ಬೆಂಗಳೂರು, (www.thenewzmirror.com) ;
ರಾಜ್ಯದಲ್ಲಿ ಶಕ್ತಿಯೋಜನೆ ಜಾರಿಯಾದ ಬಳಿಕ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಅದರಲ್ಲೂ ಕರ್ನಾಟಕದ ಯಾವ ಮೂಲೆಯ ವಿಳಾಸ ಇದ್ದರೂ ಯೋಜನೆಯಡಿ ಫ್ರೀ ಟಿಕೆಟ್ ನೀಡಬೇಕು ಅಂತಾನೂ ಸೂಚಿಸಲಾಗಿದೆ.
ಆದರೆ ಬೆಂಗಳೂರಿನ ವಿಳಾಸವಿರುವ ವಿದ್ಯಾರ್ಥಿಯನ್ನ ಬಿಎಂಟಿಸಿ ಕಂಡಕ್ಟರ್ ಬಸ್ ನಿಂದ ಇಳಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ವಿದ್ಯಾರ್ಥಿಯನ್ನ ಕೆಳಗಿಳಿಸೋಕೆ ಕಾರಣ ಆಧಾರ್ ಅಡ್ರೆಸ್ ತಮಿಳಿನಲ್ಲಿ ಇತ್ತು ಎಂಬ ಕಾರಣಕ್ಕೆ.
ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುವಾಗ ಆಧಾರ್, ವೋಟರ್ ಐಡಿ ಯಾವುದಾದರೂ ಸರ್ಕಾರಿ ದಾಖಲೆ ತೋರಿಸುವುದು ಕಡ್ಡಾಯ. ಆಧಾರ್ ನಲ್ಲಿ ಬೆಂಗಳೂರು ವಿಳಾಸವಿದ್ದರೂ ತಮಿಳಿನಲ್ಲಿ ಮುದ್ರಿಸಿರುವ ಕಾರಣ ಇದು ಈ ರಾಜ್ಯಕ್ಕೆ ಅನ್ವಯಿಸುವುದಿಲ್ಲ, ಇದು ದಾಖಲೆ ನಕಲಿ ಎಂದು ಶಂಕಿಸಿ ಬಿಎಂಟಿಸಿ ಕಂಡಕ್ಟರ್ ಕಾಲೇಜು ವಿದ್ಯಾರ್ಥಿಯನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ಓದುತ್ತಿದ್ದ ವಿದ್ಯಾರ್ಥಿನಿ ಶಿವಾಜಿನಗರದಿಂದ ಲಿಂಗರಾಜಪುರದ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಂಡಕ್ಟರ್ ಒತ್ತಾಯದಿಂದ ಕೆಳಗೆ ಇಳಿಸಿದ್ದಾಗಿ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.