ಬೆಂಗಳೂರು, (www.thenewzmirror.com) ;
ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಹೆಚ್ಎಂಎಸ್ಐ) ಇಂದು ಹೊಚ್ಚ ಹೊಸ ಸಿಬಿ300ಎಫ್ ಫ್ಲೆಕ್ಸ್- ಫ್ಯುಯಲ್ ಬೈಕ್ ಬಿಡುಗಡೆ ಮಾಡಿದೆ. ದೇಶವು ಹಸಿರು ಸಾರಿಗೆ ವ್ಯವಸ್ಥೆಗೆ ಬದಲಾಗುತ್ತಿರುವ ಹೊತ್ತಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದೇ ಭಾವಿಸಲಾಗಿದೆ.
ಪರಿಸರಕ್ಕೆ ಒಳಿತು ಮಾಡುವ ಮನಸ್ಸು ಹೊಂದಿರುವ ಸವಾರರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿರುವ ಈ ಬೈಕ್ ಭಾರತದ ಮೊಟ್ಟ ಮೊದಲ 300 ಸಿಸಿ ಫ್ಲೆಕ್ಸ್ ಫ್ಯುಯಲ್ ಮೋಟಾರ್ ಸೈಕಲ್ ಆಗಿದೆ. ಗ್ರಾಹಕರು ಈಗ 2024 ಹೋಂಡಾ ಸಿಬಿ300ಎಫ್ ಫ್ಲೆಕ್ಸ್ ಫ್ಯುಯಲ್ ಬೈಕ್ ಅನ್ನು ತಮ್ಮ ಹತ್ತಿರದ ಬಿಗ್ ವಿಂಗ್ ಡೀಲರ್ ಶಿಪ್ ಗಳಲ್ಲಿ ಬುಕ್ ಮಾಡಬಹುದು. ಇದು ಆಕರ್ಷಕ ಬೆಲೆ ರೂ. 1,70,000 (ಎಕ್ಸ್-ಶೋ ರೂಂ, ದೆಹಲಿ) ರಲ್ಲಿ ದೊರೆಯುತ್ತದೆ.
ಹೊಸ ಸಿಬಿ300ಎಫ್ ಫ್ಲೆಕ್ಸ್ ಫ್ಯುಯಲ್ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಿದ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಓ, ವ್ಯವಸ್ಥಾಪಕ ನಿರ್ದೇಶಕ ಟ್ಸುಟ್ಸುಮು ಒಟಾನಿ, “ಹೋಂಡಾದಲ್ಲಿ ನಾವು 2050ರ ವೇಳೆಗೆ ನಮ್ಮ ಎಲ್ಲಾ ಉತ್ಪನ್ನಗಳು ಮತ್ತು ಕಾರ್ಪೊರೇಟ್ ಚಟುವಟಿಕೆಗಳಲ್ಲಿ ಇಂಗಾಲ ತಟಸ್ಥತೆ ಸಾಧಿಸುವ ಗುರಿಯನ್ನು ಇಟ್ಟು ಕೊಂಡಿದ್ದೇವೆ. ಸುಸ್ಥಿರ ಉತ್ಪನ್ನಗಳನ್ನು ಆವಿಷ್ಕರಿಸುವ ನಮ್ಮ ಬದ್ಧತೆಯ ಫಲವಾಗಿ ಇಂದು ನಾವು ಸಿಬಿ300ಎಫ್ ಮೋಟಾರ್ ಸೈಕಲ್ ನ ಹೊಚ್ಚ ಹೊಸ ಫ್ಲೆಕ್ಸ್ ಫ್ಯುಯಲ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.
ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಭಾರತದ ಇಂಧನ ಅಗತ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದೊಂದು ಬಹಳ ಮಹತ್ವದ ಮೈಲಿಗಲ್ಲಾಗಿದೆ. ಜಾಗತಿಕ ಮಟ್ಟದಲ್ಲಿ ಫ್ಲೆಕ್ಸ್- ಫ್ಯುಯಲ್ ತಂತ್ರಜ್ಞಾನದಲ್ಲಿ ಒಂದು ದಶಕಕ್ಕೂ ಹೆಚ್ಚು ಪರಿಣತಿ ಹೊಂದಿರುವ ಹೋಂಡಾ ಕಂಪನಿಯು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಫ್ಲೆಕ್ಸ್ ಫ್ಯುಯಲ್ ಕಡೆಗೆ ಬದಲಾವಣೆ ಹೊಂದಲು ಪ್ರೇರೇಪಿಸುವ ಸಲುವಾಗಿ ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಮೋಟಾರ್ ಸೈಕಲ್ ಅನ್ನು ಅಭಿವೃದ್ಧಿಪಡಿಸಿದೆ ಎಂದರು.
ಭಾರತ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಯೋಜನೆಗೆ ಬೆಂಬಲ ನೀಡುವ ಮತ್ತು ಸ್ವಚ್ಛ, ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ನಮ್ಮ ಉದ್ದೇಶದ ಭಾಗವಾಗಿ ಹೊಚ್ಚ ಹೊಸ ಸಿಬಿ300ಎಫ್ ಫ್ಲೆಕ್ಸ್ ಫ್ಯುಯಲ್ ಮೋಟಾರ್ ಸೈಕಲ್ ಬಿಡುಗಡೆ ಮಾಡಿದ್ದೇವೆ ಎಂದು ಇದೇ ವೇಳೆ ಹೇಳಿದರು.
ಫ್ಲೆಕ್ಸ್ ಫ್ಯುಯಲ್ ಮೋಟಾರ್ ಸೈಕಲ್ ಬಿಡುಗಡೆಯ ಕುರಿತು ಮಾತನಾಡಿದ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾದ ಸೇಲ್ಸ್ ಆಂಡ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಯೋಗೇಶ್ ಮಾಥುರ್, “ಭಾರತೀಯ ಗ್ರಾಹಕರು ಕೇವಲ ಅತ್ಯುತ್ತಮ ಕಾರ್ಯಕ್ಷಮತೆ ಒದಗಿಸುವ ಮೋಟಾರ್ ಸೈಕಲ್ ಗಳಿಗೆ ಮಾತ್ರ ಬೇಡಿಕೆ ಇಡುತ್ತಿಲ್ಲ, ಜೊತೆಗೆ ಪರಿಸರಕ್ಕೆ ನೆರವಾಗುವ ಸುಸ್ಥಿರ ಮೋಟಾರ್ ಸೈಕಲ್ ಗಳನ್ನು ಬಯಸುತ್ತಿದ್ದಾರೆ. ನಮ್ಮ ಹೊಸ ಹೋಂಡಾ ಸಿಬಿ300ಎಫ್ ಫ್ಲೆಕ್ಸ್ ಫ್ಯುಯಲ್ ಮೋಟಾರ್ ಸೈಕಲ್ ಆಧುನಿಕ ತಂತ್ರಜ್ಞಾನ ಮತ್ತು ಪರಿಸರ ಜವಾಬ್ದಾರಿಯ ಪರಿಪೂರ್ಣ ಸಮ್ಮಿಶ್ರಣವಾಗಿದ್ದು, ಇದು ಬೈಕ್ ಸವಾರರಿಗೆ ಫ್ಲೆಕ್ಸ್ ಫ್ಯುಯಲ್ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಗೆ ಹೆಸರಾಗಿರುವ ಹೋಂಡಾದ ಹೆಗ್ಗಳಿಕೆಗೆ ಪೂರಕವಾಗಿ ಈ ಮೋಟಾರ್ ಸೈಕಲ್ ರೂಪುಗೊಂಡಿದೆ. ಈ ಹೊಸ ಮೋಟಾರ್ ಸೈಕಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮತ್ತು ಪ್ರೀಮಿಯಂ ಮೋಟಾರ್ ಸೈಕಲ್ ವಿಭಾಗದಲ್ಲಿ ಸಂಚಲನ ಮೂಡಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.
ಪರಿಸರ ಸ್ನೇಹಿ ಮತ್ತು ಶಕ್ತಿಶಾಲಿ ಕಾರ್ಯಕ್ಷಮತೆ
ಹೋಂಡಾ ಸಿಬಿ300ಎಫ್ ಫ್ಲೆಕ್ಸ್ ಫ್ಯುಯಲ್ ಮೋಟಾರ್ ಸೈಕಲ್ ಅತ್ಯದ್ಭುತ ಸ್ಟ್ರೀಟ್ ಫೈಟರ್ ಆಗಿದ್ದು, ಪರಿಸರ ಸ್ನೇಹಿ ಗುಣದ ಜೊತೆ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಈ ಮೋಟಾರ್ ಸೈಕಲ್ 293.52 ಸಿಸಿ, ಆಯಿಲ್-ಕೂಲ್ಡ್, 4 ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಪಿಜಿಎಂ- ಎಫ್ಐ ಎಂಜಿನ್ ಹೊಂದಿದ್ದು, ಈ ಎಂಜಿನ್ ಇ85 ಫ್ಯುಯಲ್ (85% ಎಥೆನಾಲ್ ಮತ್ತು 15% ಗ್ಯಾಸೋಲಿನ್) ವರೆಗೆ ಹೊಂದಿಕೊಳ್ಳುತ್ತದೆ. ಇದು 18.3 ಕೆಡಬ್ಲ್ಯೂ ಪವರ್ ಮತ್ತು 25.9 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಎಂಜಿನ್ 6- ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಜೊತೆಗೆ ಈ ಬೈಕ್ ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಅನ್ನು ಸಹ ಹೊಂದಿದ್ದು, ಆ ಮೂಲಕ ತ್ವರಿತವಾಗಿ ಗೇರ್ ಶಿಫ್ಟ್ ಗಳನ್ನು ಸುಲಭವಾಗಿ ಮಾಡಬಹುದಾಗಿದೆ ಮತ್ತು ಗೇರ್ ಕಡಿಮೆ ಮಾಡುವಾಗ ಹಿಂಬದಿ ಚಕ್ರ ಜಿಗಿಯುವುದನ್ನು ತಡೆಯುತ್ತದೆ.
ಅತ್ಯುತ್ತಮ ನಿರ್ವಹಣೆ ಮತ್ತು ಆಧುನಿಕ ತಂತ್ರಜ್ಞಾನ:
ಈ ಮೋಟಾರ್ ಸೈಕಲ್ ಅತ್ಯುತ್ತಮ ಕಾರ್ಯಕ್ಷಮತೆ ಜೊತೆಗೆ ಅತ್ಯುತ್ತಮ ಸುರಕ್ಷತೆ ಒದಗಿಸುತ್ತದೆ. ಸಿಬಿ300ಎಫ್ ಫ್ಲೆಕ್ಸ್- ಫ್ಯುಯೆಲ್ ಎರಡೂ ತುದಿಗಳಲ್ಲಿ (276 ಎಂಎಂ ಮುಂಭಾಗ ಮತ್ತು 220 ಎಂಎಂ ಹಿಂಭಾಗ) ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ. ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ. ಸ್ಟಾಂಡರ್ಡ್ ಆಗಿ ಹೋಂಡಾ ಸೆಲೆಕ್ಟೇಬಲ್ ಟಾರ್ಕ್ ಕಂಟ್ರೋಲ್ (ಎಚ್ ಎಸ್ ಟಿ ಸಿ) ಹೊಂದಿದೆ. ಇದಲ್ಲದೆ ಅದರ ಗೋಲ್ಡನ್ ಕಲರ್ ಯು ಎಸ್ ಡಿ ಫ್ರಂಟ್ ಫೋರ್ಕ್ ಗಳು ಮತ್ತು 5 ಹಂತದ ಅಡ್ಜಸ್ಟೇಬಲ್ ರೇರ್ ಮೋನೊ ಶಾಕ್ ಸಸ್ಪೆನ್ಷನ್ ವ್ಯವಸ್ಥೆಯು ಅತ್ಯುತ್ತಮ ರೈಡಿಂಗ್ ಅನುಭವ ಒದಗಿಸುತ್ತದೆ. ಇದಲ್ಲದೆ, ಇದು ಎಲ್ಲಾ ಎಲ್ಇಡಿ ಬೆಳಕಿನ ವ್ಯವಸ್ಥೆಯನ್ನು ಪಡೆದಿರುತ್ತದೆ.
ಸಿಬಿ300ಎಫ್ ಅತ್ಯಾಧುನಿಕ ಡಿಜಿಟಲ್ ಇನ್ ಸ್ಟ್ರುಮೆಂಟ್ ಪ್ಯಾನೆಲ್ ಅನ್ನು ಹೊಂದಿದ್ದು, ಅದು 5 ಹಂತಗಳ ಕಸ್ಟಮೈಸ್ ಮಾಡಬಹುದಾದ ಬ್ರೈಟ್ ನೆಸ್ ಅನ್ನು ಹೊಂದಿದೆ ಮತ್ತು ಸ್ಪೀಡೋಮೀಟರ್, ಓಡೋಮೀಟರ್, ಟ್ಯಾಕೋಮೀಟರ್, ಫ್ಯುಯಲ್ ಗೇಜ್, ಟ್ವಿನ್ ಟ್ರಿಪ್ ಮೀಟರ್ ಗಳು, ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಕ್ಲಾಕ್ ಹೊಂದಿದ್ದು, ಅವಶ್ಯ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಜೊತೆಗೆ ಇದು ಎಲ್ಇಡಿ ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ.ಇದು ಇಂಟೆಲಿಜೆಂಟ್ ಎಥೆನಾಲ್ ಇಂಡಿಕೇಟರ್ ನ್ನು ಸಹ ಹೊಂದಿದೆ, ವಾಹನವು ಹೆಚ್ಚಿನ ಎಥೆನಾಲ್ ಅಂಶದ ಗ್ಯಾಸೋಲಿನ್ (85% ಕ್ಕಿಂತ ಹೆಚ್ಚು) ತುಂಬಿದ್ದರೆ ಅದು ಹೊಳೆಯುತ್ತದೆ.
ಬೆಲೆ, ಬಣ್ಣ ಮತ್ತು ಲಭ್ಯತೆ:
ಎಚ್ಎಂಎಸ್ಐ ಕಂಪನಿಯು ಸಿಬಿ300ಎಫ್ ಫ್ಲೆಕ್ಸ್ ಫ್ಯುಯಲ್ ಬಿಡುಗಡೆ ಮೂಲಕ ಗ್ರಾಹಕರು ಮತ್ತು ಪರಿಸರಕ್ಕೆ ಒಳಿತು ಮಾಡುವ ಅತ್ಯಾಧುನಿಕ ಮತ್ತು ಹೊಸ ಉತ್ಪನ್ನಗಳನ್ನು ಒದಗಿಸಿ ದ್ವಿಚಕ್ರ ವಾಹನ ಕ್ಷೇತ್ರದ ಭವಿಷ್ಯವನ್ನು ಉತ್ತಮಗೊಳಿಸುವ ಪ್ರಯತ್ನವನ್ನು ಮುಂದುವರೆಸಿದೆ.
2024 ಹೋಂಡಾ ಸಿಬಿ300ಎಫ್ ಫ್ಲೆಕ್ಸ್ ಫ್ಯುಯಲ್ ಒಂದೇ ವೇರಿಯಂಟ್ ನಲ್ಲಿ ಮತ್ತು ಸ್ಪೋರ್ಟ್ಸ್ ರೆಡ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರ ಆಕರ್ಷಕ ಬೆಲೆ ರೂ. 1,70,000 (ಎಕ್ಸ್ ಶೋ ರೂಂ, ದೆಹಲಿ) ಆಗಿದೆ. ಈ ಮೋಟಾರ್ ಸೈಕಲ್ ಗೆ ಈಗಾಗಲೇ ಬುಕಿಂಗ್ ಗಳು ಆರಂಭವಾಗಿದೆ ಮತ್ತು ಇದು ಅಕ್ಟೋಬರ್ 2024ರ ಕೊನೆಯ ವಾರದಿಂದ ದೇಶಾದ್ಯಂತ ಇರುವ ಎಲ್ಲಾ ಹೋಂಡಾ ಬಿಗ್ ವಿಂಗ್ ಡೀಲರ್ ಶಿಪ್ಗಳಲ್ಲಿ ಲಭ್ಯವಿರುತ್ತದೆ.