ಬೆಂಗಳೂರು, (www.thenewzmirror.com) ;
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ ನಟಿ ಪವಿತ್ರಾ ಗೌಡ ಪೊಲೀಸ್ ವಿಚಾರಣೆ ವೇಳೆ ಕಣ್ಣೀರಿಟ್ಟಿದ್ದ ಫೋಟೋ ಒಂದು ರಿವೀಲ್ ಆಗಿದೆ.
ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ಒಂದೊಂದೇ ವಿಚಾರಗಳು ಹೊರಬರ್ತಿದೆ. ರೇಣುಕಾಸ್ವಾಮಿಯನ್ನ ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಹತ್ಯೆಯ ಕುರಿತಾದ ಹಲವು ಫೋಟೋಗಳು ಇತ್ತೀಚಿಗಷ್ಟೇ ಲಭ್ಯವಾಗಿದ್ದವು.
ಕೊಲೆ ಪ್ರಕರಣದಲ್ಲಿ ಭಾಗಿಯಾದ ಹಲವರ ಫೋನ್ ರಿಟ್ರೀವ್ ಮಾಡಿದ ಬಳಿಕ ಒಂದೊಂದಾಗಿ ಫೋಟೋಗಳು ಲಭ್ಯವಾಗುತ್ತಲೇ ಇವೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಜೀವ ಭಿಕ್ಷೆ ಬೇಡಿದ ಫೋಟೋ, ಸಾವನ್ನಪ್ಪಿದ ಬಳಿಕ ಮೃತದೇಹ ಬಿಸಾಕಿದ್ದ ಫೋಟೋ, ಸ್ಥಳ ಮಹಜರು ಸಮಯದಲ್ಲಿ ಆರೋಪಿ ದರ್ಶನ್ ಇದ್ದ ಫೋಟೋ, ಹತ್ಯೆಗಾಗಿ ಬಳಸಿದ ಉಪಕರಣಗಳ ಫೋಟೋ ಹೀಗೆ ಹಲವಾರು ಫೋಟೋಗಳು ಹೊರಬಂದಿವೆ.
ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪವಿತ್ರಾಗೌಡ ಪೊಲೀಸ್ ಕಸ್ಟಡಿಯ ಫೋಟೋ ಒಂದು ಲಭ್ಯವಾಗಿದೆ. ಎಪಿ ನಗರ ಪೊಲೀಸ್ ಠಾಣೆಯಲ್ಲಿ ಪವಿತ್ರಾಗೌಡ ಕಣ್ಣೀರಿಡುತ್ತಿದ್ದ ಫೋಟೋ ರಿವೀಲ್ ಆಗಿದೆ.