ಬೆಂಗಳೂರು, (www.thenewzmirror.com) ;
ಟೀಂ ಇಂಡಿಯಾದ ಎಡಗೈ ಸ್ಟೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 38 ವರ್ಷ ವಯಸ್ಸಿನ ಧವನ್ ತಮ್ಮ ವಿದಾಯದ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಿರುವುದಾಗಿ ಧವನ್ ತಿಳಿಸಿದ್ದಾರೆ. ನನ್ನ ಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಈ ಪ್ರಯಾಣದಲ್ಲಿ ನಾನು ನನ್ನೊಂದಿಗೆ ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯನ್ನು ಹೊಂದಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ಜೈ ಹಿಂದ್!” ಎಂದು ಧವನ್ ವಿಡಿಯೋದಲ್ಲಿ ತಿಳಿಸಿದ್ದಾರೆ.
2010ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಧವನ್, ಇಂಡಿಯಾ ಪರ 167 ಎಕದಿನ ಪಂದ್ಯ ಆಡಿದ್ದು, 17 ಶತಕ ಸೇರಿದಂತೆ 6793 ರನ್ ಗಳಿಸಿದ್ದಾರೆ. 34 ಟೆಸ್ಟ್ ಪಂದ್ಯಗಳಲ್ಲಿ 58 ಇನಿಂಗ್ಸ್ ಆಡಿ, 7 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 2315 ರನ್ ಕಲೆಹಾಕಿದ್ದಾರೆ. ಹಾಗೆನೆ 68 ಟಿ20 ಪಂದ್ಯಗಳಲ್ಲಿ ಧವನ್ 11 ಅರ್ಧಶತಕಗಳೊಂದಿಗೆ ಒಟ್ಟು 1759 ರನ್ ಬಾರಿಸಿದ್ದಾರೆ. ಶಿಖರ್ ಧವನ್ ಭಾರತದ ಪರ ಕೊನೆಯ ಪಂದ್ಯ ಆಡಿದ್ದು ಅಂದರೆ ಬಾರತ ತಂಡವನ್ನ ಪ್ರತಿನಿಧಿಸಿದ್ದು 2022 ರಲ್ಲಿ.