ಬೆಂಗಳೂರು/ಬೆಳಗಾವಿ (www.thenewzmirror.com);
ಐಟಿಸಿಟಿ., ಬಿಟಿಸಿಟಿ, ಸಿಲಿಕಾನ್ ಸಿಟಿ, ಉದ್ಯಾನನಗರಿ ಅಂತೆಲ್ಲಾ ಕರೆಸಿಕೊಳ್ತಿದ್ದ ಬೆಂಗಳೂರಿನಲ್ಲಿ ಸದ್ದಿಲ್ಲದೇ ಅರಣ್ಯ ಭೂಮಿ ಮಾಯವಾಗುತ್ತಿದೆ. ಬೆಂಗಳೂರು ಬೆಳೆದಂತೆ ಇದರ ವ್ಯಾಪ್ತಿಯೂ ಹೆಚ್ಚುತ್ತಾ ಹೋಗ್ತಿದೆ. ಹೀಗಾಗಿ ಹಸಿರೀಕರಣ ದಿನದಿಂದ ದಿನಕ್ಕೆ ಕಡಿಮೆಯಾಗಿ ಕಾಂಕ್ರೀಟ್ ನಾಡಾಗಿ ಪರಿವರ್ತನೆ ಆಗ್ತಿದೆ..,
ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಹತ್ರತ್ರ 1200 ಎಕರೆ ಅರಣ್ಯ ಭೂಮಿ ನಾಪತ್ತೆಯಾಗಿದೆ. ಹೀಗಾಗಿ ಕಾಡು ಪ್ರಾಣಿಗಳು ನಾಡಿಗೆ ಬರ್ತಿವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಳಗಾವಿಯಲ್ಲಿ ನಡೆಯುತ್ತಿರೋ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.

ಕಾಡುಗಳನ್ನ ನಾಶ ಮಾಡುತ್ತಿರುವುದರಿಂದ ನಾಡಿನತ್ತ ಕಾಡು ಪ್ರಾಣಿಗಳು ಬರ್ತಿವೆ ಎಂದು ಬಿಜೆಪಿ ಶಾಸಕ ಸತಿಶ್ ರೆಡ್ಡಿ ಕೇಳಿದ್ದ ಪ್ರಶ್ನೆಗೆ ಉತ್ತರಿಸುವ ವೇಳೆ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ 21,992 ಎಕರೆ (8,900 ಹೆಕ್ಟೇರ್) ಅರಣ್ಯ ಭೂಮಿ ಇತ್ತು. ನಗರ ಬೆಳೆದಂತೆ ಇದರ ಪ್ರಮಾಣ ಇದೀಗ ಕಡಿಮೆಯಾಗಿದೆ. 21,992 ಎಕರೆ ಪೈಕಿ 2,871 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಹೀಗೆ ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ 1,051 ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ಒತ್ತುವರಿಯಾಗಿರುವ ಪೈಕಿ 403 ಎಕರೆ ವಶಪಡಿಸಿಕೊಳ್ಳಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.