Covid 19 | ಸಿಎಂ ಸಿದ್ದರಾಮಯ್ಯ ಜತೆಗೆ ಮಹತ್ವದ ಮೀಟಿಂಗ್ ,  ಏನೆಲ್ಲಾ ಸೂಚನೆ ಕೊಟ್ಟಿದ್ದಾರೆ ಗೊತ್ತಾ.?

ಬೆಂಗಳೂರು, (www.thenewzmirror.com);

ನೆರೆಯ ಕೇರಳದಲ್ಲಿ ಕರೋನ ಪ್ರಕರಣ ಹೆಚ್ಚಾಗ್ತಿದೆ. ಹೀಗಾಗಿ ರಾಜ್ಯದಲ್ಲಿ ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲೊ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಳ್ಳುತ್ತಿದೆ. ಹೀಗಿದ್ರೂ ಸಿಎಂ ಸಿದ್ದರಾಮಯ್ಯ ಇಂದು ಮಹತ್ವದ ಸಭೆ ನಡೆಸಲಾಯ್ತು.

RELATED POSTS

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಕೋವಿಡ್‌ 19 ಪರಿಸ್ಥಿತಿ ಕುರಿತ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ರಾಜ್ಯದಲ್ಲಿ ಕೋವಿಡ್‌ 19 ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವ ಹಾಗೂ ಬೆಂಗಳೂರಿನಲ್ಲಿ ಕೋವಿಡ್‌ನಿಂದಾಗಿ ಕಳೆದ ಮೂರು ದಿನಗಳಲ್ಲಿ ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಸ್ಥಿತಿಗತಿಯ ಕುರಿತು ಚರ್ಚಿಸಲು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲಾಯ್ತು.


– ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ
– ಅದರಲ್ಲೂ JN.1 ಎಂಬ ಹೊಸ ತಳಿಯ ವೈರಸ್‌ ಪತ್ತೆಯಾಗಿದೆ.
– ಕರ್ನಾಟಕದಲ್ಲಿ ಪ್ರಸ್ತುತ 92 Active COVID Cases ವರದಿಯಾಗಿವೆ.
–  ಕೇರಳದಲ್ಲಿ 2041, ತಮಿಳು ನಾಡಿನಲ್ಲಿ 77, ಮಹಾರಾಷ್ಟ್ರದಲ್ಲಿ 35, ಗೋವಾದಲ್ಲಿ 23 ಹಾಗೂ ಗುಜರಾತಿನಲ್ಲಿ 12 ಸಕ್ರೀಯ ಒ್ರಕರಣಗಳಿವೆ

–  ಬೆಂಗಳೂರು ನಗರದಲ್ಲಿಯೇ 80 ಪ್ರಕರಣಗಳು ಆಕ್ಟೀವ್ ಇದಾವೆ
– ಸದ್ಯ  72 ಜನ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ
– ಏಳು ಜನರು ಐಸಿಯುನಲ್ಲಿದ್ದು, ಇವರೆಲ್ಲರೂ ಇತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ

ಸಿಎಂ ಕೊಟ್ಟ ಸೂಚನೆಗಳು

– ರಾಜ್ಯದಲ್ಲಿ ಕೋವಿಡ್‌ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 5000 ಕ್ಕೆ ಹೆಚ್ಚಿಸಬೇಕು. ಇದರಲ್ಲಿ 1500 Rapid Antigen Test ಹಾಗೂ 3500 RTPCR ಪರೀಕ್ಷೆಗಳಿರಬೇಕು
–  ಗಡಿ ಭಾಗಗಳಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು
– ಕರ್ನಾಟಕದಲ್ಲಿ ಡಿಸೆಂಬರ್‌ 15 ರಂದು ಒಂದು ಹಾಗೂ ಡಿಸೆಂಬರ್‌ 20 ರಂದು ಎರಡು ಸಾವುಗಳು ಸಂಭವಿಸಿದ್ದು, ಗಂಭೀರವಾಗಿ ಪರಿಗಣಿಸಬೇಕು
–  ಸರ್ಕಾರ ನೀಡುವ ಸಲಹೆ ಸೂಚನೆಗಳನ್ನ ಪಾಲನೆ ಮಾಡಿ
–  ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
–  ಆಕ್ಸಿಜನ್‌, ವೆಂಟಿಲೇಟರ್‌, ಬೆಡ್‌ಗಳು ಯಾವುದಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳಿ
– ಇದಕ್ಕೆ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸನ್ನದ್ಧವಾಗಿ ಇವು ಯಾವುದೂ ಕೊರತೆಯಾಗದಂತೆ ನೋಡಿಕೊಳ್ಳಬೇಕು
– ಕೋವಿಡ್‌ ನಿರ್ವಹಣೆಗೆ  ಸಚಿವ ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಯಿತು
– ಎಲ್ಲ ಆಸ್ಪತ್ರೆಗಳಲ್ಲಿ ಮಾಕ್‌ ಡ್ರಿಲ್‌ ಮಾಡುವಂತೆ ಸೂಚನೆ
– 60 ವರ್ಷ ಮೇಲ್ಪಟ್ಟ ಎಲ್ಲರೂ, ಕಿಡ್ನಿ, ಹೃದಯ, ಲಿವರ್‌ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಹಾಗೂ ಬಾಣಂತಿಯರು ಮಾಸ್ಕ್‌ ಧರಿಸುವುದು ಕಡ್ಡಾಯ
– ಉಸಿರಾಟದ ಸಮಸ್ಯೆಯ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ನೆಗಡಿ ಇತ್ಯಾದಿಗಳಿಂದ ಬಳಲುತ್ತಿರುವವರು ಕೂಡಲೇ ವೈದ್ಯಕೀಯ ಸಮಾಲೋಚನೆ ನಡೆಸುವುದು
– ಜನಸಂದಣಿಯ ಪ್ರದೇಶದಲ್ಲಿ ಮಾಸ್ಕ್‌ ಧರಿಸುವುದು ಉತ್ತಮ

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist