ಬೆಂಗಳೂರು/ನವದೆಹಲಿ, (www.thenewzmirror.com) :
ಮುಂಬರುವ ಲೋಕಸಭಾ ಚುನಾವಣೆ 2024 ಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದ್ದು, ಪ್ರಧಾನಿ ಮೋದಿ ಸೇರಿ 195 ಅಭ್ಯರ್ಥಿಗಳನ್ನ ಒಳಗೊಂಡಿರುವ ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್ ಮಾಡಲಾಗಿದೆ
ಪ್ರಧಾನಿ ಮೋದಿ ವಾರಾಣಾಸಿಯಿಂದ ಸ್ಪರ್ಧಿಸಲಿದ್ದಾರೆ. ಇನ್ನು ಈ ಮೊದಲ ಪಟ್ಟಿಯಲ್ಲಿ 28 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ದೆಹಲಿಯಲ್ಲಿ ತಡರಾತ್ರಿ ನಡೆದ ಪಕ್ಷದ ಸಭೆಯ ನಂತರ ಬಹುನಿರೀಕ್ಷಿತ ಅಭ್ಯರ್ಥಿಗಳ ಮೊದಲ ಪಟ್ಟಿ ಬಂದಿದೆ.
ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತ್ರ ಮಾತಾನಾಡಿದ ಬಿಜೆಪಿ ನಾಯಕ ವಿನೋದ್ ತಾವ್ಡೆ, “ಕಳೆದ ಒಂದು ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸುತ್ತಿದ್ದೇವೆ. ಈ ಬಾರಿ ಬಿಜೆಪಿ 400 ಕ್ಷೇತ್ರಗಳನ್ನ ಗುರಿ ಹೊಂದಿದೆ. ಕೇಂದ್ರದಲ್ಲಿ ಮತ್ತೆ ಮೋದಿಯವ್ರ ಸರ್ಕಾರ ರಚನೆಯಾಗಲಿದೆ” ಎಂದು ಹೇಳಿದರು.
ಪ್ರತಿ ರಾಜ್ಯದಲ್ಲಿ ಎಷ್ಟು ಸ್ಥಾನಗಳು
• ಉತ್ತರ ಪ್ರದೇಶ: 51 ಸ್ಥಾನಗಳು
• ಪಶ್ಚಿಮ ಬಂಗಾಳ: 20
• ಮಧ್ಯಪ್ರದೇಶ: 24
• ಗುಜರಾತ್: 15
• ರಾಜಸ್ಥಾನ: 15
• ಕೇರಳ: 12
• ತೆಲಂಗಾಣ: 9
• ಅಸ್ಸಾಂ: 11
• ಜಾರ್ಖಂಡ್: 11
• ಛತ್ತೀಸ್ ಗಢ: 11
• ದೆಹಲಿ: 5
• ಜಮ್ಮು ಮತ್ತು ಕಾಶ್ಮೀರ: 2
• ಉತ್ತರಾಖಂಡ: 3
• ಅರುಣಾಚಲ ಪ್ರದೇಶ: 2
• ಗೋವಾ: 1
• ತ್ರಿಪುರಾ: 1
• ಅಂಡಮಾನ್ ಮತ್ತು ನಿಕೋಬಾರ್: 1
• ದಮನ್ ಮತ್ತು ದಿಯು: 1
ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.!
• ಬಿಜೆಪಿ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಉತ್ತರ ಪ್ರದೇಶದಿಂದಲೇ ಅತೀ ಹೆಚ್ಚು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. ಉತ್ತರ ಪ್ರದೇಶದಿಂದ 51, ಪಶ್ಚಿಮ ಬಂಗಾಳ 26, ಮಧ್ಯಪ್ರದೇಶ 24, ಗುಜರಾತ್ ದ 15, ರಾಜಸ್ಥಾನ 15, ಕೇರಳ 12, ತೆಲಂಗಾಣ 9, ಅಸ್ಸಾಂ 11, ಜಾರ್ಖಂಡ್ 11, ಛತ್ತೀಸ್‌ಗಢ 11, ದೆಹಲಿ 11, ಜಮ್ಮು ಮತ್ತು ಕಾಶ್ಮೀರ 5, ಉತ್ತರಾಖಂಡ 3, ಅರುಣಾಚಲ, ಗೋವಾ, ತ್ರಿಪುರಾ, ಅಂಡಮಾನ್-ನಿಕೋಬಾರ್ ಮತ್ತು ದಮನ್ ಮತ್ತು ದಿಯುನಲ್ಲಿ ತಲಾ 1 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆ ?
ಪ್ರಧಾನಿ ನರೇಂದ್ರ ಮೋದಿ -ವಾರಣಾಸಿ
ವಿಷ್ಣುಪಾದ ರೇ – ಅಂಡಮಾನ್ ಮತ್ತು ನಿಕೋಬಾರ್
ಕಿರಣ್ ರಿಜಿಜು – ಅರುಣಾಚಲ ಪಶ್ಚಿಮ
ತಾಪಿರ್ ಗಾಂವ್ – ಅರುಣಾಚಲ ಪೂರ್ವ
ಕೃಪಾನಾಥ್ ಮಲ್ಲಗೆ – ಕರೀಂಗಂಜ್
ಪರಿಮಳಾ ಶುಕ್ಲಾ ವೈದ್ಯ
ಅಮರ್ ಸಿಂಗ್
ಬಿಜುಲಿ ಕಲಿತಾ ಮೆಡಿಗೆ – ಗುವಾಹಟಿ
ದಿಲೀಪ್ ಸಹಕಿಯಾ- ಮಂಗಲ್ದೋಯಿ
ರಂಜಿತ್ ದತ್ತಾ- ತೇಜ್‌ಪುರ
ಸುರೇಶ್ ಬೋರಾ- ನೌಗಾಂವ್
ಕಾಮಾಖ್ಯ ಪ್ರಸಾದ್ ತಾಸಾ – ಕಲಿಯಬೌರ್
ತಪನ್ ಕುಮಾರ್ ಗೊಗೋಯ್ – ಜೋರ್ಹತ್
ಸರ್ಬಾನಂದ ಸೋನೋವಾಲ್- ದ್ರಿಬುಗಢ್
ಪ್ರಧಾನ್ ಬರೋವಾ – ಲಖಿಂಪುರ
ಚಿಂತಾಮಣಿ ಮಹಾರಾಜ – ಸರ್ಗುಜ
ರಾಯಗಢ್ ಟು ರಾಧೇಶ್ಯಾಮ್ – ರಾಥಿಯಾ
ಜಾಜ್ಗೀರ್ ಚಂಪಾ- ಕಮಲೇಶ್ ಜಂಗ್ಡೆ
ಕೊರ್ಬಾ – ಸರೋಜ್ ಪಾಂಡೆ
ಬಿಲಾಸ್ಪುರ – ತೋಖಾನ್ ಸಾಹು
ರಾಜನಂದಗಾಂವ್ – ಸಂತೋಷ್ ಪಾಂಡೆ
ದುರ್ಗ್ – ವಿಜಯ್ ಬಘೇಲ್
ಬ್ರಿಜ್ಮೋಹನ್ ಅಗರ್ವಾಲ್ – ರಾಯ್ಪುರ
ರೂಪಕುಮಾರಿ ಚೌಧರಿ – ಮಹಾಸಮುಂಡ್
ಬಸ್ತಾರ್- ಮಹೇಶ್ ಕಶ್ಯಪ್
ಭಜರಾಜ್ ನಂದ್- ಕಂಕರ್
ಜಿತೇಂದ್ರ ಸಿಂಗ್ – ಉಧಂಪುರ
ಗೊಡ್ಡಾ- ನಿಶಿಕಾಂತ್ ದುಬೆ
ಅರ್ಜುನ್ ಮುಂಡಾ – ಪೆಗ್
ಅನ್ನಪೂರ್ಣ ದೇವಿ – ಕೊಡೆರ್ಮ
ಚಾಂದಿನಿ ಚೌಕ- ಪ್ರವೀಣ್ ಖಂಡೇಲ್ವಾಲ್
ಬಾನ್ಸುರಿ ಸ್ವರಾಜ್ – ನವದೆಹಲಿ
ಭೋಪಾಲ್- ಅಲೋಕ್ ಶರ್ಮಾ
ಗುಣ – ಜ್ಯೋತಿರಾದಿತ್ಯ ಸಿಂಧಿಯಾ
ಸಾಗರ್ – ಲತಾ ವಾಂಖೆಡೆ
ವೀರೇಂದ್ರ ಖಾತಿ- ಟೀಕಾಮ್‌ಗರ್
ದಾಮೋಹ್- ರಾಹುಲ್ ಲೋಧಿ
ಖಜುರಾಹೊ- ವಿಡಿ ಶರ್ಮಾ
ಗಣೇಶ್ ಸಿಂಗ್-ಸತ್ನಾ
ಜನಾರ್ದನ್ ಮಿಶ್ರಾ- ರೇವಾ
ರಾಜೇಶ್ ಮಿಶ್ರಾ – ಸಿದ್ಧಿ
ಶಹದೋಲ್- ಹಿಮಾದ್ರಿ ಸಿಂಗ್
ಜಬಲ್ಪುರ- ಆಶಿಶ್ ದುಬೆ
ಫಗ್ಗನ್ ಸಿಂಗ್ ಕುಲಾಸ್ತೆ-ಮಾಂಡ್ಲಾ
ಹೋಶಂಗಾಬಾದ್ – ದರ್ಶನ್ ಸಿಂಗ್
ಶಿವರಾಜ್ – ವಿದಿಶಾ
ಮಹೇಂದ್ರ ಸಿಂಗ್ ಸೋಲಂಕಿ- ದೇವಾಸ್
ಸುಧೀರ್ ಗುಪ್ತಾ – ಮಂಡ್‌ಸೌರ್
ಗಜೇಂದ್ರ ಪಟೇಲ- ರತ್ಲಾಂ
ಅಲ್ವಾರ್ – ಭೂಪೇಂದ್ರ ಯಾದವ್
ಅರ್ಜುನ್ ರಾಮ್ ಮೇಘವಾಲ್- ಬಿಕಾನೆರ್
ಗಜೇಂದ್ರ ಸಿಂಗ್ ಶೇಖಾವತ್ – ಜೋಧಪುರ
ಕೈಲಾಶ್ ಚೌಧರಿ – ಬಾರ್ಮರ್
ಓಂ ಬಿರ್ಲಾ- ಕೋಟಾ
ದುಶ್ಯಂತ್ ಸಿಂಗ್ – ಝಲ್ವಾರ
ಚಿತ್ತೋರಗಢ- ಸಿಪಿ ಜೋಶಿ
ನಾಗೌರ್ ಜ್ಯೋತಿ- ಮಿರ್ಧಾ
ಗುರುವಾರ, ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ, ಪಕ್ಷವು ತನ್ನ ಮೊದಲ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯನ್ನ ನಡೆಸಿತು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವಾರು ಸದಸ್ಯರು ಲೋಕಸಭಾ ಚುನಾವಣೆಗೆ 17 ರಾಜ್ಯಗಳ ಸ್ಥಾನಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನ ನಿರ್ಧರಿಸಿದರು. ವರದಿಗಳ ಪ್ರಕಾರ, ಬಿಜೆಪಿ ಸಿಇಸಿ ಸಭೆಯಲ್ಲಿ 155ಕ್ಕೂ ಹೆಚ್ಚು ಸ್ಥಾನಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮುಖ್ಯಮಂತ್ರಿಗಳು, ರಾಜ್ಯ ಅಧ್ಯಕ್ಷರು, ಉಸ್ತುವಾರಿಗಳು, ಸಹ ಉಸ್ತುವಾರಿಗಳು ಮತ್ತು ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ 436 ಸ್ಥಾನಗಳ ಪೈಕಿ 303 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಅಲ್ಲದೇ ಅತ್ಯಧಿಕ ಬಹುಮತಗಳಿಂದ ಬಿಜೆಪಿ ಅಧಿಕಾರದ ಗದ್ದೆಗೆಯನ್ನು ಮರಳಿ ಪಡೆದಿತ್ತು. ಅದ್ರಲ್ಲೂ 51 ಸ್ಥಾನಗಳಲ್ಲಿ ಎದುರಾಳಿ ಪಕ್ಷಗಳು ಠೇವಣಿ ಕಳೆದುಕೊಂಡಿದ್ದವು.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) 351 ಸ್ಥಾನಗಳಿಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) 90 ಸ್ಥಾನಗಳನ್ನು ಮತ್ತು ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ 15 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ 303 ಸ್ಥಾನಗಳೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೆಸ್ ಮಾತ್ರವಲ್ಲದೇ ಡಿಎಂಕೆಗೆ 24, ತೃಣಮೂಲ ಕಾಂಗ್ರೆಸ್‌ಗೆ 22 ಮತ್ತು ವೈಎಸ್‌ಆರ್‌ಸಿಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.