ಬೆಂಗಳೂರು, (www.thenewzmirror.com) ;
ರೀಲ್ಸ್ ಮೂಲಕ ಖ್ಯಾತಿಗಳಿಸಿ ಅದಾದ ಬಳಿಕ ಕಿರುತೆರೆಯಲ್ಲಿ ಮಿಂಚುತ್ತಿದ್ದ ನಟನ ವಿರುದ್ಧ ಇದೀಗ ದೂರು ದಾಖಲಾಗಿದೆ. ಬೃಂದಾವನ ಧಾರಾವಾಹಿಯಲ್ಲಿ ನಟಿಸಿದ್ದ ವರುಣ್ ಆರಾಧ್ಯ ವಿರುದ್ಧ ಆತನ ಮಾಜಿ ಪ್ರೇಯಸಿ ದೂರು ನೀಡಿದ್ದು, ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮಾಜಿ ಪ್ರೇಯಸಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಎಂಬ ಆರೋಪದ ಮೇಲೆ ಪಶ್ಚಿಮ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಗೆ ವರುಣ್ 2019 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದು, ಇದಾದ ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು. ಸತತ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಕೆಲ ತಿಂಗಳ ಹಿಂದೆ ದೂರವಾಗಿತ್ತು. ಪ್ರೀತಸುತ್ತಿದ್ದ ವೇಳೆ ಇಬ್ಬರೂ ಖಾಸಗಿಯಾಗಿ ಇದ್ದ ಫೋಟೋ, ವೀಡಿಯೋವನ್ನ ಆರಾಧ್ಯ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ.
ಇದು ಸಂತ್ರಸ್ತೆಗೆ ತಿಳಿದು ಆರಾಧ್ಯನ ಮೊಬೈಲ್ ಪರಿಶೀಲಿಸಿದಾಗ ವಿಚಾರ ತಿಳಿದು ಪ್ರಶ್ನೆ ಮಾಡಿದ್ದಾಗಿ ಹಾಗೆನೆ ಇದನ್ನ ಯಾರಿಗಾದ್ರೂ ತಿಳಿಸಿದ್ರೆ ನಿನ್ನ ಕಾಸಗಿ ವೀಡಿಯೋ ಹಾಗೂ ಫೋಟೋವನ್ನ ವೈರಲ್ ಮಾಡುವುದಾಗಿ ಬೆದರಿಸಿದ್ದ ಅಂತ ಯುವತಿ ದೂರು ಕೊಟ್ಟಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ವರುಣ್ ಆರಾಧ್ಯ ವಿರುದ್ಧ ಐಟಿ ಕಾಯ್ದೆ, ಐಪಿಸಿ ಕಲಂ 504, 506ನಡಿ ಎಫ್ಐಆರ್ ದಾಖಲಿಸಿದ್ದಾರೆ.