ಬೆಂಗಳೂರು, (www.thenewzmirror.com) ;
ಸಾರಿಗೆ ನಿಗಮದಲ್ಲಿ ನ್ಯಾಯ ಅನ್ನೋದೇ ಮರಿಚಿಕೆ ಆಗಿದ್ಯಾ…? ಸಣ್ಣ ಪುಟ್ಟ ವಿಚಾರಕ್ಕೂ ನೊಟೀಸ್ ನೀಡುವ ಕೆಲ್ಸ ಅಧಿಕಾರಿಗಳಿಂದ ಆಗ್ತಿದೆ. ವಿನಾಕಾರಣ ಚೆಕಿಂಗ್ ಅಧಿಕಾರಿಗಳಿಂದ ಕಿರುಕುಳ ಆಗುತ್ತಿದೆ ಅನ್ನುವ ಉದಾಹರಣೆಗಳು ಪದೇ ಪದೇ ಸಾಬೀತಾಗ್ತಿದೆ..
ಅದ್ರಲ್ಲೂ 2021 ರ ಏಪ್ರಿಲ್ ನಲ್ಲಿ ಸಾರಿಗೆ ನೌಕರರ ಮುಷ್ಕರ ನಡೆದ ಮೇಲಂತೂ ಒಂದಲ್ಲಾ ಒಂದು ವಿಚಾರಕ್ಕೆ ಕಿರುಕುಳ ನೀಡಲಾಗುತ್ತಿದೆ. ನೌಕರರು ಕುಂತ್ರೂ ತಪ್ಪು.., ನಿಂತ್ರೂ ತಪ್ಪು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸೂಕ್ತ ಉದಾಹರಣೆಗಳು ದಿ ನ್ಯೂಝ್ ಮಿರರ್ ಗೆ ಸಿಕ್ಕಿದೆ.
ಹೀಗಾಗಿ ಆಡಳಿತ ಮಂಡಳಿಯ ವರ್ತನೆಯನ್ನ ಪ್ರಶ್ನೆ ಮಾಡುವ ಶ್ರಮಿಕ ವರ್ಗಕ್ಕೆ ನೊಟೀಸ್ ಎನ್ನುವ ಅಸ್ತ್ರ ಉಪಯೋಗಿಸಿ ಅದನ್ನ ಹತ್ತಿಕ್ಕೋ ಕೆಲ್ಸ ಮಾಡಲಾಗುತ್ತಿದೆ.
ವಿಕಲ ಚೇತನರು ಬಸ್ಸಿನಲ್ಲಿ ಒಂದು ಹಲಸಿನ ಹಣ್ಣನ್ನು ತೆಗೆದುಕೊಂಡು ಹೋಗ್ತಿದ್ರು. ಅಉದ ಹೆಚ್ಚೆಂದ್ರೆ ಒಂದೂವರೆಯಿಂದ 2 ಕೆಜಿಯಷ್ಟು ತೂಕವಿತ್ತು. ಹೀಗಾಗಿ ಕಂಡಕ್ಟರ್ ಕೇವಲ ಪ್ರಯಾಣಿಕರಿಗೆ ಒಂದು ಟಿಕೆಟ್ ಕೊಟ್ಟು ಸುಮ್ಮನಾಗಿದ್ದಾರೆ.
ಇದಕ್ಕಿದ್ದ ಹಾಗೆ ಚೆಕಿಂಗ್ ಆಫೀಸರ್ ಬಸ್ ಹತ್ತಿದ್ದೇ ತಡ ನೋಡಿ.., ಎಲ್ಲರ ಟಿಕೆಟ್ ಪರಿಶೀಲನೆ ನಡೆಸಿದ್ರು. ಎಲ್ಲವೂ ಸರಿಯಾಗೇ ಇತ್ತು.., ಪಾಪ ಬಸ್ ನ ಕೊನೆಯ ಸೀಟಿನಲ್ಲಿ ಬಿಳಿ ಚೀಲದ ಒಂದು ಲಗೇಜ್ ಇಟ್ಟುಕೊಂಡಿದ್ರು. ಇದನ್ನ ಕಂಡ ಆ ಚೆಕಿಂಗ್ ಆಫೀಸರ್ ಇದೇನಿದು ಅಂತ ಕೇಳಿದ್ದಾರೆ. ಅದಕ್ಕೆ ವಿಕಲಚೇತನ ಪ್ರಯಾಣಿಕ ಸರ್ ಇದು ಹಲಸಿನ ಹಣ್ಣು ಅಂತ ಹೇಳಿದ್ದಾರೆ.., ಅದಕ್ಕೆಲ್ಲಪ್ಪ ಟಿಕೆಟ್ ತಗೊಂಡಿದ್ದಿಯಾ ಟಿಕೆಟ್ ಕೊಡು ಅಂತ ಕೇಳಿದ್ದಾರೆ.
ಅರೆ ಒಂದೂವೆ ಕೆಜಿ ಹಲಸಿನ ಹಣ್ಣಿಗೂ ಟಿಕೆಟ್ ತಗೋಬೇಕಾ ಅಂತ ಪ್ರಯಾಣಿಕ್ರ. ಅದಕ್ಕೂ ಟಿಕೆಟ್ ಕೊಡಬೇಕಾ ಅಂತ ಕಂಡಕ್ಟರ್ ಕೇಳಿದ್ದಾರೆ. ಇದ್ಯಾವುದನ್ನೂ ಲೆಕ್ಕಿಸದೇ ಚೆಕಿಂಗ್ ಆಫೀಸರ್ ಹಲಸಿನ ಹಣ್ಣಿಗೆ ಟಿಕೆಟ್ ಕೊಟ್ಟಿಲ್ಲ ಕಂಡಕ್ಟರ್ ಗೆ ನೊಟೀಸ್ ಕೊಟ್ಟು ಹೋಗಿದ್ದಾರೆ.
ನಮ್ಮ ಬೇಡಿಕೆಗಾಗಿ ನಾವು ಹೋರಾಟ ಮಾಡಿದಾಗಿನಿಂದ ಇಂಥ ಕಿರುಕುಳ ನೀಡಲಾಗುತ್ತಿದೆ. ಇಂಥ ಕಿರುಕುಳ ನೀಡುವುದಕ್ಕೆ ಬ್ರೇಕ್ ಹಾಕಬೇಕು ಹಾಗೆನೇ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಆನಂದ್, CITU ಸಂಘಟನೆ ಮುಖಂಡ
ಹಾಗಿದ್ರೆ ನಿಯಮ ಏನು ಹೇಳುತ್ತೆ ಗೊತ್ತಾ..?
ಒಬ್ಬ ಪ್ರಯಾಣಿಕ 7 ಕೆಜಿ ಹಾಸಿಗೆ,5 ಕೆಜಿ ಹಣ್ಣಿನ ಬುಟ್ಟಿ,9 ಕೆಜಿ ತೂಕದ ಹಣ್ಣುಗಳು,12 ಕೆಜಿ ಸೂಟ್ ಕೇಸ್ ಗಳನ್ನೊಳಗೊಂಡಂತೆ ಒಟ್ಟು 33 ಕೆಜಿ ಗಾತ್ರದ ವಸ್ತುಗಳನ್ನು ತಮ್ ಜತೆ ತಎಗೆದುಕೊಂಡು ಹೋಗಬಹುದು.., ಹೀಗಿದ್ರೂ ನಿಯಮದ ಜ್ಞಾನವೇ ಇಲ್ಲದೆ ಚೆಕಿಂಗ್ ಆಫೀಸರ್ ನೊಟೀಸ್ ಕೊಟ್ಟಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.