ಅರ್ಹರಲ್ಲದ ವ್ಯಕ್ತಿಗೆ BBMP ಮುಖ್ಯ ಆರೋಗ್ಯಾಧಿಕಾರಿ ಹುದ್ದೆ..!, ಕೊರೋನಾ ಸಮಯದಲ್ಲಿ ಬೇಕಿತ್ತಾ ಇಂಥ ಎಡವಟ್ಟು.?

ಬೆಂಗಳೂರು, (www.thenewzmirror.com);

ಕರೋನಾದ ರೂಪಾಂತರಿ ತಳಿ ಇಡೀ ರಾಜ್ಯವನ್ನ ಆತಂಕಕ್ಕೀಡುಮಾಡುತ್ತಿದೆ. ಒಂದ್ಕಡೆ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನ ಕೈಗೊಳ್ಳುವುದರ ಮೂಲಕ ಹೆಮ್ಮಾರಿಯ ನಾಗಾಲೋಟಕ್ಕೆ ಬ್ರೇಕ್ ಹಾಕೋಕೆ ಮುಂದಾಗುತ್ತಿದೆ.

RELATED POSTS

ಕೊರೋನಾ ಆರಂಭವಾದಾಗ ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಬೆಂಗಳೂರು(BBMP) ವ್ಯಾಪ್ತಿಯಲ್ಲಿ ವೈರಸ್ ತಡೆಗೆ ಹದ್ದಿನ ಕಣ್ಣಿಡಬೇಕಾಗಿರೋದು ಅತ್ಯವಶ್ಯಕ.

ಈಗಾಗಲೇ ಆತಂಕವಿರುವ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಯಾರದ್ದೋ ಒತ್ತಡಕ್ಕೆ ಮಣಿದು ಅರ್ಹರಲ್ಲದ ವ್ಯಕ್ತಿಯನ್ನು ನೇಮಕಮಾಡಿಕೊಳ್ಳುವ ಮೂಲಕ ಮಹಾಎಡವಟ್ಟನ್ನ ಮಾಡ್ತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಸರ್ಕಾರದ ಆದೇಶದ ಪ್ರತಿ

ಹೌದು ರಾಜ್ಯ ಸರ್ಕಾರ ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಹುದ್ದೆಗೆ ಸೈಯದ್ ಸಿರಾಜುದ್ದೀನ್ ಮದನಿ ಡಂಬ ಅಧಿಕಾರಿಯನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ. ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಹುದ್ದೆಗೆ ನಿಯುಕ್ತ ಆಗುವ ಮೊದಲು ಆರೋಗ್ಯ ಇಲಾಖೆಯಲ್ಲಿ RCHO( Reproductive Child & Health Officer) ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಸದ್ಯ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಹುದ್ದೆಗೆ ನೇಮಕ ಮಾಡಬೇಕಂದರೆ ಅವರಿಗೆ ಅನುಭವ ಇರಬೇಕು. ಜತೆಗೆ ಬೆಂಗಳೂರು ಹಾಗೂ ಬಿಬಿಎಂಪಿಯ ಆರೋಗ್ಯ ವ್ಯವಸ್ಥೆ ಕುರಿತಂತೆ ಮಾಹಿತಿ ತಿಳಿದುಕೊಂಡಿರಬೇಕು. ಯಾಕಂದ್ರೆ ಸುಮಾರು 8 ವಲಯಗಳನ್ನ ಹೊಂದಿರುವ ಬಿಬಿಎಂಪಿಯಲ್ಲಿ ಪ್ರತಿ ವಲಯಕ್ಕೂ ಒಬ್ಬೊಬ್ಬ ಆರೋಗ್ಯಾಧಿಕಾರಿ ಇದ್ದು ಅವರಿಗೆಲ್ಲಾ ಮುಖ್ಯವಾಗಿ CHO(ಮುಖ್ಯ ಆರೋಗ್ಯಾಧಿಕಾರಿ) ಇರುತ್ತಾರೆ‌.

ಆದರೆ ಸೈಯದ್ ಸಿರಾಜುದ್ದೀನ್ ಮದನಿ ನೇಮಕ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ (CHO – Non Clinical) ಹುದ್ದೆಗೆ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ RCHO (Reproductive Child & Health Officer) ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಸೈಯದ್ ಸಿರಾಜುದ್ದೀನ್ ಮದನಿ ಎಂಬ ಅಧಿಕಾರಿಯನ್ನು ನಿಯೋಜಿಸಿ ಆದೇಶಿಸಿದ್ದಯ, ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ಹಾಗೂ ಚರ್ಚೆಗೆ ಕಾರಣವಾಗುತ್ತಿದೆ.

ಬಿಜೆಪಿ ಮುಖಂಡ ಎನ್. ಆರ್. ರಮೇಶ್

ವಾಸ್ತವವಾಗಿ ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ಪಾಲಿಕೆ ಅಧಿಕಾರಿಯನ್ನೇ ನಿಯೋಜಿಸಬೇಕಿರುತ್ತದೆ. ಆದರೂ, ಇದೇ ಪ್ರಥಮ ಬಾರಿಗೆ ಸರ್ಕಾರ ಈ ರೀತಿ ಆದೇಶ ಹೊರಡಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ‌

ಸದ್ಯ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಯಾಗಿ ಪ್ರಭಾರಿ ವಹಿಸಿದ್ದ ಡಾ. ಎ. ಎಸ್. ಬಾಲಸುಂದರ್ ತಮ್ಮ ಜವಾಬ್ದಾರಿಯನದನ ಉತ್ತಮವಾಗಿ ನಿಭಾಯಿಸುತ್ತಿದ್ರು. ಅದರಲ್ಲೂ ಕರೋನಾ ಎರಡು ಹಾಗೂ ಮೂರನೇ ಅಲೆಯಲ್ಲಿ ಪರಿಸ್ಥಿತಿಯನ್ನ ಉತ್ತಮವಾಗಿ ನಿಭಾಯಿಸಿದ್ದರು. ಹೀಗಿದ್ದರೂ ಕೊರೋನಾ ರೂಪಾಂತರಿ ತಳಿಯ ಆತಂಕದ ಬೆನ್ನಲ್ಲೇ ಹೀಗೆ ಹುದ್ದೆಯಿಂದ ಬಿಡುಗಡೆಗೊಳಿಸಿರೋದು ಹಲವು ಪ್ರಶ್ನೆಗಳು ಉದ್ಬವಿಸುವಂತೆ ಮಾಡಿದೆ.

ಬಿಬಿಎಂಪಿ ಯ CHO  ಶ್ರೇಣಿಗಿಂತಲೂ ರಾಜ್ಯದ ಆರೋಗ್ಯ ಇಲಾಖೆಯ RCHO ಹುದ್ದೆಯ ಶ್ರೇಣಿಯು ಕಡಿಮೆ ಸ್ಥಾನಮಾನದ್ದಾಗಿರುತ್ತದೆ. ಸರ್ಕಾರದ ಈ ನಡೆ ಕುರಿತಂತೆ ಅಸಮಧಾನ ಹೊರಹಾಕ್ತಿದ್ದಾರೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ರಮೇಶ್ ಎನ್.ಆರ್.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist