ಬೆಂಗಳೂರು, ( www.thenewzmirror.com ) ;
ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗಶೆಟ್ಟಿ ಇಂದು ವಿಧಿವಶರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ರಿವರ್ಸ್ ಡಯಾಬಿಟಿಸ್ ಮೂಲಕ ಮಧುಮೇಹ ಗೆದ್ದಿದ್ದ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ, ಇಂದು ಸಂಜೆ ಮನೆಯಲ್ಲೇ ಟ್ರಡ್ ಮಿಲ್ ಮಾಡುವಾಗ ಹೃದಯಾಘಾತವಾಗಿದೆ. ಮನೆಯಲ್ಲಿ ಜಿಮ್ ಮಾಡಬೇಕಾದರೆ ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಕೊಡಿಸಿದ್ದಾದರೂ ಅವರು ಬದುಕುಳಿಯಲಿಲ್ಲ.