ಬೆಂಗಳೂರು, (www.thenewzmirror.com) ;
ಲೋಕ ಸಮರ ಹತ್ತಿರ ಬರುತ್ತಿರುವಾಗಲೇ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿ ಹೈ ಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಅಂತ ಬಿಜೆಪಿ ನಾಯಕರು ಹೇಳ್ತಾ ಇದ್ರೆ ಅತ್ತ ಕಾಂಗ್ರೆಸ್ ನ ನಾಯಕರು ಚುನಾವಣೆಯಲ್ಲಿ ಸೋತಿದ್ದರೂ ನಾವು ಅವತಿಗೆ ಉತ್ತಮ ಸ್ಥಾನ ಮಾನ ಕೊಟ್ಟಿದ್ವಿ, ಹೀಗಿದ್ದರೂ ಅವರು ಬಿಜೆಪಿ ಸೇರಿದ್ದು ಸರಿಯಲ್ಲ ಅಂತ ತಮ್ಮ ಬೇಸರವನ್ನ ಹೋರಹಾಕ್ತಾ ಇದ್ದಾರೆ.
ಇದೆಲ್ಲದರ ನಡುವೆ ನಿಮ್ಮ ನ್ಯೂಝ್ ಮಿರರ್ ಹಾಗೂ ಕೆಕೆ ನ್ಯೂಸ್ ಕಿರುವಾಸೆ ಕನ್ನಡ ಯೂಟ್ಯೂಬ್ ಚಾನಲ್ ಜಂಟಿಯಾಗಿ ಒಂದು ಸರ್ವೆಯನ್ನ ನಡೆಸಿತ್ತು. ಜಗದೀಶ್ ಶೆಟ್ಟರ್ ಘರ್ ವಾಪಾಸ್ಸಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆ ಸಮೇತ ಜನರ ಅಭಿಪ್ರಾಯ ಸಂಗ್ರಹ ಮಾಡುವ ಕೆಲ್ಸವನ್ನ ಮಾಡಲಾಗಿತ್ತು.
ಜಗದೀಶ್ ಬಿಜೆಪಿ ಸೇರಿದ್ದ ದಿನವೇ ಸರ್ವೆಯನ್ನ ನಡೆಸಲಾಗಿತ್ತು. ಸರ್ವೆಯಲ್ಲಿ ರಾಜ್ಯದ ನಾನಾ ಭಾಗಗಳ ಮತದಾರರು ಜನಾಭಿಪ್ರಾಯದಲ್ಲಿ ಭಾಗಿಯಾಗಿ ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಕೈ ಹಿಡಿದ ಶೆಟ್ಟರ್ ನಿರ್ಧಾರ ಸರಿ ಇದೆಯಾ ಎಂದು ಪ್ರಶ್ನೆ ಕೇಳಲಾಗಿತ್ತು. ನಿರ್ಧಾರ ಸರಿ ಇದೆ.., ನಿರ್ಧಾರ ಸರಿಯಿಲ್ಲ ಹಾಗೆನೇ ಗೊತ್ತಿಲ್ಲ ಎಂಬ ಆಪ್ಷನ್ ನೀಡಲಾಗಿತ್ತು.
ರಾಜ್ಯದ ಮೂಲೆ ಮೂಲೆಗಳಿಂದ ಜನತೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್ ನಿರ್ಧಾರ ಸರಿಯಿದೆ ಎಂದು ಶೇಕಡಾ 65 ರಷ್ಟು ಮಂದಿ ಅಭಿಪ್ರಾಯ ಕೊಟ್ಟಿದ್ರೆ ನಿರ್ಧಾರ ಸರಿಯಿಲ್ಲ ಅಂತ ಶೇಕಡಾ 26 ರಷ್ಟು ಮಂದಿ ತಮ್ಮ ಮನದ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗೆನೇ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡೊದಿಲ್ಲ ಎಂದು ಶೇಕಡಾ 9 ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಸಿಗದಿದ್ದಕ್ಕೆ ಬೇಸರಗೊಂಡು ಬಿಜೆಪಿ ಬಿಟ್ಟು ದಿಢೀರ್ ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಇದೀಗ ಮತ್ತೆ ಮಾತೃ ಪಕ್ಷಕ್ಕೆ ಬಂದಿದ್ದಾರೆ. ಶೆಟ್ಟರ್ ಕೇವಲ ಅಧಿಕಾರಕ್ಕಾಗಿ ಪಕ್ಷಾಂತರ ಮಾಡ್ತಿದ್ದಾರೆ ಅನ್ನೋ ಆರೋಪಗಳೂ ಕೇಳಿ ಬರುತ್ತಿವೆ. ಶೆಟ್ಟರ್ ನಿರ್ಧಾರ ಸರಿಯಿಲ್ಲ ಅಂತ ಶೇಕಡಾ 26 ರಷ್ಟು ಮಂದಿ ಬೇಸರ ವ್ಯಕಪಡಿಸಿದ್ದಾರೆ. ಲೋಕ ಸಮರದಲ್ಲಿ ಇದು ಬಿಜೆಪಿಗೆ ಅಥವಾ ಶೆಟ್ಟರ್ ಗೆ ಹಿನ್ನಡೆಯಾಗುತ್ತೋ ಇಲ್ಲ ವರದಾನವಾಗುತ್ತೋ ಕಾದು ನೋಡಬೇಕು.