2nd Year Anniversary | ನಿಮ್ಮ ನ್ಯೂಝ್ ಮಿರರ್ ಗೆ ಎರಡನೇ ವರ್ಷದ ಸಂಭ್ರಮ.., ಹರಸಿ ಹಾರೈಸಿ, ಪ್ರೋತ್ಸಾಹಿಸಿ..!

ಬೆಂಗಳೂರು, (www.thenewzmirror.com) ;

ನ್ಯೂಝ್ ಮಿರರ್ ಡಿಜಿಟಲ್ ನ್ಯೂಸ್ ವೆಬ್ ಸೈಟ್.., 2022 ರ ಆಗಸ್ಟ್ 16 ರಂದು ಪ್ರಾರಂಭವಾದ ವೆಬ್ ಸೈಟ್.., ಸಾಕಷ್ಟು ಪ್ರಸಿದ್ದಿ ಪಡೆದಿದ್ದ ವೆಬ್ ಸೈಟ್ ಗಳ ನಡುವೆ ಹುಟ್ಟಿಕೊಂಡ ನ್ಯೂಸ್ ಪೋರ್ಟಲ್.. ಇದೀಗ ಕುಂಠುತ ಕುಂಠುತ ಎರಡನೇ ಹೆಜ್ಜೆಯನ್ನ ಇಡುವತ್ತ ಮುನ್ನುಗ್ಗುತ್ತಿದೆ.

RELATED POSTS

ಆರಂಭದಲ್ಲಿ ಸಾಕಷ್ಟು ಆತಂಕಗಳ ನಡುವೆ ಆರಂಭಿಸಿದ ನ್ಯೂಝ್ ಮಿರರ್ ವೆಬ್ ಸೈಟ್ ಇದೀಗ ಬಹುತೇಕ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲು ಮಾಧ್ಯಮದ ಕ್ಷೇತ್ರದಲ್ಲಿ ಸ್ವಲ್ಪ ಅನುಭವ ಇರುವ ಕೆಲ ಸ್ನೇಹಿತರ ಆಲೋಚನೆಯಿಂದ ಹುಟ್ಟಿಕೊಂಡ ವೆಬ್ ಸೈಟ್ thenewzmirror( www.thenewzmirror.com) . ಪ್ರಾರಂಭದಲ್ಲಿ ಸಾಕಷ್ಟು ಕಷ್ಟಪಟ್ಟು ಪುಟ್ಟ ಹೆಜ್ಜೆ ಇಡುವಾಗ ಸಾಕಷ್ಟು ಅಡ್ಡಿ ಆತಂಕಗಳು ಎದುರಾದವು. ಈಗಾಗಲೇ ಹೆಚ್ಚು ಪ್ರಚಲಿತದಲ್ಲಿರುವ ನ್ಯೂಸ್ ಪೋರ್ಟಲ್ ಗಳು ಇರುವಾಗ ನಿಮ್ಮ ವೆಬ್ ಸೈಟ್ ಅನ್ನ ಯಾರು ನೋಡುತ್ತಾರೆ. ಇವೆಲ್ಲ ಬೇಕಿತ್ತಾ ಅನ್ನೋ ಅಭಿಪ್ರಾಯಗಳೂ ಕೇಳಿ ಬಂದವು. ಆದರೆ ಇವೆಲ್ಲವನ್ನೂ ಪಕ್ಕಕ್ಕಿಟ್ಟು ಸಮಾಜಕ್ಕೆ ಕೈಲಾದಮಟ್ಟಿಗೆ ಒಳಿತನ್ನ ಮಾಡಬೇಕೆಂಬ ಆಶಯದೊಂದಿಗೆ ಇಬ್ಬರು ಸ್ನೇಹಿತರು ಆರಂಭಿಸಿದ ವೆಬ್ ಸೈಟ್.

ಒಬ್ಬರು ಮಾಧ್ಯಮ ಕ್ಷೇತ್ರದಲ್ಲಿ ಸ್ವಲ್ಪ ಅನುಭವ.. ಮತ್ತೊಬ್ಬರು ಮಾಧ್ಯಮದ ಗಂಧ ಗಾಳಿ ಗೊತ್ತಿಲ್ಲದ ಸ್ನೇಹಿತ. ಇವರಿಬ್ಬರೂ ಸೇರಿಕೊಂಡು ಆರಂಭಿಸಿ, ಇದೀಗ ಎರಡು ವಸಂತಗಳನ್ನ ಪೂರೈಸಿದೆ. ಆರಂಭದಲ್ಲಿ ಸಾಕಷ್ಟು ತಪ್ಪುಗಳು, ಯಡವಟ್ಟುಗಳನ್ನ ಮಾಡಿ ಅನೇಕರಿಂದ ಸಲಹೆ, ಸೂಚನೆಗಳನ್ನ ಪಡೆದು ಇದೀಗ ಪುಟ್ಟದಾಗಿ ಎರಡಯ ಹೆಜ್ಜೆಯನ್ನು ಯಶಸ್ವಿಯಾಗಿ ಇಟ್ಟಿದೆ.

ವೆಬ್ ಸೈಟ್ ಆರಂಭವಾಗಿ ಎರಡು ವರ್ಷದಲ್ಲಿ ಹಲವಯ ಸಮಾಜಮುಖಿ ಸುದ್ದಿಗಳನ್ನ ಪ್ರಕಟಿಸುವ ಮೂಲಕ ವ್ಯವಸ್ಥೆಯನ್ನು ತಿದ್ದುವ ಕೆಲಸ ಮಾಡಿದ ತೃಪ್ತಿ ನ್ಯೂಝ್ ಮಿರರ್ ತಂಡಕ್ಕಿದೆ. ಮುಂದೆಯೂ ಇದೇ ರೀತಿ ಸಮಾಜದ ಅಂಕುಡೊಂಕುಗಳನ್ನ ತಿದ್ದುವ, ತೀಡುವ ಹಾಗೂ ಸಮಾಜವನ್ನ ಸರಿದಾರಿಗೆ ತರುವ ನಿಟ್ಟಿನಲ್ಲಿ ಅಳಿಲು ಸೇವೆ ಹೀಗೆ ಮುಂದುವರೆಯಲಿದೆ.

ಇದಕ್ಕೆ ನಿಮ್ಮ ಸಹಕಾರ ಅಗತ್ಯವಿದ್ದು, ಕೈ ಜೋಡಿಸುವ ಕೆಲಸವೂ ಆಗಬೇಕಿದೆ. ಬಾಯಲ್ಲಿ ಹೇಳಿದಷ್ಟು ಸುಲಭವನ್ನ ಒಂದು ವೆಬ್ ಸೈಟ್ ನಡೆಸುವುದು. ಎಲ್ಲ ಅಡ್ಡಿ ಹಾಗೂ ಆತಂಕಗಳ ನಡುವೆ ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ಧೈರ್ಯ ಹಾಗೂ ಹುಮ್ಮಸ್ಸು ಭಗವಂತ ನೀಡಿದ್ದು, ಅದೇ ಆತ್ಮವಿಶ್ವಾಸದೊಂದಿಗೆ ಮೂರನೇ ಹೆಜ್ಜೆಯನ್ನು ಇಡುವ ಕೆಲ್ಸ ಆಗುತ್ತಿದೆ‌.

ಇದೂ ವರೆಗೂ ನಮ್ಮನ್ನ ಬೆಂಬಲಿಸಿದ ರೀತಿಯಲ್ಲಿಯೇ ಮುಂದೆಯೂ ಹರಿಸ ಹಾಗೂ ಬೆಂಬಲಿಸಿ, ಪುಟ್ಟ ಸುದ್ದಿ ಪೋರ್ಟಲ್ ಅನ್ನ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಕರಿಸುವಿರಾ ಎಂಬ ನಿರೀಕ್ಷೆಯಲ್ಲಿ…,

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist