ಬೆಂಗಳೂರು, (www.thenewzmirror.com) ;
ಅನಧಿಕೃತ ಬೈಕ್ ಟ್ಯಾಕ್ಸಿ ಹಾಗೂ ಅನುಮತಿ ಇಲ್ಲದೆ ಓಡಾಡುತ್ತಿರೋ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದೆ. ಸಾರಿಗೆ ಇಲಾಖೆ ಆಯುಕ್ತ ಯೊಗೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೊದಲ ದಿನವೇ ಭರ್ಜರಿ ವಾಹನಗಳನ್ನ ಜಪ್ತಿ ಮಾಡಲಾಗಿದೆ.
ಬೆಂಗಳೂರು ಸಾರಿಗೆ ಇಲಾಖೆ ಜಂಟಿ ಆಯುಕ್ತರ ನೇತೃತ್ವದಲ್ಲಿ ಮೊದಲ ದಿನದ ವಿಶೇಷ ಕಾರ್ಯಾಚರಣೆಯಲ್ಲಿ 133 ವಾಹನಗಳನ್ನ ಜಪ್ತಿ ಮಾಡಲಾಗಿದ್ದು , ಇದರಲ್ಲಿ 29 ಎಲೆಕ್ಟ್ರಿಕ್ ಬೈಕದ ಗಳೂ ಸೇರಿಕೊಂಡಿವೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಆಯಾ ಸಾರಿಗೆ ಇಲಾಖೆ ಕಚೇರಿಗಳ ಮುಖ್ಯಸ್ಥರ ನೇತೃತ್ವದಲ್ಲಿ ವಿಶೇಷ ಡ್ರೈವ್ ನಡೆದಿದ್ದು, ಇದು ಖಾಸಗಿ ವಾಹನ ಮಾಲೀಕರ ಒಕ್ಕೂಟ ನಡೆಸಿದ್ದ ಹೋರಾಟದ ಮೊದಲ ಜಯ ಎಂದು ಬಣ್ಣಿಸಲಾಗುತ್ತಿದೆ.
ಯಾವ್ಯಾವ ಕಚೇರಿ ವ್ಯಾಪ್ತಿಯಲ್ಲಿ ವಾಹನಗಳು ಜಪ್ತಿ.?
ಕೋರಮಂಗಲ ಕಚೇರಿ 18 ವಾಹನಗಳು
ರಾಜಾಜಿನಗರ ಕಚೇರಿ 15 ವಾಹನಗಳು
ಯಶವಂತಪುರ ಕಚೇರಿ 16 ವಾಹನಗಳು
ಕೆ.ಆರ್. ಪುರಂ ಕಚೇರಿ 10 ವಾಹನಗಳು
ಯಲಹಂಕ ಕಚೇರಿ 15 ವಾಹನಗಳು
ಜಯನಗರ ಕಚೇರಿ 12 ವಾಹನಗಳು
ಎಲೆಕ್ಟ್ರಾನಿಕ್ ಸಿಟಿ ಕಚೇರಿ 12 ವಾಹನಗಳು
ಚಂದಾಪುರ ಕಚೇರಿ 11 ವಾಹನಗಳು
ದೇವನಹಳ್ಳಿ ಕಚೇರಿ 9 ವಾಹನಗಳು
ಜ್ಞಾನಭಾರತಿ ಕಚೇರಿ 11 ವಾಹನಗಳು
ಕಸ್ತೂರಿನಗರ ಕಚೇರಿ 15 ವಾಹನಗಳು