ಬೆಂಗಳೂರು,(www.thenewzmirror.com);
ಇಂದು ಕೃಷ್ಣ ಜನ್ಮಾಷ್ಟಮಿ. ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನಿಸಿದ್ದಾನೆ. ಅಷ್ಟಮಿಯ ಮಧ್ಯರಾತ್ರಿ ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಕೃಷ್ಣ ಹುಟ್ಟಿದ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಿಂದು ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ.
ಇದೇ ವೇಳೆ ಮನೆಗಳಲ್ಲಿ ತಮ್ಮ ಪುಟಾಣಿ, ಮುದ್ದು ಕಂದಮ್ಮಗಳಿಗೆ ಶ್ರೀಕೃಷ್ಣನ ವೇಷವನ್ನು ಹಾಕಿ ಸಂಭ್ರಮಿಸುವ ಪರಿಪಾಠವೂ ಬೆಳೆದುಬಂದಿದೆ. ಈ ಸನ್ನಿವೇಶದಲ್ಲಿ ನಿಮ್ಮ ನ್ಯೂಝ್ ಮಿರರ್ ಒಂದು ಸ್ಪರ್ಧೆಯನ್ನ ಏರ್ಪಡಿಸಿದೆ.
ನಿಮ್ಮ ಮಕ್ಕಳನ್ನ ಕೃಷ್ಣನ ವೇಷದಲ್ಲಿ ನೋಡಿ ಖುಷಿ ಪಡುವುದರ ಜೊತೆಗೆ ಬಹುಮಾನ ಕೂಡ ಗೆಲ್ಲಬೇಕು ಅಂದ್ರೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ.
ನೀವು ನಿಮ್ಮ ಮಕ್ಕಳಿಗೆ ಕೃಷ್ಣ ಮತ್ತು ರಾಧೆಯ ವೇಷ ಹಾಕಬೇಕು ಅನ್ಕೊಂಡ್ ಇದ್ದೀರಾ? ನೀವು ನಿಮ್ಮ ಮಕ್ಕಳನ್ನ ಮುದ್ದಾದ ಕೃಷ್ಣನ ವೇಷದಲ್ಲಿ ನೋಡಿ, ಬಹುಮಾನ ಗೆಲ್ಲಬಹುದು. ಇಂಥ ವೇದಿಕೆಯನ್ನ ನಮ್ಮ ಓದುಗರಿಗೆ ಕಲ್ಪಿಸಲಾಗಿದ್ದು, ನಿಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಒಂದು ಚೆಂದದ ಫೋಟೋ ಕಳಿಸಿ. ಅದೃಷ್ಟಶಾಲಿ ಮಕ್ಕಳಿಗೆ ಸಿಗಲಿದೆ ಬಹುಮಾನ..!
ನಿಮ್ಮ ಮಗುವಿಗೆ ಶ್ರೀಕೃಷ್ಣನ ವೇಷ ಹಾಕಿ ಒಂದು ಚೆಂದದ ಭಂಗಿಯಲ್ಲಿ ಫೋಟೊ ತೆಗೆದು ನಮಗೆ ಕಳುಹಿಸಿ. ನಮ್ಮ ವೆಬ್ ಸೈಟ್ ನಲ್ಲಿ ಆ ಫೋಟೋ ಪ್ರಕಟಿಸುವ ಜತೆಗೆ ಅದೃಷ್ಟಶಾಲಿ ಮಗುವಿಗೆ ಬಹುಮಾನವೂ ಸಿಗಲಿದೆ. ಇದರ ಜತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಸರ್ಟಿಫಿಕೇಟ್ ಕೂಡ ನೀಡಲಾಗುತ್ತೆ.
ನೀವೇನು ಮಾಡಬೇಕು..?
ನಿಮ್ಮ ಮಗು 1ರಿಂದ 7 ವರ್ಷದೊಳಗಿರಬೇಕು. ಶ್ರೀಕೃಷ್ಣನ ವೇಷ ಧರಿಸಿ ಮುದ್ದಾದ ಫೋಟೋ ತೆಗೆದು 8105669066 ನಂಬರ್ ಗೆ ಫೋಟೋ ಕಳುಹಿಸಿ. ಇದರ ಜತೆಗೆ ಮಗುವಿನ ಹೆಸರು ಹಾಗೂ ವಿವರವನ್ನೂ ಕಳುಹಿಸಿ. ಫೋಟೋ ಕಳುಹಿಸಲು ಕೊನೆಯ ದಿನ ಆಗಸ್ಟ್ 31.