕೂ ನಾವು ಬರೋದಿಲ್ಲ ಅಂತ ಪತ್ರದಲ್ಲಿ ಉಲ್ಲೇಖಿಸಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ ನೌಕರರು.