ಬೆಂಗಳೂರು, (www.thenewzmirror.com) :
ದೇಶದಲ್ಲೇ ನಂಬರ್ ಓನ್ ಸಾರಿಗೆ ಸಂಸ್ಥೆ ಬಿಎಂಟಿಸಿ ಇದೀಗ ಹೊಸ ಟೂರ್ ಪ್ಯಾಕೇಜ್ ಅನ್ನ ಪರಿಚಯಿಸಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಪರಿಚ ಯಿಸಿರುವ ಈ ಪ್ಯಾಕೇಜ್ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ.
ಮಾರ್ಚ್ 8 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬಿಎಂಟಿಸಿ ವಿಶೇಷ ಪ್ಯಾಕೇಜ್ ಒಂದನ್ನ ಘೋಷಣೆ ಮಾಡಿದೆ. ಇದು ಟೂರ್ ಪ್ಯಾಕೇಜ್ ಆಗಿದ್ದು, ಈಶ ಫೌಂಡೇಷನ್ ಟೂರ್ ಪ್ಯಾಕೇಜ್ ಎಂದು 57 ಸೆಕೆಂಡಿನ ವೀಡಿಯೋ ಒಂದನ್ನ ರಿಲೀಸ್ ಮಾಡಿದೆ. ಶಿವರಾತ್ರಿಯಂದು ಮಧ್ಯಾಹ್ನ 12.30 ಕ್ಕೆ ಮೆಜೆಸ್ಟಿಕ್ ನಿಂದಹೊರಡಲಿವೆ. ಈ ಬಸ್ ಗಳು ಮೊದಲು ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ, ಸರ್ ಎಂ. ವಿಶ್ವೇಶ್ವರಯ್ಯ ಮ್ಯೂಜಿಯಂ ಮತ್ತು ಸಮಾಧಿ, ಬಳಿಕ ರಂಗಸ್ಥಳ ರಂಗನಾಥ್ ಸ್ವಾಮಿ ದರ್ಶನ ಪಡೆದು ಆನಂತರ ಈಶ ಫೌಂಡೇಷನ್ ಬಳಿ ತೆರಳಲಿದೆ.
ಈ ವಿಶೇಷ ಟೂರ್ ಪ್ಯಾಕೇಜ್ ಗೆ 500 ದರ ಫಿಕ್ಸ್ ಮಾಡಿರುವ ನಿಗಮದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.