ಬೆಂಗಳೂರು, (www.thenewzmirror.com) ;
ಮೂತ್ರಕೋಶದ ಕ್ಯಾನ್ಸರ್‌ನಿಂದ ಶಿವರಾಜ್‌ಕುಮಾರ್ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ತಿಳಿಸಿದ್ದಾಗಿ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ತಿಳಿಸಿದ್ದಾರೆ.
ಕ್ಯಾನ್ಸರ್ ಹಿನ್ನೆಲೆಯಲ್ಲಿ ಇತ್ತೀಚಿಗೆ ನಟ ಶಿವರಾಜ್ ಕುಮಾರ್ ಅವರು 2024ರ ಡಿಸೆಂಬರ್ 25ರಂದು ಅಮೆರಿಕದ ಮಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್‌ಕುಮಾರ್, ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಈ ಕುರಿತು ಅವರ ಪತ್ನಿ ಗೀತಾ ಮಾಹಿತಿ ಹಂಚಿಕೊಂಡಿದ್ದು, ಶಿವರಾಜಕುಮಾರ್ ಅವರ ಎಲ್ಲಾ ಹೆಲ್ತ್ ರಿಪೋರ್ಟ್ ನೆಗೆಟಿವ್ ಆಗಿದ್ದು ಕ್ಯಾನ್ಸರ್ ಫ್ರೀ ಎಂದು ವರದಿ ಬಂದಿದೆ. ಕ್ಯಾನ್ಸರ್ ಫ್ರೀ ಎಂದು ಶಿವಣ್ಣ ಪತ್ನಿ ಗೀತಾ ಶಿವರಾಜಕುಮಾರ್ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ದೆ ಅಭಿಮಾನಿಗಳ ಪ್ರಾರ್ಥನೆಯಿಂದ ಎಲ್ಲ ವರದಿಗಳು ನೆಗೆಟಿವ್ ಬಂದಿದೆ. ಪೆಥಾಲಜಿ ವರದಿಯೂ ಬಂದಿದ್ದು, ಅದರಲ್ಲೂ ನೆಗೆಟಿವ್ ಬಂದಿದೆ. ಈ ಮೂಲಕ ಶಿವರಾಜ್‌ಕುಮಾರ್ ಅವರಿಗೆ ಕ್ಯಾನ್ಸರ್ ಇಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ ಎಂದು ಗೀತಾ ಶಿವರಾಜ್‌ಕುಮಾರ್ ಮಾಹಿತಿ ಇರುವ ವೀಡಿಯೋದಲ್ಲಿ ತಿಳಿಸಿದ್ದಾರೆ.
ಕ್ಯಾನ್ಸರ್ ಗೆದ್ದ ಬಗ್ಗೆ ಬಳಿಕ ಮಾತನಾಡಿರುವ ಶಿವರಾಜ್‌ಕುಮಾರ್, ‘ನನಗೂ ಭಯ ಆಗುತ್ತೆ. ಮಾತಾಡುವಾಗ ಎಲ್ಲಿ ಎಮೋಷನಲ್ ಆಗ್ತೀನೋ ಅಂತಾ. ಹೊರಡಬೇಕಾದಾಗ ನಾನು ಭಾವುಕನಾಗಿದ್ದೆ. ನನಗೂ ಅಂಥ ಒಂದು ಭಯ ಇತ್ತು. ಆದರೆ, ಭಯ ನೀಗಿಸೋಕೆ ಅಂತಾನೆ ಅಭಿಮಾನಿ ದೇವರುಗಳಿರ್ತಾರೆ. ಸಹ ಕಲಾವಿದರು, ಸ್ನೇಹಿತರು, ಸಂಬಂಧಿಗಳು ಹಾಗೂ ವೈದ್ಯರು ಇರುತ್ತಾರೆ. ಬೆಂಗಳೂರಿನಲ್ಲಿ ನನಗೆ ಕಿಮೋಥೆರಪಿ ಮಾಡಿದ ಡಾಕ್ಟರ್‌ಗಳು, ನರ್ಸ್‌ಗಳು ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಮನದಾಳದ ಮಾತನ್ನ ತಿಳಿಸಿದ್ದಾರೆ.
ಗೀತಾ, ನಿವಿ ಯಾವಾಗಲೂ ನನ್ನ ಬೆಂಬಲವಾಗಿ ನಿಂತಿದ್ದಾರೆ. ಯೂರಿನರಿ ಬ್ಲಾಡ್ ತೆಗೆದು ಹೊಸದು ಬ್ಲಾಡ್ ಹಾಕಿದ್ದಾರೆ. ಡಬ್ಬಲ್ ಪವರ್ ನೊಂದಿಗೆ ಬರುತ್ತೇನೆ ಎಂದು ಹೇಳಿದ್ದಾರೆ ಶಿವಣ್ಣ. ಜತೆಗೆ ಮಧು ಬಂಗಾರಪ್ಪ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಮಗು ನೋಡಿಕೊಂಡ ಹಾಗೆ ನೋಡಿಕೊಂಡಿದ್ದಾರೆ. ಬ್ಯಾಪ್ಟಿಸ್ಟ್ ಆಸ್ಪತ್ರೆ, ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲೂ ಚೆನ್ನಾಗಿ ನನ್ನ ನೋಡಿಕೊಂಡಿದ್ದಾರೆ ಎಂದಿದ್ದಾರೆ.
‘ತುಂಬಾ ದೊಡ್ಡ ಆಪರೇಷನ್ ಆಗಿದೆ. ಹಾಗಂತ ಕಿಡ್ನಿ ಕಸಿ ಮಾಡಿದ್ದಾರೆ ಅಂತೆಲ್ಲಾ ಹೇಳುತ್ತಿದ್ದಾರೆ. ಆದರೆ, ವಿಚಾರ ಅದಲ್ಲ. ಕ್ಯಾನ್ಸರ್‌ಗೆ ಒಳಗಾಗಿದ್ದ ಯೂರಿನಲ್ ಬ್ಲಾಡರ್ (ಮೂತ್ರಕೋಶ) ತೆಗೆದಿದ್ದಾರೆ. ಈಗ ಹೊಸ ಬ್ಲಾಡರ್‌ಅನ್ನು ಹಾಕಿದ್ದಾಗಿ ತಿಳಿಸಿದ್ದಾರೆ. ಇದೇ ನಡೆದಿರೋದು. ಗೊಂದಲ ಮಾಡಿಕೊಳ್ಳಬೇಡಿ. ವಿವರವಾಗಿ ಹೇಳೋಣ ಎಂದರೆ, ಎಲ್ಲರೂ ಗಾಬರಿಯಾಗುತ್ತಾರೆ ಅನ್ನೋ ಕಾರಣಕ್ಕೆ ಹೇಳಿಲ್ಲ. ಈ ಗಾಬರಿ ನನಗಿರಲಿ. ನಿಮ್ಮ ಹಾರೈಕೆ, ಪ್ರಾರ್ಥನೆಯಿಂದ ಚೇತರಿಕೆ ಕಾಣುತ್ತಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ ಕರುನಾಡ ಚಕ್ರವರ್ತಿ.