ಬೆಂಗಳೂರು, (www.thenewzmirror.com) ;
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಸಮೀಪ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ಮೃತಪಟ್ಟ 13ಮೃತರಿಗೆ ತಲಾ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ರಸ್ತೆ ಅಫಘಾತದಲ್ಲಿ 13ಮೃತ ದೇಹವನ್ನ ಹಾವೇರಿ ಜಿಲ್ಲಾಸ್ಪತ್ರೆ ರವಾನೆ ಮಾಡಲಾಗಿತ್ತು. ಈ ವೇಳೆ ಆಸ್ಪತೆಗೆ ಆಗಮಿಸಿದ್ದ ಮೃತ ಸಂಬಂಧಿಕರು ಪರಿಹಾರ ನೀಡದೆ ಹೊರತು ಮೃತ ದೇಹಗಳನ್ನ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದ್ದರು. ಇನ್ನು ಘಟನೆಯಲ್ಲಿ ಇನ್ನೂ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ದೇಹಗಳನ್ನ ಆಸ್ಪತ್ರೆಯಲ್ಲಿ ರವಾನಿಸಿದ್ದರೂ ಆಸ್ಪತ್ರೆ ಬಳಿ ಯಾವೊಬ್ಬ ಜನಪ್ರತಿನಿಧಿ ಬಾರದ ಹಿನ್ನಲೆಯಲ್ಲಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸಿಎಂ ಸಂತಾಪ ಸೂಚಿಸಿದ್ರು. ಅಷ್ಟೇ ಅಲ್ದೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಲ್ಲದೆ ಮೃತರ ಕುಟುಂಬಕ್ಕೆ ಸಹಾಯ ಮಾಡುವಂತೆಯೂ ಮನವಿ ಮಾಡಿದ್ದರು. ಅಂತಿಮವಾಗಿ ಸಿಎಂ ಇದೀಗ ಮೃತರಿಗೆ ತಲಾ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಸಚಿವ ಶಿವಾನಂದ ಪಾಟೀಲ್ ವೈಯುಕ್ತಿಕವಾಗಿ ಐವತ್ತು ಸಾವಿರ ಪರಿಹಾರವನ್ನ ನೀಡಿದ್ದಾರೆ. ಒಟ್ಟು 13ಮೃತರಿಗೆ ತಲಾ ಐವತ್ತು ಸಾವಿರದಂತೆ ಆರೂವರೆ ಲಕ್ಷ ಹಣವನ್ನ ವೈಯುಕ್ತಿಕವಾಗಿ ನೀಡಿದ್ದಲ್ಲದೇ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ದಾರೆ.