ಬೆಂಗಳೂರು,(www.thenewzmirror.com) ;
ಬೆಲೆ ಏರಿಕೆಯಿಂದಾಗಿ ತತ್ತರಿಸಿರೋ ರಾಜ್ಯದಲ್ಲಿ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ನೀಡೋಕೆ ಮುಂದಾಗಿದೆ. ಶೀಘ್ರದಲ್ಲೇ ಮದ್ಯದ ದರವನ್ನ ಇಳಿಕೆ ಮಾಡೋಕೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು, ಜುಲೈ 1 ರಿಂದ ದರ ಇಳಿಕೆಯಾಗಲಿದೆ ಎಂಬ ಮಾಹಿತಿ ಲಭಿಸಿದೆ. ರಾಜ್ಯ ಸರ್ಕಾರ ದುಬಾರಿ ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನ ಇಳಕೆ ಮಾಡಿದ್ದು, ಬಿಯರ್ ಸೇರಿದಂತೆ ದುಬಾರಿಯಾಗಿದ್ದ ಮದ್ಯಗಳ ದರ ಕಡಿಮೆಯಾಗಲಿದೆ. ಜುಲೈ 1 ರಿಂದ ಅಗ್ಗವಾಗಿ ಲಭ್ಯವಾಗಲಿದೆ.
ರಾಜ್ಯ ಸರ್ಕಾರ ಇತ್ತೀಚೆಗೆ ಮಂಡನೆ ಮಾಡಿದ್ದ ಅಂದರೆ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್ ಭಾಷಣದಲ್ಲಿ ನೆರೆ ರಾಜ್ಯಗಳ ಮದ್ಯದ ದರಗಳಿಗೆ ಅನುಗುಣವಾಗಿ ದೇಶೀಯವಾಗಿ ತಯಾರಿಸಿದ ಮದ್ಯ ಮತ್ತು ಬಿಯರ್ ನ ಸ್ಲ್ಯಾಬ್ ದರಗಳನ್ನ ಪರಿಷ್ಕರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಜುಲೈ 1 ರಿಂದ ಬಿಯರ್ ಸೇರಿದಂತೆ ಮದ್ಯದ ದರದಲ್ಲಿ ಇಳಿಕೆಯಾಗಲಿದೆ. ರಾಜ್ಯ ಸರ್ಕಾರ ಮದ್ಯದ ಮೇಲಿನ ದರವನ್ನ ಈ ಹಿಂದೆ ಏರಿಕೆ ಮಾಡುತ್ತಾ ಬಂದಿತ್ತು. 2023ರ ಜುಲೈನಲ್ಲಿ ದೇಶೀಯ ಮದ್ಯದ ಮೇಲೆ ಅಬಕಾರಿ ಸುಂಕವನ್ನ ಹೆಚ್ಚಳ ಮಾಡಿದ್ದರೆ 2024ರ ಜನವರಿಯಲ್ಲಿ ಬಿಯರ್ ಮೇಲಿನ ಅಬಕಾರಿ ಸುಂಕವನ್ನ ಏರಿಸಿತ್ತು. ಇದೀಗ ಜುಲೈ ತಿಂಗಳ ಆರಂಭದಿಂದ ದರದಲ್ಲಿ ಕೊಂಚ ಇಳಿಕೆಯಾಗಲಿದೆ.