ಬೆಂಗಳೂರು, (www.thenewzmirror.com) :
ಲೋಕಸಮರ ಹೊತ್ತಲ್ಲೆ ಬಹು ವಿವಾದಿತ ಕಾಯ್ದೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಯ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಇ – ಗೆಜೆಟ್ ವೆಬ್ ಸೈಟ್ ಕ್ರ್ಯಾಶ್ ಆಗಿದೆ.
ಭಾರೀ ಸಂಖ್ಯೆಯಲ್ಲಿ ಜನರು ವೆಬ್‌ಸೈಟಿಗೆ ಭೇಟಿ ನೀಡಿದ ಪರಿಣಾಮ ವೆಬ್‌ಸೈಟ್ ಪುಟ ಓಪನ್ ಆಗುತ್ತಿಲ್ಲ ಎನ್ನುವುದು ಗೊತ್ತಾಗಿದೆ. 2019ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ದೇಶದಲ್ಲಿ ಭಾರೀ ಪ್ರತಿಭಟನೆ (Protest) ನಡೆದ ಕಾರಣ ಇಲ್ಲಿಯವರೆಗೆ ಸಿಎಎ ಜಾರಿಯಾಗಿರಲಿಲ್ಲ.