ಬೆಂಗಳೂರು, (www.thenewzmirror.com);
ಬೆಂಗಳೂರು ಜನತೆಗೆ ಇವತ್ತು ಶಾಕ್ ಕಾದಿತ್ತು. ಬೆಂಗಳೂರು ಬಂದ್, ಕರ್ನಾಟಕ ಬಂದ್, ಹಬ್ಬ ಅಂತ ಹತ್ರತ್ರ ಒಂದು ವಾರ ರಜೆಯಲ್ಲಿದ್ದ ಬೆಂಗಳೂರು ಮಂದಿ ಇಂದು ಕಾರ್ಯನಿಮಿತ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು.
ಹಸಿರು ಮಾರ್ಗದ ಮೆಟ್ರೋದಲ್ಲಿ ರಾಜಾಜಿನಗರ ನಿಲ್ದಾಣದ ಕರ್ವ್ ನಲ್ಲಿ ಇಂದು ಬೆಳಗ್ಗೆ ತಾಂತ್ರಿಕ ದೋಷ ಉಂಟಾಗಿತ್ತು. ಹೀಗಾಗಿ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ರಾಜಾಜಿನಗರ ಕರ್ವ ಬಳಿ ರೀ ರೈಲ್ ವಾಹನ ಆಯತಪ್ಪಿದ್ದರ ಪರಿಣಾಮ ಹಸಿರು ಮಾರ್ಗದಲ್ಲಿ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಏನಿದು ರೀ ರೈಲ್.?
ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ಬಳಸುವ ರೀ ರೈಲ್. ನೋಡಲು ಬಸ್ ರೀತಿ ಇರುವ ಈ ವಾಹನ ಮೆಟ್ರೋ ಹಳಿಗಳ ಮೇಲೆ ಹೋಗಿ ದೋಷವನ್ನ ಸರಿಪಡಿಸುವ ಕೆಲಸ ಮಾಡುತ್ತದೆ. ಇಂದು ಬೆಳಗ್ಗೆ ರಾಜಾಜಿನಗರದ ಕರ್ವ ಬಳಿ ರೀ ರೈಲ್ ಟ್ರ್ಯಾಕ್ ತಪ್ಪಿ ಭಾರೀ ತೊಂದರೆಯಾಗಿತ್ತು.
ರೀ ರೈಲ್ ವಾಹನವನ್ನು ಹಳಿಗೆ ತರಲು ಹರಸಾಹಸ ಪಡುತ್ತಿರುವುದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
ಮೆಟ್ರೋ ಅಧಿಕಾರಿಗಳು ಹೇಳುವುದೇನು?
ರೀ ರೈಲ್ ಆಯತಪ್ಪಿದ್ದರಿಂದ ಸಮಸ್ಯೆ ಆಗುತ್ತಿದೆ. ವಿಚಾತ ತಿಳಿದ ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಸಂಜೆ ವೇಳೆಗೆ ಸಮಸ್ಯೆ ಬಗೆಹರಿಯುವ ವಿಶ್ವಾಸವಿದ್ದು, ಸಮಸ್ಯೆ ಸರಿಯಾಗುವ ವರೆಗೂ ಏಕ ಮುಖ ಸಂಚಾರದಲ್ಲಿ ಮೆಟ್ರೋ ಓಡಾಟ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.