KSRTC ಯಲ್ಲಿ ಆಗುತ್ತೆ ಉಳಿದ ಮೂರಕ್ಕೆ ಯಾಕೆ ಆಗೋದಿಲ್ಲ..?

ಬೆಂಗಳೂರು, (www.thenewzmirror.com ):

ದಸರಾ ಹಬ್ಬದ ಪ್ರಯುಕ್ತ KSRTC ತನ್ನೆಲ್ಲಾ ನೌಕರಿಗೆ ತಿಂಗಳ ಮೊದಲ ತಾರೀಖಿನಂದು ವೇತನ ಹಾಕಿದೆ. ಮೋಸ್ಟ್ಲಿ KSRTC ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಂತ ಅಂತ ಅನ್ಸುತ್ತೆ ಹೀಗೆ ವೇತನ ಆಗ್ತಿರೋದು..,

RELATED POSTS

KSRTC ಎಂಡಿ ಆಗಿ ಬಂದಿರೋ ಅನ್ಬು ಕುಮಾರ್ ಇಂಥ ಪ್ರಯತ್ನ ಮಾಡಿದ್ದು, ಮೊದಲ ಯತ್ನದಲ್ಲೇ ಸಫಲರಾಗಿದ್ದಾರೆ.., KSRTCಯಲ್ಲಿ ಆಗ್ತಿದೆ ಆದರೆ ಉಳಿದ ನಿಗಮಗಳಲ್ಲಿ ಯಾಕೆ ಆಗ್ತಿಲ್ಲ ಅನ್ನೋ ಪ್ರಶ್ನೆ ಇದೀಗ ನೌಕರರನ್ನ ಕಾಡ್ತಿದೆ.

ಕಳೆದ‌ 65 ವರ್ಷಗಳ KSRTC ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಾಲಕ, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಸೇರಿ, ನಿಗಮದ ಸಮಸ್ತ 36000 ಸಿಬ್ಬಂದಿ ವೇತನ ತಿಂಗಳ ಒಂದನೇ ತಾರೀಖಿನಂದು ಹಾಕಲಾಗಿದೆ. ಇದು ಸಂತಸದ ವಿಚಾರವೇ ಆದ್ರೆ ಮತ್ತದೇ ಕಟ್ಟ ಕಡೆಗೆ ಕಾಡುವ ಪ್ರಶ್ನೆ ಉಳಿದ ನಿಗಮಗಳಲ್ಲಿ ಯಾಕೆ ಆಗ್ತಿಲ್ಲ ಅನ್ನೋದು..,

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಹತ್ರತ್ರ ಒಂದೂವರೆ ಲಕ್ಷ ನೌಕರರಿದ್ದಾರೆ.., ನಾಲ್ಕೂ ನಿಗಮಗಳು ನಷ್ಟದಲ್ಲಿವೆ.., ನಿಗಮದ ಏಳಿಗೆಗಾಗಿ ಹಗಲೂ ರಾತ್ರಿ ಎನ್ನದೇ ದುಡಿಯೋ ಶ್ರಮ ಜೀವಿಗಳಿಗೆ ಪ್ರತಿ ತಿಂಗಳೂ ವೇತನ ಹಾಕದೇ ಆಡಳಿತ ವರ್ಗ ಮೀನಾಮೇಷ ಮಾಡ್ತಿದೆ.. ಅದ್ರಲ್ಲೂ ಹಬ್ಬ ಹರಿದಿನ ಅಂತ ಬಂದ್ರೆ ಮುಗಿದೇ ಹೋಯ್ತು. ನೌಕರರ ಪಾಡು ಹಾಗೂ ಕಷ್ಟ ಕೇಳೋರೂ ಯಾರೂ ಇಲ್ಲ.

ಎಸಿ ರೂಮಿನಲ್ಲಿ ಕೂತು ಪ್ರತಿ ತಿಂಗಳೂ ವೇತನ ಏಣಿಸಿಕೊಳ್ತಿರೋ ಅಧಿಕಾರಿಗಳ ವರ್ಗಕ್ಕೆ ನೌಕರರ ಕಷ್ಟ ಯಾವತ್ತೂ ಗೊತ್ತಾಗೋದಿಲ್ಲ.. ಈ ನಿಟ್ಟಿನಲ್ಲಿ KSRTC ಎಂಡಿ ಅನ್ಬು ಕುಮಾರ್ ತನ್ನ ನೌಕರರ ಸಂಕಷ್ಟಗಳಿಗೆ ಸ್ಪಂದನೆ ಮಾಡಿ ವೇತನ ಹಾಕಿಸಿದ್ದಾರೆ.., ಹಾಗಂತ KSRTC ಏನು ಲಾಭದಲ್ಲಿ ಇಲ್ಲ.., KSRTCನೂ ಕೋಟ್ಯಾಂತರ ರೂ ನಷ್ಟದಲ್ಲಿದೆ.

KSRTC ಮಾಡಿರೋ ಈ ಒಂದು ಕಾರ್ಯಕ್ಕೆ ನಿಗಮದ 36000 ನೌಕಕರು ವಿಜಯದಶಮಿಯನ್ನ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡ್ತಾರೆ.., ಉಳಿದ ಮೂರು ಕಾರ್ಪೋರೇಷನ್ ನೌಕರರು ಮಾತ್ರ ಹೊಟ್ಟೆ ತಣ್ಣೀರು ಬಟ್ಟೆಯನ್ನ ಹಾಕಿಕೊಂಡು ಹಬ್ಬವನ್ನ ಮಾಡ್ಬೇಕಾಗಿದೆ.

ಇಷ್ಟು ವರ್ಷ ವೇತನ ಹೇಗೆ ಆಗುತ್ತಿತ್ತು..?

ಪ್ರತಿ ತಿಂಗಳ ಒಂದನೇ ತಾರೀಖಿನಂದು ಅಧಿಕಾರಿಗಳ ವರ್ಗಕ್ಕೆ ವೇತನ ಆಗ್ತಿತ್ತು.., ಅದಾದ ನಂತರ ಅಂದ್ರೆ ತಾಂತ್ರಿಕ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 4 ರಂದು ವೇತನ ಆಗ್ತಿತ್ತು. ಇನ್ನು ಬಿಸಿಲಿ ಮಳೆ ಇದ್ಯಾವೂದನ್ನೂ ಲೆಕ್ಕಿಸದೇ ಕೆಲ್ಸ ಮಾಡ್ತಿದ್ದ ಚಾಲಕ್ರು ಹಾಗೂ ನಿರ್ವಾಹಕರಿಗೆ ಪ್ರತಿ ತಿಂಗಳ 7 ರಂದು ವೇತನ ಆಗ್ತಿತ್ತು.

ಸರಿಯಾದ ಸಮಯಕ್ಕೆ ವೇತನ ಆಗದೇ ಜೀವನ, ಕುಟುಂಬ ನಡೆಸೋಕೆ ಆಗದೇ ಅದೆಷ್ಟೋ ಸಿಬ್ಬಂದಿ ಆತ್ಮಹತ್ಯೆಯ ದಾರಿಯನ್ನೂ ಹಿಡಿದಿದ್ದಾರೆ. ನಷ್ಟದಲ್ಲಿರೋ KSRTC ಒಂದನೇ ತಾರೀಖು ವೇತನ ಹಾಕಿರುವಾಗ ಬಿಎಂಟಿಸಿ ಸೇರಿದಂತೆ ಉಳಿದ ನಿಗಮಗಳೂ ಇದೇ ಪಾಲಿಸಿ ಅನುಸರಿಸಿದ್ರೆ ನೌಕರರು ನೆಮ್ಮದಿಯ ಜೀವನ ನಡೆಸ್ತಾರೆ ಅದಕ್ಕೆ ಆಯಾ ನಿಗಮದ ಎಂಡಿಗಳು ಮನಸ್ಸು ಮಾಡ್ಬೇಕಿದೆ. ಅನ್ಬು ಕುಮಾರ್ ಸಾಹೇಬ್ರು ಇತರ ಮೂರು ನಿಗಮದ ಎಂಡಿಗಳಿಗೆ ಮಾದರಿಯಾಗಿ ಅವ್ರನ್ನ ಅನುಕರಣೆ ಮಾಡ್ಲಿ ಅನ್ನೋದೇ ನಮ್ಮ ಆಶಯ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist