ಬೆಂಗಳೂರು, (www.thenewzmirror.com) ;
ರಾಜ್ಯಾದ್ಯಂತ ಇಂದಿನಿಂದ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಇಂದು ಒಂದು ದಿನದ ಮಟ್ಟಿಗೆ ಸಿಎಂ ಸಿದ್ದರಾಮಯ್ಯ ಬಸ್ ಕಂಡಕ್ಟರ್ ಆಗಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಟಿಕೆಟ್ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ರು. ಆ ಮೂಲಕ ಐದು ಯೋಜನೆಗಳ ಪೈಕಿ ಮೊದಲ ಗ್ಯಾರಂಟಿ ಯೋಜನೆಯನ್ನ ಜಾರಿಗೊಳಿಸಿದಂತಾಗಿದೆ.







ಅದರಂತೆ ಕಾಂಗ್ರೆಸ್‌ನ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆ (ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ)ಗೆ ಇಂದು ಚಾಲನೆ ನೀಡಲಾಗಿದೆ. ಈ ವೇಳೆ ಸಿಎಂ, ಅಧಿಕೃತವಾಗಿ ಐವರು ಮಹಿಳೆಯರಿಗೆ ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ ನೀಡಲಾಯಿತು. ಅದರಲ್ಲಿ ಬೆಂಗಳೂರಿನ ನಿವಾಸಿ ಸುಮಿತ್ರಾ ಎನ್ನುವವರಿಗೆ ಸಿಎಂ ಮೊದಲ ಸ್ಮಾರ್ಟ್ ವಿತರಣೆ ಮಾಡಿದ್ರು.

ನಾನು ಬೆಂಗಳೂರಿನ ನಿವಾಸಿ ಆಗಿದ್ದು, ಸ್ಮಾರ್ಟ್ ಕಾರ್ಡ್ ಪಡೆದ ಮೊದಲ ಮಹಿಳೆ ಎಂಬುದು ನನ್ನ ಸಂತಸವಾಗಿದೆ. ಕಾರ್ಡ್ ಪಡೆದುಕೊಂಡು ತುಂಬಾ ಖುಷಿಯಾಗಿದೆ. ಕಾರ್ಡ್ ಪಡೆದ ಮೊದಲನೇ ವ್ಯಕ್ತಿ ಅನ್ನೋದಕ್ಕೆ ಹೆಮ್ಮೆ ಆಗ್ತಿದೆ ಅಂತ ರಾಜ್ಯದಲ್ಲಿ ಮೊದಲ ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ ಪಡೆದ ಮಹಿಳೆ ಸುಮಿತ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಮೂರು ತಿಂಗಳಲ್ಲಿ ಎಲ್ಲ ಅರ್ಹ ಫಲಾನುಭವಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡುವ ವ್ಯವಸ್ಥೆಯನ್ನ ಸಾರಿಗೆ ಇಲಾಖೆ ಮಾಡಲಿದ್ದು, ಇದಕ್ಕಾಗಿ ಪ್ರಯಾಣಿಕರಿಂದ ಯಾವುದೇ ಹಣ ಪಡೆಯುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ರು.