ಬೆಂಗಳೂರು, (www.thenewzmirror.com);
ಕರ್ನಾಟಕದ 31 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ 2 ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಹಾಗಿದ್ರೆ ಇವರಿಬ್ಬರ ಜತೆಗೆ ಸಚಿವರಾಗುವವರು ಯಾರು.? ಎಷ್ಟು ಶಾಸಕರಿಗೆ ಮೊದಲ ಸಂಪುಟದಲ್ಲಿ ಸ್ಥಾನ ಸಿಗುತ್ತೆ ಅನ್ನೋ ಪ್ರಶ್ನೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ.
ಸಿಎಂ ಹಾಗೂ ಡಿಸಿಎಂ ಜತೆಗೆ 8 ಮಂದಿ ಶಾಸಕರು ಸಚಿವರಾಗಿ 12.30 ಕ್ಕೆ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಲ್ಲಿದೆ ನೂತನ ಸಚಿವರ ಪಟ್ಟಿ
– ಡಾ.ಜಿ.ಪರಮೇಶ್ವರ್
– ಕೆ.ಹೆಚ್. ಮುನಿಯಪ್ಪ
– ಕೆ.ಜೆ. ಜಾರ್ಜ್
– ಎಂ.ಬಿ.ಪಾಟೀಲ್
– ಸತೀಶ್ ಜಾರಕಿಹೊಳಿ
– ಪ್ರಿಯಾಂಕ್ ಖರ್ಗೆ
– ರಾಮಲಿಂಗ ರೆಡ್ಡಿ
– ಜಮೀರ್ ಅಹ್ಮದ್ ಖಾನ್