ಬೆಂಗಳೂರು, (www.thenewzmirror.com) :
ಬಿಎಂಟಿಸಿ, ಬೆಂಗಳೂರು ನಗರ ಜನತೆಯ ಸಂಚಾರದ ಜೀವನಾಡಿ, ಸುಮಾರು ಆರೂವರೆ ಸಾವಿರ ಬಸ್ ಗಳ ಮೂಲಕ ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ಕೆಲಸವನ್ನ ಮಾಡುತ್ತಿದೆ. ದೇಶದಲ್ಲೇ ಬೆಸ್ಟ್ ಟ್ರಾನ್ಸ್ ಫೋರ್ಟ್ ಕಾರ್ಪೋರೇಷನ್ ಎನ್ನುವ ಖ್ಯಾತಿಗೆ ಒಳಗಾಗಿರುವ ಸಂಸ್ಥೆ ವಿರುದ್ಧ ಇದೀಗ ಅಸಮಧಾನ ವ್ಯಕ್ತವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಎಂದರೆ ಕಿಲ್ಲರ್ ಬಿಎಂಟಿಸಿ ಎನ್ನುವ ಖ್ಯಾತಿ ಗಳಿಸಿದೆ. ಹೀಗಾಗಿ ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುತ್ತಿರುವ ಬಸ್ ಗಳ ಸೇವೆ ಸ್ಥಗಿತಗೊಳಿಸುವಿರಾ ಎಂಬ ಪ್ರಶ್ನೆಯನ್ನ ನೊಂದ ಚಾಲಕರೊಬ್ಬರು ಸಾರಿಗೆ ಸಚಿವರಿಗೆ ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನವೀನ್ ಎನ್ನುವ ನೊಂದ ಚಾಲಕರೊಬ್ಬರು ಸಾರಿಗೆ ಸಚಿವರಿಗೆ, ಸಾರಿಗೆ ಇಲಾಖೆ ಆಯುಕ್ತರಿಗೆ ಹ್ಯಾಷ್ ಟ್ಯಾಗ್ ಮಾಡಿ ಪ್ರಶ್ನೆಯನ್ನ ಕೇಳಿದ್ದಾರೆ.
ಅಷ್ಟಕ್ಕೂ ನೊಂದ ಬೈಕ್ ಟ್ಯಾಕ್ಸಿ ಚಾಲಕ ನವೀನ್ ಎನ್ನುವವರು ಸಾರಿಗೆ ಇಲಾಖೆಗೆ ಪ್ರಶ್ನೆ ಮಾಡೋದಿಕ್ಕೆ ಒಂದಿಷ್ಟು ಕಾರಣವನ್ನೂ ಕೊಟ್ಟಿದ್ದಾರೆ. ಇತ್ತೀಚೆಗೆ ಸಾರಿಗೆ ಇಲಾಖೆ ಹೆಣ್ಣು ಮಕ್ಕಳಿಗೆ ಬೈಕ್ ಟ್ಯಾಕ್ಸಿ ಸುರಕ್ಷತೆ ಇಲ್ಲ ಎಂದು ಹೇಳಿ ಬೈಕ್ ಟ್ಯಾಕ್ಸಿ ಸೇವೆಯನ್ನ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಅಷ್ಟಕ್ಕೂ ಸಾರಿಗೆ ಇಲಾಖೆಯಿಂದ ಇದೂವರೆಗೂ ಅನುಮತಿ ಪಡೆದಿಲ್ಲ ಅನ್ನೋದು ಖಾಸಗಿ ವಾಹನ ಮಾಲೀಕರ ಒಕ್ಕೂಟದ ಆರೋಪ. ಸದ್ಯಕ್ಕೆ ಈ ಪ್ರಕರಣ ಕೋರ್ಟ್ ಅಂಗಳದಲ್ಲಿದ್ದು, ಇನ್ನೂ ವಿಚಾರಣೆ ಹಂತದಲ್ಲಿದೆ.
ಹೆಣ್ಣು ಮಕ್ಕಳಿಗೆ ಸುರಕ್ಷತೆ ಕಾರಣವೊಡ್ಡಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಸಿರೋದ್ರಿಂದ ಇದರಿಂದಲೇ ಜೀವನ ನಡೆಸುತ್ತಿದ್ದ ಸಾವಿರಾರು ಬೈಕ್ ಟ್ಯಾಕ್ಸಿ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಬೈಕ್ ಟ್ಯಾಕ್ಸಿಗಳನ್ನ ಉಪಯೋಗಿಸುವ ಮಹಿಳಾ ಪ್ರಯಾಣಿಕರ ಮೇಲೆ ಮಾತ್ರ ದಬ್ಬಾಳಿಕೆ, ದೌರ್ಜನ್ಯ, ಕಿರುಕುಳ ಆಗುತ್ತಿದ್ಯಾ.., ಬೈಕ್ ಟ್ಯಾಕ್ಸಿ ಗಳಿಂದ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ ಎಂದು ಹೇಳುವವರು ಆಟೋ ಮತ್ತು ಕ್ಯಾಬ್ ಗಳಲ್ಲಿ ಎಷ್ಟು ಸುರಕ್ಷತೆ ಇದೆ ಎನ್ನುವುದನ್ನ ಮೊದಲು ತಿಳಿಸಿ ಹಾಗೆನೇ ಇದುವರೆಗೂ ಆಟೋ ಮತ್ತು ಕ್ಯಾಬ್ ಗಳಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎನ್ನುವುದನ್ನ ದಾಖಲೆ ಬಿಡುಗಡೆ ಮಾಡಿ ಅಂತಾನೂ ಮನವಿ ಮಾಡಿದ್ದಾರೆ.
ಇದು ಒಂದು ಭಾಗವಾದರೆ ಬಿಎಂಟಿಸಿ ಬಸ್ ನಿಂದ ಪ್ರತಿ ದಿನ ಒಂದಲ್ಲಾ ಒಂದು ರಸ್ತೆ ಅಫಘಾತಗಳಾಗುತ್ತಿವೆ. ಇದರಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಬಿಎಂಟಿಸಿಯನ್ನ ಕಿಲ್ಲರ್ ಬಿಎಂಟಿಸಿ ಎಂದು ಕರೆಯುತ್ತಿದ್ದಾರೆ. ಇದೂವರೆಗೂ ಎಷ್ಟು ಮಂದಿ ಬಿಎಂಟಿಸಿ ಬಸ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿಯನ್ನ ಬಹಿರಂಗ ಪಡಿಸಿ ಅಂತೆಲ್ಲಾ ಕೋರಿಕೊಂಡಿದ್ದಾರೆ. ಸಾರ್ವಜನಿಕರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಬಿಎಂಟಿಸಿಯನ್ನ ರದ್ದು ಮಾಡುವಿರಾ ಎಂದು ಪ್ರಶ್ನೆ ಹಾಕಿದ್ದಾರೆ.
ನೊಂದ ಬೈಕ್ ಟ್ಯಾಕ್ಸಿ ಚಾಲಕ ನವೀನ್ ಅವರ ಪೋಸ್ಟ್ ಏನು ಅನ್ನೋದನ್ನ ನೋಡುವುದಾದರೆ..,
ಮಾನ್ಯ ಸಾರಿಗೆ ಇಲಾಖೆ ಸಚಿವರೇ ಹಾಗೂ ಇಲಾಖೆ ಆಯುಕ್ತರೇ
ಬೈಕ್ ಟ್ಯಾಕ್ಸಿ ಗಳಿಂದ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ ಎಂದು ಹೇಳುವವರು ಆಟೋ ಮತ್ತು ಕ್ಯಾಬ್ ಗಳಲ್ಲಿ ಎಷ್ಟು ಸುರಕ್ಷತೆ ಇದೆ ಎಂದು ತಿಳಿಸಿ.
ಇದುವರೆಗೂ ಆಟೋ ಮತ್ತು ಕ್ಯಾಬ್ ಗಳಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ನೀವೇ ತಿಳಿಸಿ.
ಇನ್ನೂಂದು ವಿಷಯ ಇದು ಅತ್ಯಾಚಾರಕ್ಕಿಂತ ಹೆಚ್ಚಿನದು ಅದು ಏನು ಅಂದ್ರೆ ನಿಮ್ಮ ಸಂಸ್ಥೆಯ ಬಿಎಂಟಿಸಿ ಬಸ್ ಗಳು. ಈ ಬಿಎಂಟಿಸಿ ಗೆ ಮತ್ತೊಂದು ಹೆಸರು ಇದೆ.., ನಾನೇ ಹೇಳುವೆ ಕೇಳಿಸಿಕೊಳ್ಳಿ ನಿಮ್ಮ ಸಂಸ್ಥೆಯ ಬಿಎಂಟಿಸಿಗೆ ಇರುವ ಮತ್ತೊಂದು ಹೆಸರೇ ಕಿಲ್ಲರ್ ಬಿಎಂಟಿಸಿ ಅಂತ ಇದುವರೆಗೂ ನಿಮ್ಮ ಬಿಎಂಟಿಸಿ ಯಿಂದ ಎಷ್ಟು ಜನರ ಸಾವು ಗಳಾಗಿದೆ ಗೊತ್ತಾ, ಹಾಗಾದರೆ ಬಿಎಂಟಿಸಿ ಸಾರ್ವಜನಿಕರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ ಅಂತ ಬಿಎಂಟಿಸಿ ಬಸ್ ನ್ನು ರದ್ದು ಮಾಡುವಿರಾ? ಇದಕ್ಕೆ ಉತ್ತರ ಕೊಡಿ
ಇಂತಿ
ನೊಂದ ಬೈಕ್ ಟ್ಯಾಕ್ಸಿ ಚಾಲಕ
ನವೀನ್
#transportministerkarnataka
#transportcommissionerkarnataka
#RamalingaReddy
#uberbike
#Rapidbike
ಈ ರೀತಿ ಪೋಸ್ಟ್ ಮಾಡಿದ್ದಲ್ಲದೇ ಸಾರಿಗೆ ಸಚಿವರಿಗೆ ಸಾರಿಗೆ ಇಲಾಖೆ ಆಯುಕ್ತರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹಾಗೆನೇ ಊಬರ್ ಬೈಕ್ ಹಾಗೂ ರ್ಯಾಪಿಡೋ ಬೈಕ್ ನವರಿಗೆ ಟ್ಯಾಗ್ ಮಾಡಿದ್ದಾರೆ.