Thursday, December 7, 2023
  • Login
The Newz Mirror
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
The Newz Mirror
No Result
View All Result
  TRENDING
Cricket News | ಧೋನಿ ಮಗಳ ಶಾಲೆಯ ಫೀಸ್ ಎಷ್ಟು ಗೊತ್ತಾ.? December 7, 2023
ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ November 29, 2023
ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video November 28, 2023
KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?! November 28, 2023
ಹಿರಿಯ ನಟಿ ಲೀಲಾವತಿಗೆ  ಡಿಕೆಶಿ ಕೈ ಮುಗಿದು ಹೇಳಿದ್ದೇನು.? With video November 28, 2023
Next
Prev
November 14, 2022
editorbyeditor

KSRTC ಯಿಂದ ದೇಶದಲ್ಲೇ ಮತ್ತೊಂದು ಮಹತ್ವದ ಹೆಜ್ಜೆ

KSRTC ಯಿಂದ ದೇಶದಲ್ಲೇ ಮತ್ತೊಂದು ಮಹತ್ವದ ಹೆಜ್ಜೆ
0
SHARES
143
VIEWS
Share on WhatsAppShare on TwitterShare on Facebook

ಬೆಂಗಳೂರು,(wwwthenewzmirror.com) :

ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕೆ. ಎಸ್ ಆರ್ ಟಿ ಸಿ  ಸಿಬ್ಬಂದಿಗಳಿಗೆ  ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ ಮಾಡಿದೆ. ಆ ಮೂಲಕ ದೇಶದಲ್ಲೇ ಇಂಥ ಮಹಾನ್ ತೀರ್ಮಾನ ಕೈಗೊಂಡ ಮೊದಲ ನಿಗಮ ಅನ್ನೋ ಖ್ಯಾತಿಗೆ ಒಳಗಾಗಿದೆ.

RELATED POSTS

ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ

ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video

ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ  ಅವರಿಗೆ ರೂ. 50 ಲಕ್ಷಗಳ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತಂದಿರುತ್ತದೆ.

ಇದರ ಮುಂದುವರಿದ ಭಾಗವಾಗಿ, ಇಂದು ನಿಗಮವು  ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ರವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು , ಅದರಂತೆ  ಸಿಬ್ಬಂದಿಗಳಿಗೆ ರೂ.50 ಲಕ್ಷದವರೆಗೆ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿರುತ್ತದೆ.

ಈ ವಿಮಾ ಯೋಜನೆಗೆ ಸಿಬ್ಬಂದಿಗಳು ಮಾಹೆಯಾನ ರೂ.62.50 + ಜಿ.ಎಸ್.ಟಿ  ಸೇರಿದಂತೆ (ವಾರ್ಷಿಕ ರೂ.885/- ಪ್ರೀಮಿಯಂ) ಪಾವತಿಸಬೇಕಾಗುತ್ತದೆ.

ಈ ವೇಳೆ ಮಾತನಾಡಿದ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ, ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ  ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆಯಾಗಿದ್ದು, ಅಪಘಾತ (On duty ಮತ್ತು Off duty ಒಳಗೊಂಡಂತೆ ನೀಡಲಾಗುವ) ವಿಮಾ ಯೋಜನೆಯಾಗಿರುವುದು ಸಿಬ್ಬಂದಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆಯೆಂದು ಸಂತಸ ವ್ಯಕ್ತಪಡಿಸಿದರು.

ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ. 50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ. ಅಪಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗ ವೈಕಲ್ಯಕ್ಕೆ ತುತ್ತಾದಲ್ಲಿ ಸಹ ರೂ. 50 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ.

ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ  ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ (On duty and Off duty) ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ. ಒಂದು ವೇಳೆ ಸಿಬ್ಬಂದಿಯು ಅಪಘಾತಕ್ಕೆ ಒಳಗಾಗಿ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ  ನಿರ್ವಹಿಸಲು ಅಸಮರ್ಥನಾದ  ಪಕ್ಷದಲ್ಲಿ, ಆತನು ಚೇತರಿಸಿಕೊಳ್ಳುವವರೆಗೆ, ಅವನಿಗೆ ವಿಮಾ ಮಾಡಲಾದ ರೂ.50 ಲಕ್ಷ ಮೊತ್ತದ ಶೇಕಡಾ ಒಂದರಷ್ಟು ಮೊತ್ತವನ್ನು ಪ್ರತಿವಾರ ರೂ.5000 ಕ್ಕೆ ಹೆಚ್ಚದಂತೆ ಅಥವಾ ಅವರ ಮಾಸಿಕ ಸಂಬಳದ  ಶೇಕಡಾ 25ರಷ್ಟನ್ನು,ಯಾವುದು ಕಡಿಮೆಯೋ ಅದನ್ನು ಸಿಬ್ಬಂದಿಗೆ ವಿಮಾ ಸಂಸ್ಥೆಯು ನೀಡುವುದು.

ಈ ಎರಡು ವಿಮಾ ಯೋಜನೆಗಳಿಂದ ನಿಗಮವು ತನ್ನ ಸಿಬ್ಬಂದಿಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತಂದಂತಾಗಿದೆ. ಇಲ್ಲಿಯವರೆಗೂ ನಿಗಮದ ಸಿಬ್ಬಂದಿಗಳಿಗೆ ಯಾವುದೇ ಅಪಘಾತ  ವಿಮಾ ಯೋಜನೆಯ ಸೌಲಭ್ಯವಿರಲಿಲ್ಲ. ಸಿಬ್ಬಂದಿಗಳು ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ  ಅವರ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಇಂದು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ರವರೊಂದಿಗೆ  ಮಾಡಿಕೊಂಡಿರುವುದು ಹಾಗೂ ಕೆಲ ದಿನಗಳಷ್ಟು ಹಿಂದೆಯಷ್ಟೇ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾರವರೊಡನೆ ಸಹಿ ಹಾಕಿರುವ ಒಡಂಬಂಡಿಕೆಯು ಕಾರ್ಮಿಕರ ಹಿತ ಕಾಪಾಡುವಲ್ಲಿ ಚರಿತಾರ್ಹವಾದ ಕ್ಷಣಕ್ಕೆ ಸಾಕ್ಷಿಯಾಗಲಿದೆ.

Tags: #anbukumar#bjp#ias#sriramulu1 ಕೋಟಿ ಅಪಘಾತದ ವಿಮೆksrtcKsrtc ಯಿಂದ ಮತ್ತೊಂದು ಹೆಜ್ಜೆthenewzmirror
Join Our Whatsapp Group

Read More

ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ

November 29, 2023 No Comments
Read More »

ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video

November 28, 2023 No Comments
Read More »

KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?!

November 28, 2023 No Comments
Read More »

ಬಿಬಿಎಂಪಿ ಗುತ್ತಿಗೆದಾರ ಹಠಾತ್ ನಿಧನ

November 27, 2023 No Comments
Read More »

ಕಡಲೇಕಾಯಿ ಪ್ರಿಯರಿಗೆ ಗುಡ್ ನ್ಯೂಸ್ | ಡಿಸೆಂಬರ್ 2 ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆಗೆ ಸಿದ್ಧತೆ

November 27, 2023 No Comments
Read More »

Leave a Reply Cancel reply

Your email address will not be published. Required fields are marked *

Next Post
ಯಶಸ್ವಿಯಾಗಿ ನಡೆದ ಮಾಲಿನ್ಯ ನಿಯಂತ್ರಣ ಮಾಸ

ಯಶಸ್ವಿಯಾಗಿ ನಡೆದ ಮಾಲಿನ್ಯ ನಿಯಂತ್ರಣ ಮಾಸ

ಇರಬೇಕು ಇರಬೇಕು ಇದ್ದರೆ ಇಂಥ ಅಧಿಕಾರಿ…!

The Newz Mirror

  • The Newz Mirror

© 2021 The Newz Mirror - Copy Right Reserved The Newz Mirror.

No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ

© 2021 The Newz Mirror - Copy Right Reserved The Newz Mirror.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In