ಬೆಂಗಳೂರು, (www.thenewzmirror.com);
ಲೋಕಸಮರ ಮುಗಿದ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಪು ಚುನಾವಣೆಯಲ್ಲಿ ಮತದಾರ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳನ್ನ ತಿರಸ್ಕಾರ ಮಾಡಿದ್ದಾರೆ ಅನ್ನೋದು ಇಂದು ಪ್ರಕಟವಾದ ಫಲಿತಾಂಶದಿಂದ ಗೊತ್ತಾಗಿದೆ. ದೇಶದ ಏಳು ರಾಜ್ಯಗಳ ಪೈಕಿ 13 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ನಡೆಯುತ್ತಿರುವ ಚುನಾವಣೆ ಇದಾಗಿದ್ದರಿಂದ ಮತದಾರ ನಮ್ಮ ಪರವಾಗಿದ್ದಾರೆ ಅನ್ನೋ ಬಿಜೆಪಿ ನಿರೀಕ್ಷೆಯನ್ನ ಮತದಾರ ಹುಸಿಗೊಳಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದ್ದಲ್ಲದೆ ಇಂಡಿ ಕೂಟಕ್ಕೆ ಮತದಾರ ಜೈ ಅಂದಿದ್ದಾರೆ.
ಒಟ್ಟು 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶದಲ್ಲಿ ಇಂಡಿ ಮೈತ್ರಿ ಕೂಟ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಇಂಡಿ ಮೈತ್ರಿ ಕೂಟ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಬಿಜೆಪಿ ನಿರೀಕ್ಷೆಯನ್ನ ಹುಸಿಗೊಳಿಸಿ ಲೋಕಸಮರದ ಫಲಿತಾಂಶ ಕೊಟ್ಟಿದ್ದ ಮತದಾರ ಬಿಜೆಪಿ ಮೇಲೆ ಅಷ್ಟು ಒಲವಿಲ್ಲ ಅನ್ನೋದನ್ನ ಲೋಕಸಮರದಲ್ಲಿ ಸಾಬೀತು ಪಡಿಸಿದ್ದರು. ಅದಾದ ಬಳಿಕ ನಡೆದ ಉಪ ಚುನಾವಣೆ ಬಿಜೆಪಿಗೆ ಅಗ್ನಿ ಪರೀಕ್ಷೆ ಅಂತಾನೆ ಭಾವಿಸಲಾಗಿತ್ತು. ಆದ್ರೀಗ ಈ ಚುನಾವಣೆಯಲ್ಲಿ ಬಿಜೆಪಿಗೆ ಮತದಾರ ಶಾಕ್ ಕೊಟ್ಟಿದ್ದು, ಎಚ್ಚರಿಕೆಯ ಸಂದೇಶವನ್ನ ನೀಡಿದ್ದಾರೆ.
ಪಶ್ಚಿಮ ಬಂಗಾಳ, ಉತ್ತರಾಖಂಡ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ತಮಿಳುನಾಡು, ಪಂಜಾಬ್ ಮತ್ತು ಬಿಹಾರ ರಾಜ್ಯಗಳ 13 ಕ್ಷೇತ್ರಗಳಿಗೆ ಜುಲೈ 10ರಂದು ಈ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.