ಬೆಂಗಳೂರು, (www.theneezmirror.com) ;
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲು ವಾಸ ಅನುಭವಿಸುತ್ತಿರೋ ದಾಸ ಈಗಾಗಲೇ 28 ದಿನ ಪರಪ್ಪನ ಅಗ್ರಹಾರದಲ್ಲಿ ಕಳೆದಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಗೆ ಬೇಲ್ ಸಿಗುತ್ತೆ ಅಂತಾಲೇ ಭಾವಿಸಲಾಗಿತ್ತು. ಆದ್ರೀಗ ಆಗಸ್ಟ್ 1 ರ ವರೆಗೂ ಮತ್ತೆ ಜೈಲು ವಾಸ ಅನುಭವಿಸಬೇಕಾಗಿದೆ.
ಹಾಗಿದ್ದರೆ ನಟ ದರ್ಶನ್ ಮತ್ತೆ ಜೈಲು ಸೇರಲು ಪೊಲೀಸ್ ಅಧಿಕಾರಿಗಳು ಕೊಟ್ಟ ಕಾರಣವೇನು ಅನ್ನೋದ್ರ ಮಾಹಿತಿ ಇಲ್ಲಿದೆ.
– ನಟ ದರ್ಶನ್ ಒಬ್ಬ ಸ್ಟಾರ್ ನಟರಾಗಿದ್ದಾರೆ, ಅವರು ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳನದನ ಹೊಂದಿದ್ದಾರೆ
– ಆರೋಪಿಗಳು ಕಿಡ್ನಾಪ್, ಕೊಲೆ, ಒಳ ಸಂಚು & ಸಾಕ್ಷಿನಾಶದಲ್ಲಿ ಭಾಗಿಯಾಗಿದ್ದಾರೆ
– ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆ
– ಐ ವಿಟ್ನೇಸ್, ಟೆಕ್ನಿಲ್, ಡಿಜಿಟಲ್ ಸಾಕ್ಷಿಯಲ್ಲಿ ಧೃಢ
– ಕೇಸ್ ನಲ್ಲಿ 83,55,500 ರೂಪಾಯಿ ಆರೋಪಿಗಳಿಂದ ಸೀಜ್
– ಸೀಜ್ ಹಣ ನೀಡಿದ ವ್ಯಕ್ತಿಗಳ ಪತ್ತೆ ಬಾಕಿ ಇದೆ
– ಹಣ ನೀಡಿದ ವ್ಯಕ್ತಿಗಳ ಹೇಳಿಕೆ ದಾಖಲಿಸಬೇಕು
– ಕೆಲ ಆರೋಪಿಗಳಿಂದ ಹಣದ ಮೂಲ ಪತ್ತೆ ಬಾಕಿ ಇದೆ
– ಕೃತ್ಯಕ್ಕೆ ಬಳಸಿದ ವಾಹನಗಳ ಆರ್ ಸಿ ಮಾಲೀಕ ಪತ್ತೆ ಬಾಕಿ ಇದೆ
– ಎಲ್ಲಾ ಆರೋಪಿಗಳು ಒಳಸಂಚು ಮಾಡಿರೋದು ಧೃಡ
– ಸಾಕ್ಷಿನಾಶ ಮಾಡಲು ಒಳಸಂಚು ಮಾಡಿರೋದು ಧೃಡ
– ಟೆಕ್ನಿಕಲ್, ಸೈಂಟಿಫಿಕ್ & ಫಿಸಿಕಲ್ ಸಾಕ್ಷಿಗಳ ನಾಶ ಮಾಡಿದ್ದು ಧೃಡ
– ಎ 13 ದೀಪಕ್ ಬಳಸಿದ ಸ್ಕೂಟರ್ ಕಳ್ಳತನದ ಗಾಡಿ
– ಹೆಬ್ಬಗೋಡಿ ಠಾಣೆಯಲ್ಲಿ ಕಳ್ಳತನ ಕೇಸ್ ಇರುವ ಗಾಡಿ
– ಹೊಂಡಾ ಡಿಯೋ ಕೆ.ಎ- 51 ಹೆಚ್‌ಡಿ-9022 ಸ್ಕೂಟರ್
– ನಕಲಿ ಸಿಮ್ ಬಳಕೆ ಮಾಡಿದ್ದೆಕೆ ಎಙದು ತನಿಖೆ ಬಾಕಿ
– FSL ವರದಿ ಬಳಿಕ ಮತ್ತಷ್ಟು ತನಿಖೆ ಬಾಕಿ ಇದೆ
– ಮೊಬೈಲ್ ಡಾಟಾ ಒರಿಜಿನಲಿಟಿ ಚೆಕ್ ರಿಪೋರ್ಟ್ ಬರಬೇಕಿದೆ
– ಸಿ.ಎಫ್.ಎಸ್.ಎಲ್ ಹೈದ್ರಾಬಾದ್ ವರದಿ ಬರಬೇಕಿದೆ
– ಸೀಜ್ ಆಗಿರುವ ಸಿಸಿಟಿವಿ ಡಿವಿಆರ್ ರಿಟ್ರೀವ್ ಇನ್ನೂ ನಡೆಯುತ್ತಿದೆ
– ಡಿವಿಆರ್ ಡಾಟಾ ಪಡೆದ ನಂತರ ತನಿಖೆ ಬಾಕಿ ಇದೆ
– ಕೊಲೆ ಮುಂಚೆ ಕೊಲೆ ಬಳಿಕ ಅನೇಕರ ಜೊತೆ ಮಾತುಕತೆ ಆ ವ್ಯಕ್ತಿಗಳ ಪತ್ತೆ ಮಾಡಿ ವಿಚಾರಣೆ ಬಾಕಿ ಇದೆ
– ಸಾಕ್ಷ್ಯ ನಾಶ ಮಾಡುವ ಸಾದ್ಯತೆ ಜಾಸ್ತಿ ಇದೆ
– ಇನ್ನೂ ಅನೇಕರ ಪ್ರತ್ಯಕ್ಷ & ಪರೋಕ್ಷ ವ್ಯಕ್ತಿಗಳ 164 ಬಾಕಿ ಇದೆ
– ಹಣ ಬಲ, ಪ್ರಭಾವಿ ಬಲ ಇರುವ ಆರೋಪಿಗೆ ಜಾಮೀನಿಗೆ ಯೋಗ್ಯವಲ್ಲ
– ಸಾಕ್ಷಿಗಳಿಗೆ ಬೆದರಿಕೆ ಹಾಕಿ ಸಾಕ್ಷಿ ಹೇಳದಂತೆ ತಡೆ ಸಾಧ್ಯ
– ಪ್ರಕರಣದಲ್ಲಿ ಆರೋಪಿಗಳ ಪ್ರತ್ಯೇಕ ಪಾತ್ರದ ವಿಚಾರಣೆ ಬಾಕಿ
– ಆರೋಪಿಗಳ ಸಂಪೂರ್ಣ ಪಾತ್ರದ ಸಾಕ್ಷಿ ಕಲೆ ಹಾಕಬೇಕು
– ಪ್ರಕರಣದಲ್ಲಿ ಇನ್ನೂ ತನಿಖೆ ಹಂತದಲ್ಲಿದ್ದು ವಿಚಾರಣೆ ನಡೆಯುತ್ತಿದೆ
ಹೀಗಾಗಿ ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಬೇಲ್ ಸಿಗಲಿಲ್ಲ.