ಬೆಂಗಳೂರು, (www.thenewzmirror.com) ;
ಅಶಾಡ ಮುಗಿದು ಶ್ರಾವಣ ಬಂದ್ರೆ ಸಾಕು ಸಾಲು ಸಾಲು ಹಬ್ಬಗಳು ಬರುತ್ತವೆ. ಶ್ರಾವಣ ಸೋಮವಾರದಿಂದ ಆರಂಭವಾಗುವ ಪೂಜೆ, ವರಮಹಾಲಕ್ಷ್ಮೀ ಹಬ್ಬ, ಗಣಪತಿ, ಸೇರಿದಂತೆ ವರ್ಷಾಂತ್ಯದ ವರೆಗೂ ಹಬ್ಬಗಳು ಸಾಲು ಸಾಲಾಗಿ ಬರುತ್ವೆ.
ಈಗಾಗಲೇ ಗ್ಯಾರಂಟಿಗಳನ್ನ ಕೊಟ್ಟಿರುವ ಸರ್ಕಾರದಿಂದಾಗಿ ಯಾವುದೇ ಹಬ್ಬ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಮಾರುಕಟ್ಟೆಯಲ್ಲಿ ಯಾವುದೇ ವಸ್ತುಗಳ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ ಎನ್ನುವಂತಾಗಿದೆ.
ಯಾವುದೇ ಹಬ್ಬಕ್ಕಾದ್ರೂ ಹೂವು ಹಣ್ಣುಗಳು ಇರಲೇಬೇಕು. ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸುವವರು ಮಲ್ಲಿಗೆ, ಕನಕಾಂಬರ, ಸುಗಂಧರಾಜ, ಸೇವಂತಿಗೆ, ಡೇರೆ ಹೂವು, ಗುಲಾಬಿ ಹೀಗೆ ಬಗೆ ಬಗೆಯ ಹೂಗಳಿಂದ ಅಲಂಕರಿಸುತ್ತಾರೆ. ಈ ಹಬ್ಬಕ್ಕೆ ಹೂವಿನ ದರಗಳೂ ದುಬಾರಿಯಾಗಿವೆ.
ಯಾವುದೇ ಮಾರುಕಟ್ಟೆಗೆ ಹೋದ್ರೂ ಕನಕಾಂಬರಕ್ಕೆ ಕೆಜಿಗೆ ₹2500, ಮಲ್ಲಿಗೆಗೆ ₹1200, ವರಮಹಾಲಕ್ಷ್ಮಿ ಹಬ್ಬದ ಹೂ-ಹಣ್ಣು ದರಕ್ಕೆ ಗ್ರಾಹಕರು ಸುಸ್ತಾಗಿದ್ದಾರೆ. ಹಬ್ಬದ ಖರೀದಿಗೆ ಬಂದವರು ಹೂವು ಹಣ್ಣು ಕೊಳ್ಳೋಕೆ ಯೋಚನೆ ಮಾಡುತ್ತಿದ್ದಾರೆ. ಈ ಬಾರಿ ಬೇಸಿಗೆಯಲ್ಲಿ ತಾಪಮಾನ ಅತಿಯಾಗಿದ್ದರಿಂದ ಹೂವಿನ ಬೆಳೆಯಿರಲಿಲ್ಲ. ಇದೀಗ ಬೆಳೆ ಬಂದರೂ ಮಳೆ ಹೆಚ್ಚಾಗಿದೆ.
ಹಬ್ಬಕ್ಕೆ ಕೊಯ್ಲು ಮಾಡುವಂತೆ ಬೆಳೆದಿದ್ದರೂ ಮಳೆಯಿಂದ ಬೆಳೆ ಹಾಳಾಗಿದೆ. ಕೊಯ್ಲಿಗೆ ಬಂದಿರುವ ಹೂ ನೀರು ತುಂಬಿಕೊಂಡು ಹಾಳಾಗುತ್ತಿದೆ. ಹೂ ಕಿತ್ತ ದಿನವೇ ಮಾರಾಟವಾಗಬೇಕು. ಇಲ್ಲದಿದ್ದರೆ ಪೂರ್ತಿ ಕೊಳೆತು ಹೋಗುತ್ತದೆ. ಖರೀದಿದಾರರು ಕೂಡ ಎರಡು-ಮೂರು ದಿನ ಇಟ್ಟರೂ ಹಾಳಾಗದಂತಹ ಹೂ ಬೇಕೆಂದರೂ ದುಬಾರಿ ಬೆಲೆ. ಅದೂ ಪಾಲಿಹೌಸ್‌ಗಳಲ್ಲಿ ಬೆಳೆದ ಹೂವು ಮಾತ್ರ ಆ ರೀತಿ ಸಿಗುತ್ತದೆ.
ಕೇವಲ ಹೂವು ಅಷ್ಟೇ ಅಲ್ಲ ಹಣ್ಣುಗಳ ದರದಲ್ಲಿಯೂ ಬೆಲೆ ಏರಿಕೆಯಾಗಿದೆ. ಈ ಬಾರಿ ಮಳೆಯಿಂದ ಬೆಳೆ ಹಾಳಾಗಿದ್ದು ಬೆಲೆಗಳು ಏರಿಕೆಯಾಗಿವೆ. ಏಲಕ್ಕಿ ಬಾಳೆ ಕೆ.ಜಿ.ಗೆ 80-90 ರೂ., ಸೀಬೆ 60 ರೂ., ಅನಾನಸ್ ಜೋಡಿಗೆ 50-60 ರೂ., ಮೂಸಂಬಿ 90-110 ರೂ., ದಾಳಿಂಬೆ 200-240 ರೂ., ಸೇಬು 250 ರೂ. ಮಾರಾಟ ಮಾಡಲಾಗುತ್ತಿದೆ.
ಬಿಡಿ ಹೂ ದರ (ಕೆ.ಜಿ.ಗಳಲ್ಲಿ)
ಕನಕಾಂಬರ ಹೂವು: 2,000-2500 ರೂ.
ಮಲ್ಲಿಗೆ ಹೂವು: 800-1200 ರೂ.
ಮಳ್ಳೆ ಹೂವು: 800 ರೂ.
ಕಾಕಡ ಹೂವು: 600-700 ರೂ.
ಸೇವಂತಿಗೆ ಹೂವು: 250-350 ರೂ.
ಗುಲಾಬಿ ಹೂವು: 250 ರೂ.
ಕಣಿಗಲೆ ಹೂವು: 250 ರೂ.
ಬಟನ್ಸ್ ಹೂವು: 300 ರೂ.
ಸುಗಂಧರಾಜ: 180-200 ರೂ.
ತಾವರೆ ಹೂವು (ಜೋಡಿಗೆ): 80-100 ರೂ.
ಕೇದಗೆ ಒಂದಕ್ಕೆ: 50-60 ರೂ.
ಬಾಳೆಕಂಬ ಚಿಕ್ಕವು (ಜೋಡಿಗೆ): 50 ರೂ.