ಬೆಂಗಳೂರು, (www.thenewzmirror.com) ;
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಬಲ್ಲ, ಮೆಟ್ರೋ 3ನೇ ಹಂತಕ್ಕೆ ಶೀಘ್ರ ಅನುಮೋದನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರದ ನಿರ್ಧಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ರವರು ಧನ್ಯವಾದ ಅರ್ಪಿಸಿದ್ದು, ಅತ್ಯಂತ ತ್ವರಿತಗತಿಯಲ್ಲಿ ಅನುಮೋದನೆ ಪಡೆದ ಮೆಟ್ರೋ ಕಾಮಗಾರಿ ಇದಾಗಿದೆ ಎಂದು ತಿಳಿಸಿದ್ದಾರೆ.
ಮೂರನೇ ಹಂತ ಎಲ್ಲಿಂದ ಎಲ್ಲಿಗೆ.?
– ಜೆ ಪಿ ನಗರದ ವೆಗಾ ಸಿಟಿ ಜಂಕ್ಷನ್ ನಿಂದ, ಮಾಗಡಿ ರಸ್ತೆಯಲ್ಲಿರುವ ಕಡಬಗೆರೆ ವರೆಗೆ 44. 65 ಕಿಲೋಮೀಟರ್
– 16,333 ಕೋಟಿ ರೂ, ಮೊತ್ತದ ಈ ಯೋಜನೆ
https://www.facebook.com/share/r/WHihpFTPJtttuk14/?mibextid=xfxF2i
3ನೇ ಹಂತಕ್ಕೆ ಪ್ರಮುಖ ಅನುಮೋದನೆಗಳಲ್ಲಿ ಒಂದಾಗಿದೆ, ಇದು ಒಟ್ಟು 44.65 ಕಿ.ಮೀ ಉದ್ದದ ಎರಡು ಎಲಿವೇಟೆಡ್ ಕಾರಿಡಾರ್’ಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು 31 ನಿಲ್ದಾಣಗಳನ್ನ ಒಳಗೊಂಡಿರುತ್ತದೆ. ಈ ಕುರಿತು ವಿವರಣೆ ನೀಡಿರುವ ಸಂಸದ ಸೂರ್ಯ, ” ಮೆಟ್ರೋ 3ನೇ ಹಂತದ ಅನುಮೋದನೆ ಮೋದಿ ಸರ್ಕಾರ ಯಾವ ರೀತಿ ತ್ವರಿತಗತಿಯಲ್ಲಿ ಸ್ಪಂದಿಸುತ್ತದೆ ಎಂಬುದಕ್ಕೆ ಸಾಕ್ಷಿ ” ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿ ರಾಜ್ಯ ಬಿಜೆಪಿ ಸರ್ಕಾರ 3 ನೇ ಹಂತದ DPR ಗೆ ಒಪ್ಪಿಗೆ ನೀಡಿದ್ದು, ಕೇಂದ್ರ ಸರ್ಕಾರ ಕೂಡ ಇದಕ್ಕೆ ಶೀಘ್ರ ಅನುಮತಿ ಒದಗಿಸಿದೆ.