ಬೆಂಗಳೂರು, (www.thenewzmirror.com) ;
ರಾಜ್ಯ ಚುನಾವಣೆ ಹತ್ರ ಬರ್ತಾ ಇದ್ದಂತೆ ರಾಜ್ಯ ಸರ್ಕಾರ ಫುಲ್ ಆಕ್ಟಿವ್ ಆಗಿದೆ. ಇನ್ನೇನು ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತೆ ಅನ್ನೋ ಹೊಸ್ತಿಲಲ್ಲೇ 55 ಯೋಜನೆಗಳ 33049 ಜನರಿಗೆ ಉದ್ಯೋಗ ಅವಕಾಶಗಳು ನೀಡುವ ಕೆಲಸವನ್ನ ಮಾಡಿದೆ.
ಇದರ ಬೆನ್ನಲ್ಲೇ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಜನೆಗೆ ಮತ್ತಷ್ಟು ಗಮನಹರಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 55 ಯೋಜನೆಗಳ 3451.24 ಕೋಟಿ ರೂ. ಬಂಡವಾಳಹೂಡಿಕೆಗೆ ಅನುಮೋದನೆ ನೀಡಿದೆ.
ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ ಆರ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ 139 ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾ ತೆಗೆದುಕೊಳ್ಳಲಾಗಿದೆ.
ಒಟ್ಟು 55 ಯೋಜನೆಗಳಿಂದ 3451.24 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 33049 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿ ತಿಳಿಸಿದ್ದಾರೆ.
ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಅಧಿಕ ಹೆಚ್ಚು ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 2012.14 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 22033 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.
15 ಕೋಟಿ ರೂ. ಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 43 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 118 7.93 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 11016 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 4 ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 251.17 ಕೋಟಿ ರೂ. ಹೂಡಿಕೆಯಾಗಲಿದೆ.
ಅನುಮೋದನೆ ನೀಡಿರುವ ಪ್ರಸ್ತಾವನೆಗಳು
1. ಶ್ರೀ ಬಸವೇಶ್ವರ ಶುಗರ್ಸ್ ಲಿಮಿಟೆಡ್ ಬಿಜಾಪುರ,
ಸ್ಥಳ: ಕಾರ್ಜೋಲ್ ಗ್ರಾಮ, ಬಬಲೇಶ್ವರ ಹೋಬಳಿ, ವಿಜಯಪುರ ಜಿಲ್ಲೆ
ಹೂಡಿಕೆ- 494.75 ಕೋಟಿ ರೂ. ಉದ್ಯೋಗ- 90
2. ಸುಬ್ರಹ್ಮಣ್ಯ ಕನ್ಸ್ಟ್ರಕ್ಷನ್ ಅಂಡ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್. ಬೆಂಗಳೂರು,
ಸ್ಥಳ: ತಾವರೆಕೆರೆ, ಬೆಂಗಳೂರು ನಗರ ಜಿಲ್ಲೆ,
ಹೂಡಿಕೆ-481.61 ಕೋಟಿ ರೂ, ಉದ್ಯೋಗ: 20000
3 . ಎಚ್‌ಸಿಎಲ್ (HCL) ಟೆಕ್ನಲಾಟಿ ಲಿಮಿಟೆಡ್ ದೆಹಲಿ,
ಸ್ಥಳ: ಬೆಂಗಳೂರು
ಹೂಡಿಕೆ-400 ಕೋಟಿ ರೂ.
ಉದ್ಯೋಗ -1300
4 . ನಾಡಗೌಡ ರೋಡಲೈನ್ ಪ್ರೈವೇಟ್ ಲಿಮಿಟೆಡ್ (ನಾಡಗೌಡ ಎಥೆನಾಲ್ ಡಿಸ್ಟಿಲರಿ) ವಿಜಯಪುರ.
ಸ್ಥಳ: ಜಾಲಗೇರಿ ಗ್ರಾಮ, ವಿಜಯಪುರ ತಾಲೂಕು ಮತ್ತು ಜಿಲ್ಲೆ
ಹೂಡಿಕೆ – 247.08 ಕೋಟಿ ರೂ. ಉದ್ಯೋಗ- 210
5 . ಕನ್ಸಾಲಿಡೆಟೆಡ್ ಆಗ್ರೋ ಇಂಡಸ್ಟ್ರೀಯಲ್ ಸಿಂಡಿಕೇಟ್ ಲಿಮಿಟಿಡ್. ಬೆಂಗಳೂರು ನಗರ
ಸ್ಥಳ: ಅಳಗವಾಡಿ ಗ್ರಾಮ, ರಾಯಬಾಗ ತಾಲೂಕು, ಬೆಳಗಾವಿ ಜಿಲ್ಲೆ
ಹೂಡಿಕೆ- 150 ಕೋಟಿ ರೂ. ಉದ್ಯೋಗ- 110
6. ಏ ಒನ್ ಐಎಸ್‌ಪಿಎಟಿ ಪ್ರೈವೇಟ್ ಲಿಮಿಟೆಡ್, ಬೆಂಗಳೂರು.
ಸ್ಥಳ: ಕುಡಿತಿನಿ ಕೈಗಾರಿಕಾ ಪ್ರದೇಶ, ಬಳ್ಳಾರಿ ಜಿಲ್ಲೆ
ಹೂಡಿಕೆ: 96 ಕೋಟಿ ರೂ .
ಉದ್ಯೋಗ: 183
7 . ವಿಜಯ್ ಸ್ಪೆರೋಯ್ಡಲ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು,
ಸ್ಥಳ: ಮಾಶೆಟ್ಟನಹಳ್ಳಿ ಕೈಗಾರಿಕಾ ಪ್ರದೇಶ , ಚಿಕ್ಕಬಳ್ಳಾಪುರ ಜಿಲ್ಲೆ
ಹೂಡಿಕೆ: 88.63 ಕೋಟಿ ರೂ . ಉದ್ಯೋಗ: 112
8 . ಪರಮಪೂಜ್ಯ ಸೌರಶಕ್ತಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು,
ಸ್ಥಳ: ಕಲ್ಲೂರು, ಬಳಗೇರಿ ಮತ್ತು ಯಲಬುರ್ಗಾ ಹಳ್ಳಿಗಳು ಯಲಬುರ್ಗಾ ತಾಲೂಕು, ಕೊಪ್ಪಳ ಜಿಲ್ಲೆ,
ಹೂಡಿಕೆ: 54.07 ಕೋಟಿ ರೂ ಉದ್ಯೋಗ: 28