ಬೆಂಗಳೂರು, (www.thenewzmirror com) ;
ರಾಜ್ಯದಲ್ಲಿ ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದೆ. ಅದೇ ರೀತಿ ಈ ಬಾರಿ ರಾಜ್ಯದ 126 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪದಕ ನೀಡಲಾಗಿದ್ದು, ಇದರಲ್ಲಿ ಅಮಾನತುಗೊಂಡಿರುವ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾಗೆ ಸಿಎಂ ಪದಕ ನೀಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತಂತೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿದ್ದು, ಇದೆನಾ ಕಾಂಗ್ರೆಸ್ ಸಂಸ್ಕೃತಿ ಅಂತ ಪ್ರಶ್ನೆ ಮಾಡಿದೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ, ಖದೀಮರು, ರೌಡಿಗಳು, ದುಷ್ಟ ದುರುಳರು, ಕಾಮುಕರು, ಭಯೋತ್ಪಾದಕರನ್ನು ಕಂಡರೆ ರೆಡ್ ಕಾರ್ಪೆಟ್ ಹಾಕಿ ಕಾಂಗ್ರೆಸ್ ರಾಜ ಮಾರ್ಯದೆಯನ್ನು ಕೊಡುತ್ತಿರುವುದು ಇದೇ ಮೊದಲೇನು ಅಲ್ಲ ಕೊನೆಯೂ ಅಲ್ಲ.
ಕಳ್ಳರು, ಗಾಂಜಾ ಪೆಡ್ಲರ್‌ಗಳ ಜೊತೆ ಸಂಬಂಧ ಹೊಂದಿದ ಕಾರಣಕ್ಕೆ ಕಳೆದ ತಿಂಗಳಷ್ಟೇ ಅಮಾನತುಗೊಂಡ ಹೆಡ್ ಕಾನ್‌ಸ್ಟೇಬಲ್ ಸಲೀಂ ಪಾಷಾಗೆ ಸಿಎಂ ಪದಕ ಘೋಷಣೆ ಆಗಿದೆ.
ಪೊಲೀಸ್ ಇಲಾಖೆಯನ್ನೇ ಹಾಳು ಮಾಡಿರುವ ಗೃಹ ಮಂತ್ರಿ ಡಾ ಜಿ.ಪರಮೇಶ್ವರ ಅವರಿಗೆ ಇಲಾಖೆಯೇ ಹಿಡಿತದಲ್ಲಿಲ್ಲ ಎಂದು ಸ್ಪಷ್ಟವಾಗಿದೆ.
ಕಪ್ಪು ಚುಕ್ಕೆಗಳ ಸರದಾರ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿದ್ರೋಹಿಗಳಿಗೆ ಪದಕ ವಿತರಿಸುತ್ತಿರುವುದು ನಾಡಿನ ಜನತೆಗೆ ಅಶ್ಚರ್ಯವನ್ನೇನು ಉಂಟು ಮಾಡುತ್ತಿಲ್ಲ ಬಿಡಿ.
ಮೂರನ್ನೂ ಬಿಟ್ಟ ಸರ್ಕಾರ ಮೂರು ಬಿಟ್ಟವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದೆ. ಅಂತ ಫೋಸ್ಟ್ ಮಾಡಿದೆ.