ಬೆಂಗಳೂರು, (www.thenewzmirror.com) ;
ಬೆಂಗಳೂರು ವಿಶ್ವವಿದ್ಯಾಲಯ 8 ಪ್ರಾಧ್ಯಾಪಕರು 2024 ಸಾಲಿನ ವಿಶ್ವದ 2% ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿವಿ ಹಾಗೂ ನೆದರ್ಲೆಂಡ್‌ನ ಎಲ್ಸವಿಯರ್ ಪ್ರಕಾಶನ ಸಂಸ್ಥೆ ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ವಿಜ್ಞಾನಿಗಳನ್ನು ಗುರುತಿಸಿ ಸ್ಥಾನ ನೀಡುತ್ತದೆ.
ಬೆಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ, ಭೌತಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ಮತ್ತು ಗಣಿತ ವಿಭಾಗಕ್ಕೆ ಸೇರಿದ ಚಂದ್ರಶೇಖರಯ್ಯ ಡಿ.ಎಸ್, ದೇವಿ ಎಲ್ ಗೋಮತಿ, ರುದ್ರಯ್ಯ ಎನ್, ಶಿವಕುಮಾರ, ಸಿ ಶ್ರೀನಿವಾಸ್, ಕುಂಬಿನರಸಯ್ಯ ಎಸ್, ಈರಯ್ಯ ಬಿ, ವಿಷ್ಣು ಕಾಮತ್ ಸೇರಿದಂತೆ 8 ಪ್ರಾಧ್ಯಾಪಕರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ರಾಜ್ಯ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಅತಿ ಹೆಚ್ಚು ಸ್ಥಾನ ಪಡೆದಿದ್ದು ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದೆ.
ಈ ಬಗ್ಗೆ ಕುಲಪತಿ ಡಾ.ಜಯಕರ ಎಸ್ ಎಂ ಪ್ರತಿಕ್ರಿಯಿಸಿದ್ದು “ಬೆಂಗಳೂರು ವಿಶ್ವವಿದ್ಯಾಲಯ ಸತತವಾಗಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸುತ್ತಿದ್ದು ಆ ಸಾಲಿಗೆ ಮತ್ತೊಂದು ಹಿರಿಮೆ ಸೇರ್ಪಡೆಯಾಗಿದೆ.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ, ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು,ಪ್ರತಿಫಲವಾಗಿ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.ವಿಜ್ಞಾನ ಕ್ಷೇತ್ರದಲ್ಲಿನ ಅಧ್ಯಯನ ಮತ್ತು ಸಂಶೋಧನೆಗಳಿಂದ ವಿವಿ ಪ್ರಾಧ್ಯಾಪಕರು ಚಾಪು ಮೂಡಿಸಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳ ಅಭಿವೃದ್ಧಿಗೂ ಸಾಕಷ್ಟು ಅನುಕೂಲವಾಗಲಿದೆ. ಭವಿಷ್ಯದಲ್ಲಿ ವಿಶ್ವವಿದ್ಯಾಲಯ ವಿಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಉತ್ತೇಜನ,ಪ್ರೋತ್ಸಾಹ ನೀಡಲಿದೆ” ಎಂದು ತಿಳಿಸಿದರು.