ಬೆಂಗಳೂರು,(www.thenewzmirror.com) ;
ಅಯ್ಯೋ ಇದೆಂಥಾ ದುಸ್ಥಿತಿ ಬಂತಪ್ಪ ನಮ್ ಸಾರಿಗೆ ನೌಕರರಿಗೆ.? ಮಾತೆತ್ತಿದ್ರೆ ನಂಬರ್ ಒನ್ ಸಾರಿಗೆ ಸಂಸ್ಥೆ ಅಂತ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ತಮ್ಮ ಬೆನ್ನನ್ನ ತಾವೇ ತಟ್ಟಿಕೊಳ್ತವೆ. ಎಷ್ಟೇ ಪ್ರಶಸ್ತಿ ಬಂದರೇನು.? ಎಷ್ಟು ಹೈಟೆಕ್ ಬಸ್ ಓಡಿಸಿದರೇನು.? ರಸ್ತೆ ಮೇಲೆ ಓಡಾಡೋಕೆ ಯೋಗ್ಯವಲ್ಲದ ಬಸ್ ಗಳು ಇದ್ರೆ ಈ ಎಲ್ಲ ಗೌರವಗಳು ನೀರಿನಲ್ಲಿ ಹೋಮಮಾಡಿದಂತಾಗುತ್ತೆ.
ಅಷ್ಟಕ್ಕೂ ಈ ರೀತಿ ಹೇಳುತ್ತಿರೋದಕ್ಕೆ ಒಂದು ಕಾರಣವಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದು ವೀಡಿಯೋ ಸಾರಿಗೆ ಸಚಿವರು ಅಷ್ಟೆರ ಅಲ್ಲ ಸಿಎಂ ಕೂಡ ತಲೆತಗ್ಗಿಸುವಂತೆ ಮಾಡಿದೆ.
ಕೊಡೆ ಹಿಡಿದು ಬಸ್ ಚಾಲನೆ ಮಾಡಿದ್ದರ ಸಂಪೂರ್ಣ ವೀಡಿಯೋ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ 👇🏻
https://youtube.com/@thenewzmirror?si=9Bn9NsoI5h9xEIxa
ಹೌದು NWKRTC ಬಸ್ ನಲ್ಲಿ ಪ್ರಯಾಣಿಕರೊಬ್ಬರು ತೆಗೆದಿದ್ದಾರೆ ಎನ್ನಲಾದ ವೀಡಿಯೋ ಇದೀಗ ಸಾರಿಗೆ ಸಂಸ್ಥೆಯ ವಾಸ್ತವ ಚಿತ್ರಣ ಸಮಾಜದ ಮುಂದೆ ಬಟಾಬಯಲಾಗಿದೆ. ಶಕ್ತಿ ಯೋಜನೆ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಕಡೆ ಮಾತ್ರ ಗಮನ ಹರಿಸಿರುವ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ತಮ್ಮದೇ ಅಧೀನದಲ್ಲಿರುವ ಬಸ್ ಗಳನ್ನ ರಿಪೇರಿ ಮಾಡದ ಸ್ಥಿತಿ ತಲುಪಿರೋದು ನಿಜಕ್ಕೂ ದುರಂತ.
NWKRTC ಗೆ ಸೇರಿದ ಬಸ್ ಒಂದು ಮಾರ್ಗಮಧ್ಯೆ ಸಂಚಾರ ಮಾಡುತ್ತಿತ್ತು. ಏಕಾಏಕಿ ಮಳೆ ಬರೋಕೆ ಶುರುವಾಗಿದೆ. ಬಸ್ ನ ಮೇಲ್ಛಾವಣಿ ಸೋರುತ್ತಿದ್ದರೂ( ಈ ವಿಚಾರ ಸಂಬಂಧಪಟ್ಟ ಡಿಪೋ ಅಧಿಕಾರಿಗಳಿಗೆ ಗೊತ್ತುದ್ದರೂ ರಿಪೇರಿ ಮಾಡದೆ ರೂಟ್ ಗೆ ಕಳುಹಿಸಿದ್ದಾರೆ) ಬಸ್ ಅನ್ನ ನಿಲ್ಲಿಸದ ಚಾಲಕ ತನ್ನ ಬಳಿ ಇದ್ದ ಛತ್ರಿ(umbrella) ಓಪನ್ ಮಾಡಿ ಮಳೆ ಬೀಳದ ಹಾಗೆ ಇಟ್ಟುಕೊಂಡು ಬಸ್ ಚಾಲನೆ ಮಾಡಿದ್ದಾರೆ. ಈ ಚಿತ್ರವನ್ನ ಯಾರೋ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರಿಕರಿಸಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ದೆ ನೋಡಿ ನಮ್ ಚಾಲಕರ ಕಷ್ಟ ಅಂತಾನೂ ಕಮೆಂಟ್ ಮಾಡಿದ್ದಾರೆ.
ಏಸಿ ರೂಮಿನಲ್ಲಿ ಕೂತು ಇಲ್ಲದ ಸಲ್ಲದ ಆರೋಪಕ್ಕೆ ಕಿರುಕುಳ ನೀಡಿ ಸಿಬ್ಬಂದಿಯನ್ನ ಕೆಲ್ಸದಿಂದ ತೆಗೆಯೋ ಅಧಿಕಾರಿಗಳ ನಿರ್ಲಕ್ಷ್ಯತನ ಇದೀಗ ಸಂಸ್ಥೆಯ ಮಾನ ಮರ್ಯಾದೆ ಹರಾಜಾಗುತ್ತಿದೆ. ಸಂಸ್ಥೆಗೆ ಕೆಟ್ಟ ಹೆಸರು ತಂದ್ರು ಅನ್ನೋ ಕಾರಣಕ್ಕೆ ಕೆಲ ಸಿಬ್ಬಂದಿಯನ್ನ ಟಾರ್ಗೇಟ್ ಮಾಡಿ ಶಿಕ್ಷೆ ನೀಡುವ ಅಧಿಕಾರಿಗಳಿಗೆ ಅವರ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ. ಅವರೂ ಸಂಸ್ಥೆಗೆ ಕೆಟ್ಟ ಹೆಸರು ತಂದಿದ್ದಾರೆ ಅಂತ ಕೆಲ್ಸದಿಂದ ವಜಾ ಮಾಡ್ತಾರಾ ಇಲ್ಲ ರಾಜಾತಿಥ್ಯ ಕೊಟ್ಟು ಕಳಿಸ್ತಾರಾ ನೋಡಬೇಕಿದೆ.
ನ್ಯೂಝ್ ಮಿರರ್ ನ ಉದ್ದೇಶ ಇಷ್ಟೇ ಇಡೀ ದೇಶದಲ್ಲೇ ಹೆಸರು ಮಾಡಿರುವ ಸಾರಿಗೆ ಸಂಸ್ಥೆಯ ಮಾನ ಮರ್ಯಾದೆ, ಗೌರವ ಕೆಲ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಹಾಳಾಗುತ್ತಿದೆಯಲ್ಲ ಎನ್ನುವ ಬೇಜಾರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಸ್ ದುರಸ್ತಿ ಮಾಡುವ ಜತೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.
ಹೀಗೆ ಒಂದೇ ಕೈಯಲ್ಲಿ ಸ್ಟೇರಿಂಗ್ ಹಿಡಿದು ಬಸ್ ಚಾಲನೆ ಮಾಡುವಾಗ ವಿಪರೀತ ಮಳೆ ಬಂದು ಏನಾದರೂ ಅನಾಹುತ ಆದರೆ ಅದಕ್ಕೆ ಚಾಲಕನನ್ನೇ ನೇರ ಹೊಣೆ ಮಾಡುವ ಅಧಿಕಾರಿಗಳ ಆಟಾಟೋಪಕ್ಕೆ ಮೊದಲು ಕಡಿವಾಣ ಬೀಳಬೇಕಿದೆ. ಇಲ್ಲದಿದ್ದರೆ ಸಂಸ್ಥೆಯ ಏಳಿಗೆಗಾಗಿ ಪ್ರತಿ ನಿತ್ಯ ದುಡಿಯುತ್ತಿರೋ ಲಕ್ಷಾಂತರ ಶ್ರಮಿಕ ವರ್ಗ ಸಂಸ್ಥೆ ನಮ್ಮದು ಅಂತ ಹೇಗೆ ತಾನೆ ಕೆಲ್ಸ ಮಾಡೋಕೆ ಸಾಧ್ಯ ಅಲ್ವಾ?