ಬೆಂಗಳೂರು, (www.thenewzmirror.com);
ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಚುನಾವಣೆ ನಡೆಯಲಿದೆ. ಮತದಾನ ಪ್ರತಿಯೊಬ್ಬರ ಹಕ್ಕು ಹೀಗಿದ್ದರೂ ಬಹುತೇಕರು ಮತದಾನದಿಂದ ದೂರ ಉಳಿಯುತ್ತಾರೆ. ಹೀಗಾಗಿ KSRTC ಮತದಾನ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನ ಮಾಡುತ್ತಿದೆ.
KSRTC ತನ್ನ ಟಿಕೆಟ್ ನಲ್ಲಿ ಮತದಾನ ನಮ್ಮ ಹಕ್ಕು ಕಡ್ಡಾಯವಾಗಿ ಮತದಾನ ಮಾಡಿ ಅಂತ ಪ್ರಿಂಟ್ ಮಾಡಿಸಿದೆ. ಚುನಾವಣೆ ಮುಗಿಯುವ ವರೆಗೂ ಈ ರೀತಿ ಜಾಗೃತಿ ಅಭಿಯಾನ ಇರಲಿದೆ ಎಂದು KSRTC ತಿಳಿಸಿದೆ.
ಟಿಕೆಟ್ ನಲ್ಲಿ ಮತದಾನದ ಜಾಗೃತಿ
ಪ್ರತಿ ಟಿಕೆಟ್ ಕೊನೆಯಲ್ಲಿ ಕನ್ನಡದ ಅಕ್ಷರದಲ್ಲಿ ಮೇ.10ರಂದು ಮತದಾನ ಮಾಡಲು ಮರೆಯದಿರಿ, ಮತದಾನ ನಿಮ್ಮ ಹಕ್ಕು ಎಂಬ ಸಂದೇಶವನ್ನು ಮುದ್ರಿಸಲಾಗಿದ್ದು, ಈ ಮೂಲಕ ಕೆಎಸ್‌ಆರ್‌ಟಿಸಿಯಲ್ಲಿ ಪ್ರತಿದಿನ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೆಎಸ್ಆರ್’ಟಿಸಿ ಮಾಡುತ್ತಿದೆ.
ಕೆಸ್ಸಾರ್ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ
ಸದ್ಯ ಪ್ರತಿ ದಿನ ಕೆಎಸ್‌ಆರ್‌ಟಿಸಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ನಾವು ನಮ್ಮ ಪ್ರಯಾಣಿಕರಲ್ಲಿ ಮತದಾನದ ಮಹತ್ವದ ಬಗ್ಗೆ
ಅರಿವು ಮೂಡಿಸುತ್ತಿರೋದು ಹೆಮ್ಮೆಯ ವಿಚಾರ ಎಂದು ಹೇಳುತ್ತಾರೆ KSRTC ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್. ಲತಾ.
ಈ ಹಿಂದೆಯೂ ಜಾಗೃತಿ ಮೂಡಿಸಿದ್ದ KSRTC
ಕಳೆದ ಲೋಕಸಭಾ ಚುನಾವಣೆಯಲ್ಲೂ ಸಾರಿಗೆ ನಿಗಮವು ಚುನಾವಣೆ ಮತ್ತು ಮತದಾನದ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು.