Water Bill | ಈ ತಿಂಗಳಿ ನೀರಿನ ಬಿಲ್ ಜಾಸ್ತಿ ಬಂದಿದ್ಯಾ‌? ಹಾಗಿದ್ರೆ ಯಾಕೆ ಅಂತ BWSSB ಕೊಟ್ಟ ಕಾರಣ ನೋಡಿ..!

ಬೆಂಗಳೂರು, (www.thenewzmirror.com) ;

ಬೆಂಗಳೂರು ಜಲಮಂಡಳಿ(BWSSB) ಜುಲೈ ತಿಂಗಳ ನೀರಿನ ಬಿಲ್ ಅನ್ನ ಈಗಾಗಲೇ ನೀಡಲಾಗಿದ್ದು, ಕಳೆದ ತಿಂಗಳಿಗಿಂತ ಹೆಚ್ಚಿಗೆ ಬಿಲ್ ನೀಡಿದೆ. ಸಾಮಾನ್ಯವಾಗಿ ಗ್ರಾಹಕರ ಅಸಮಧಾನ ಹಾಗೂ ಆಕ್ರೋಶಕ್ಕೂ ಕಾರಣವಾಗಿದೆ. ಸಾವಿರಾರು ಗ್ರಾಹಕರು ಜಲಮಂಡಳಿಗೆ ಕರೆ ಮಾಡಿ ಕಾರಣ ತಿಳಿಯೋ ಕೆಲ್ಸವನ್ನ ಮಾಡ್ತಿದ್ದಾರೆ‌.

RELATED POSTS

ಪ್ರತಿ ದಿನ ಸಹಾಯವಾಣಿಗೆ ಬರ್ತಿರೋ ಕರೆಗಳಿಗೆ ಸ್ಪಂದಿಸುತ್ತುದ್ದರೂ ಕರೆಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಸ್ವತಃ ಜಲಮಂಡಳಿಯಿಂದ ನೀರಿನ ಬಿಲ್ ಹೆಚ್ಚಳವಾಗಿರುವುದಕ್ಕೆ ಕಾರಣ ಕೊಟ್ಟಿದೆ‌.

ಬೆಂಗಳೂರು ನಗರದಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಯನ್ನು ಸಮಪರ್ಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಐಷಾರಾಮಿ ಹೋಟೇಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತೆಗಾಗಿ ಬಳಸುವ ನಲ್ಲಿಗಳಲ್ಲಿ ಏರಿಯೇಟರ್‌/ಫ್ಲೋರಿಸ್ಟ್ರಿಕ್ಟ್‌ಗಳನ್ನ ದಿನಾಂಕ 31/03/2024 ರ ಒಳಗಾಗಿ ಅಳವಡಿಸುವುದನ್ನ ಕಡ್ಡಾಯಗೊಳಿಸಲಾಗಿತ್ತು.

ನೀರಿನ ಉಳಿತಾಯ ಹಾಗೂ ಸದ್ಬಳಕೆಯ ಉದ್ದೇಶದಿಂದ ದಿನಾಂಕ ಮಾರ್ಚ್‌ 21, 2024 ಹೊರಡಿಸಲಾಗಿದ್ದ ಸುತ್ತೊಲೆಯಲ್ಲಿ, ನಿಗದಿತ ಸಮಯದಲ್ಲಿ ಏರಿಯೇಟರ್‌ ಅಳವಡಿಸಿಕೊಳ್ಳದೇ ಇರುವಂತಹ ಪ್ರಕರಣಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ – 1964 ರ ಕಲಂ 49(2) ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ _ಜಲಮಂಡಳಿಯ ವತಿಯಿಂದಲೇ ಏರಿಯೇಟರ್‌/ಫ್ಲೋ ರಿಸ್ಟ್ರಿಕ್ಟರ್‌ಗಳನ್ನು ಅಳವಡಿಸಿ ಅದಕ್ಕೆ ತಗಲುವ ಮೊತ್ತವನ್ನು ಆಯಾ ಗ್ರಾಹಕರಿಂದಲೇ ವಸೂಲಿ ಮಾಡುವ ಬಗ್ಗೆಯೂ ಸೂಚನೆ ನೀಡಲಾಗಿತ್ತು.

ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವುದಕ್ಕೆ ಸೂಕ್ತ ಸೂಚನೆ ಹಾಗೂ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದರೂ ಹಲವಾರು ಕಟ್ಟಡಗಳಲ್ಲಿ ಅಳವಡಿಕೆ ಮಾಡಲಾಗಿರಲಿಲ್ಲ. ನೀರಿನ ಉಳಿತಾಯದ ಮೂಲಕ ಸಮರ್ಪಕ ನೀರು ಸರಬರಾಜು ಮಾಡುವ ಉದ್ದೇಶದಿಂದ ಜಲಮಂಡಳಿ ಅತ್ಯುತ್ತಮ ಗುಣಮಟ್ಟದ ಏರಿಯೇಟರ್‌ ಗಳನ್ನ, ಏರಿಯೇಟರ್‌ ಅಳವಡಿಸಿಕೊಳ್ಳದೇ ಇರುವ ಕಡೆಗಳಲ್ಲಿ ಗ್ರಾಹಕರ ಅನುಮತಿಯ ಮೇರೆಗೆ ಅಳವಡಿಕೆ ಮಾಡಿದೆ. ಅತ್ಯುತ್ತಮ ಗುಣಮಟ್ಟದ ಏರಿಯೇಟರ್‌ ಹಾಗೂ ಅದನ್ನ ಅಳವಡಿಸುವ ಸೇವಾ ಶುಲ್ಕವನ್ನಾಗಿ ಪ್ರತಿ ನಲ್ಲಿಗೂ 50 ರೂಪಾಯಿಗಳಂತೆ ಶುಲ್ಕವನ್ನ ನಿಗದಿಗೊಳಿಸಲಾಗಿದೆ.

ಗ್ರಾಹಕರು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಅಳವಡಿಸಿಕೊಂಡಿರುವಂತಹ ನಲ್ಲಿಗಳ ಸಂಖ್ಯೆಯ ಅನುಗುಣವಾಗಿ (ಪ್ರತಿ ಏರಿಯೇಟರ್‌ ಹಾಗೂ ಅದನ್ನ ಅಳವಡಿಸಿರುವ ಸೇವಾ ಶುಲ್ಕವನ್ನ) ನೀರಿನ ಬಿಲ್‌ ನಲ್ಲಿ ಮೊತ್ತವನ್ನು ಸೇರ್ಪಡೆಗೊಳಿಸಲಾಗಿದೆ.

ಏರಿಯೇಟರ್‌ ಅಳವಡಿಸಲಾಗಿರುವ ಗ್ರಾಹಕರಿಗೆ ಪ್ರಸ್ತುತ ತಿಂಗಳಿನ ನೀರಿನ ಬಿಲ್‌ನಲ್ಲಿ ಅದಕ್ಕೆ ತಗಲುವ ಶುಲ್ಕವನ್ನು ಸೇರ್ಪಡೆಗೊಳಿಸಲಾಗಿದೆ. ಈ ಸಂಬಂಧ ಗ್ರಾಹಕರಿಗೆ ಯಾವುದೇ ಅನುಮಾನಗಳಿದ್ದಲ್ಲಿ ಸಹಾಯವಾಣಿ 1916 ಗೆ ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist