ಬೆಂಗಳೂರು, (www.thenewzmirror.com);
ಕ್ರೈಮ್ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್(55) ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನವೆಂಬರ್ 16 ರಂದು ಶ್ವಾಸಕೋಶ ಸೋಂಕಿಗೆ ಒಳಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರಿಂದ ನಿರಂತರ ಚಿಕಿತ್ಸೆ ಲಭ್ಯವಿದ್ದರೂ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ ಇಂದು ಪತ್ನಿ ಕೋಮಲ, ಪುತ್ರ ತನುಷ ಮತ್ತು ಅಪಾರ ಬಂಧು ಮಿತ್ರರನ್ನ ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಆನೆಕಲ್ ನಲ್ಲಿ ನಡೆಯಲಿದೆ.
ಮೂರು ದಶಕಗಳ ಕಾಲ ಸುದ್ದಿಮನೆಯಲ್ಲಿ ಕೆಲಸ ಮಾಡಿದ ರಾ.ಪ್ರವೀಣ್, ಕ್ರೈಂ ನ್ಯೂಸ್ ಪ್ರವೀಣ್ ಎಂದೇ ಗುರುತಿಸಿಕೊಂಡವರು.
ಕೆಯುಡಬ್ಲ್ಯೂಜೆ ಸಂತಾಪ:
ಹಿರಿಯ ಪತ್ರಕರ್ತ ರಾ.ಪ್ರವೀಣ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ಸಂತಾಪ ವ್ಯಕ್ತಪಡಿಸಿದೆ. ಕ್ರೀಯಾಶೀಲ ಪ್ರವೀಣ್ ನಿಧನ ಸುದ್ದಿಮನೆಗೆ ಆದ ನಷ್ಟ ಎಂದು ಕೆಯುಡಬ್ಲ್ಯೂಜೆ ಶೋಕಿಸಿದೆ