Cricket News | ಜಯ್ ಶಾ ಗೂ ಮೊದಲೇ ICC ಅಧ್ಯಕ್ಷರಾದ ಭಾರತೀಯರು ಯಾರು ಗೊತ್ತಾ.? ಯಾವ್ಯಾವ ಅವಧಿಯಲ್ಲಿ ಅಧಿಕಾರದಲ್ಲಿದ್ದರೆಂಬ ಮಾಹಿತಿ ಇಲ್ಲಿದೆ‌

ಬೆಂಗಳೂರು, (www.thenewzmirror.com) ;

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನೂತನ ಅಧ್ಯಕ್ಷರಾಗಿ ಕಾರ್ಯದರ್ಶಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಜಯ್ ಶಾ ಐಸಿಸಿ ಇತಿಹಾಸದಲ್ಲಿ ಐಸಿಸಿ ಅಧ್ಯಕ್ಷರಾದ ಭಾರತದ 5ನೇ ವ್ಯಕ್ತಿ ಆಗಲಿದ್ದಾರೆ.

RELATED POSTS

ಜಯ್ ಶಾ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿಯಾಗಿ  ಹಾಗೂ ಏಷ್ಯನ್ ಕ್ರಿಕಟ್ ಕೌನ್ಸಿಲ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ‌.

ಅಂತರಾಷ್ಟ್ರೀಯ ಕ್ರಿಕೆಟ್ ವಿಚಾರಕ್ಕೆ‌‌ಬರುವುದಾದರೆ ಬಿಸಿಸಿಐ ದೊಡ್ಡಣ್ಣ ಅಂತ ಹೇಳಿದರೂ ತಪ್ಪಿಲ್ಲ. ಹೀಗಾಗು ICC ಇತಿಹಾಸದಲ್ಲೇ ಜಯ್ ಶಾ ಸೇರಿ ಇದೂವರೆಗೂ ಐದು ಜನ ICC ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗಿದ್ದರೆ ಶಾ ಗೂ ಮೊದಲು ಯಾರೆಲ್ಲ ICC ಅಧ್ಯಕ್ಷರಾಗಿದ್ದಾರೆ ಅನ್ನೋದನ್ನ ನೋಡುವುದಾದರೆ..,

ಜಗಮೋಹನ್ ದಾಲ್ಮಿಯಾ (1997-2000) : ಜಗಮೋಹನ್ ದಾಲ್ಮಿಯಾ ಭಾರತದಿಂದ ಮೊದಲ ಐಸಿಸಿ ಅಧ್ಯಕ್ಷರಾಗಿ ಇತಿಹಾಸ ನಿರ್ಮಿಸಿದರು. ಅವರು 1997 ರಿಂದ 2000 ರವರೆಗೆ ಈ ಹುದ್ದೆಯಲ್ಲಿದ್ದರು. 1987 ರಲ್ಲಿ ರಿಲಯನ್ಸ್ ವಿಶ್ವಕಪ್ ಮತ್ತು 1996 ರಲ್ಲಿ ವಿಲ್ಸ್ ವಿಶ್ವಕಪ್’ನ್ನ ಭಾರತವು ಸಹ-ಆತಿಥ್ಯ ವಹಿಸಲು ದಾಲ್ಮಿಯಾ ಕಾರಣರಾಗಿದ್ದರು. ಬಿಸಿಸಿಐಯನ್ನ ವಿಶ್ವದ ಶ್ರೀಮಂತ ಮಂಡಳಿಯನ್ನಾಗಿ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

https://thenewzmirror.com/cricket-news-jay-shah-unopposed-as-president-of-icc-international-cricket-council

ಶರದ್ ಪವಾರ್ (2010-2012) : ಜಗಮೋಹನ್ ದಾಲೀಯ ನಂತರ ICC ಅಧ್ಯಕ್ಷರಾದ ಭಾರತೀಯರೆಂದರೆ ಅದು ಶರದ್ ಪವಾರ್. 2010 ರಲ್ಲಿ ಭಾರತದ ರಾಜಕಾರಣಿ ಶರದ್ ಪವಾರ್ ಐಸಿಸಿ ಅಧ್ಯಕ್ಷರಾಗಿದ್ದರು. ಅವರು ಇಂಗ್ಲೆಂಡ್‌’ನ ಡೇವಿಡ್ ಮೋರ್ಗನ್ ಬದಲಿಗೆ ಆಯ್ಕೆಯಾಗಿ 2 ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು. ಆ ಸಮಯದಲ್ಲಿ ಅವರು ಭಾರತ ಸರ್ಕಾರದಲ್ಲಿ ಕೃಷಿ ಸಚಿವರೂ ಆಗಿದ್ದರು. ಪವಾರ್ 2008 ರಿಂದ ಐಸಿಸಿ ಉಪಾಧ್ಯಕ್ಷರೂ ಆಗಿದ್ದರು. ಪವಾರ್ 2005 ರಿಂದ 2008 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು.

ಎನ್. ಶ್ರೀನಿವಾಸನ್ (2014-2015) : ICC ಅಧ್ಯಕ್ಷ ಪಟ್ಟಿಯಲ್ಲಿ ಭಾರತೀಯರಾಗಿ   ಎನ್. ಶ್ರೀನಿವಾಸನ್ ತೃತೀಯ ಸ್ಥಾನ ಪಡೆದಿದ್ದಾರೆ. 2014 ರಿಂದ 2015 ICC  ಅಧ್ಯಕ್ಷರಾಗಿದ್ದರಯ. 

ಶಶಾಂಕ್ ಮನೋಹರ್ (2015-2020) : ಶಶಾಂಕ್ ಮನೋಹರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐಸಿಸಿಯಲ್ಲಿ ಅವರ ಅಧಿಕಾರಾವಧಿಯು 2015 ರಿಂದ 2020 ರವರೆಗೆ ಇತ್ತು. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ವತಃ ಶಶಾಂಕ್ ರಾಜೀನಾಮೆ ನೀಡಿದ್ದರು. 2008ರಿಂದ 2011ರವರೆಗೆ ಬಿಸಿಸಿಐ ಅಧ್ಯಕ್ಷರೂ ಆಗಿದ್ದರು. ಬಿಸಿಸಿಐನಲ್ಲಿ ಶಶಾಂಕ್ ಅವರ ಮೊದಲ ಅವಧಿ 2008 ರಿಂದ 2011 ರವರೆಗೆ ಮತ್ತು ಅವರ ಎರಡನೇ ಅವಧಿ ಅಕ್ಟೋಬರ್ 2015 ರಿಂದ ಮೇ 2016 ರವರೆಗೆ ಇತ್ತು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist